Site icon Vistara News

Assault Case: ಆಸ್ತಿಯಲ್ಲಿ ಭಾಗ ಬೇಕು ಎಂದವಳ ಅಟ್ಟಾಡಿಸಿ ಮಚ್ಚು ಬೀಸಿದ ಪತಿ

assault case in hasan

ಹಾಸನ: ಇಲ್ಲಿನ ಹೊಳೆನರಸೀಪುರ ತಾಲೂಕಿನ ತಿರುಮಲಾಪುರದಲ್ಲಿ ಪತಿಯೊಬ್ಬ ಪತ್ನಿಯನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ (Assault Case) ಮಾಡಿದ್ದಾನೆ. ಶ್ರೀನಿವಾಸ ಎಂಬಾತ ಪತ್ನಿ ಸವಿತಾ ಮೇಲೆ ಹಲ್ಲೆ ಮಾಡಿದವನು. ಪತ್ನಿ ಮೇಲೆ ಅಮಾನುಷವಾಗಿ ಹಲ್ಲೆ (Family dispute) ಮಾಡಿರುವ ವಿಡಿಯೊ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಪತಿಯಿಂದ ತಪ್ಪಿಸಿಕೊಂಡು ಓಡುತ್ತಿರುವ ಪತ್ನಿ ಸವಿತಾ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಶ್ರೀನಿವಾಸ ಪತ್ನಿ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ಸವಿತಾ ಸಹೋದರಿ ಅನಿತಾ ಎಂಬುವವರ ಕಾರಿನ ಗ್ಲಾಸ್‌ಗಳನ್ನು ಹೊಡೆದು ಪುಡಿ ಪುಡಿ ಮಾಡಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಇಬ್ಬರು ದೂರವಾಗಿದ್ದರು.

ಈ ಮಧ್ಯೆ ಆಸ್ತಿ ಭಾಗಕ್ಕಾಗಿ ಪತಿ ವಿರುದ್ಧ ಕೇಸ್ ದಾಖಲಿಸಿ ಸವಿತಾ ಕಾನೂನು ಹೋರಾಟ ಮಾಡುತ್ತಿದ್ದಳು. ಇದೇ ವಿಚಾರದಲ್ಲಿ ಶನಿವಾರ (ಜೂ.24) ಸಂಜೆ ಜಗಳ ತೆಗೆದು ಪತ್ನಿ ಸವಿತಾ ಮೇಲೆ ಅಟ್ಯಾಕ್ ಮಾಡಿದ್ದಾನೆ. ತಪ್ಪಿಸಿಕೊಂಡು ಓಡಿದರೂ ಬಿಡದೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ನಡುರಸ್ತೆಯಲ್ಲೇ ಪತ್ನಿ ಅಟ್ಟಾಡಿಸಿದ ಪತಿ

ಗಾಯಾಳು ಪತ್ನಿ ಸವಿತಾ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ. ಆರೋಪಿ ಪತಿ ಶ್ರೀನಿವಾಸ್‌ ಪರಾರಿ ಆಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

485ರೂ.ಗಾಗಿ ಕೊಲೆಯಾದ ಇಬ್ಬರು ಕಾವಲುಗಾರರು

ಮೈಸೂರು: ಕಳೆದ ಮೂರು ದಿನಗಳ ಹಿಂದೆ ಹುಣಸೂರಲ್ಲಿ (Hunsuru News) ನಡೆದಿದ್ದ ಭೀಕರ ಜೋಡಿ ಕೊಲೆ (Double Murder) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೇವಲ 485 ರೂಪಾಯಿಯಾಗಿ ಈ ಡಬಲ್​ ಮರ್ಡರ್​ ನಡೆದಿದೆ. ಒಬ್ಬ ಆರೋಪಿ ಅಭಿಷೇಕ್​ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಹುಣಸೂರು ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿರುವ ಮಿಸ್ಬಾ ಸಾಮಿಲ್‌ನಲ್ಲಿದ್ದ ಇಬ್ಬರು ಕಾವಲುಗಾರರಾದ ವೆಂಕಟೇಶ (75), ಷಣ್ಮುಗ (65) ಎಂಬುವರ ಹತ್ಯೆ ಮೂರು ದಿನಗಳ ಹಿಂದೆ ನಡೆದಿತ್ತು. ಇವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿತ್ತು (Murder Case). ಈ ಪ್ರಕರಣವನ್ನೀಗ ಪೊಲೀಸರು ಬೇಧಿಸಿದ್ದಾರೆ.

ಕೊಲೆ ಆರೋಪಿ ಅಭಿಷೇಕ್ ಸುಲಿಗೆ,​ ದರೋಡೆ, ಕಳ್ಳತನ, ವಸೂಲಿಯನ್ನೇ ಕಾಯಕ ಮಾಡಿಕೊಂಡಿದ್ದ. ಹಲವು ಕೇಸ್​ಗಳಲ್ಲಿ ಪೊಲೀಸರಿಗೆ ಬೇಕಾದವನು ಆಗಿದ್ದ. ಅವನಿಗೆ ಶೋಕಿಗಾಗಿ ಹಣ ಬೇಕಿತ್ತು. ನ್ಯಾಯವಾಗಿ ದುಡಿಯುವುದು ಗೊತ್ತಿಲ್ಲದ ಈತ ತನ್ನ ಸಹಚರರೊಂದಿಗೆ ಸೇರಿ ಕಳ್ಳತನದ ಪ್ಲ್ಯಾನ್ ಹಾಕಿದ್ದ. ಇಬ್ಬರು ವ್ಯಾಚ್​ಮ್ಯಾನ್​ಗಳಿದ್ದ ಸಾಮಿಲ್​​ಗೆ ನುಗ್ಗಿದ್ದರು. ಅಲ್ಲಿ ಹೋಗಿ ಅವರಿಬ್ಬರನ್ನೂ ಬೆದರಿಸಿ ಹಣ ಕೊಡುವಂತೆ ಹೇಳಿದ್ದಾರೆ. ಇಬ್ಬರ ಜೇಬನ್ನೂ ಹುಡುಕಿದಾಗ ಸಿಕ್ಕಿದ್ದು 485ರೂಪಾಯಿ. ಇದರಿಂದ ಕೋಪಗೊಂಡ ಅಭಿಷೇಕ್ ಮತ್ತು ಸಹಚರರು ಕಾವಲುಗಾರರನ್ನು ಕೊಂದು ಹಾಕಿದ್ದಾರೆ.

ಇದನ್ನೂ ಓದಿ: Road Accident: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ; ಕೊಪ್ಪಳದ ಇಬ್ಬರ ಸಾವು

ಈ ಮರದ ಮಿಲ್​ಗೆ ನಿಜವಾದ ಕಾವಲುಗಾರ ವೆಂಕಟೇಶ್​ ಆಗಿದ್ದ. ಷಣ್ಮುಗ ಬುದ್ಧಿಮಾಂದ್ಯನಾಗಿದ್ದು, ಸದಾ ವೆಂಕಟೇಶ್ ಜತೆಗೇ ಇರುತ್ತಿದ್ದ. ಅವನನ್ನೂ ವಾಚ್​ಮ್ಯಾನ್​ ಎಂದೇ ಪರಿಗಣಿಸಲಾಗಿತ್ತು. ಇವರಿಬ್ಬರೂ ಹತ್ಯೆಯಾಗಿದ್ದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದೀಗ ಆರೋಪಿ ಅಭಿಷೇಕ್​​ನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version