Site icon Vistara News

Ayyappa Devotees dead : ಮೂವರು ಅಯ್ಯಪ್ಪ ಭಕ್ತರು ನೀರುಪಾಲು; ಕಪಿಲೆಯಲ್ಲಿ ಘೋರ ದುರಂತ

Kapila river tragedy

ಮೈಸೂರು: ಶಬರಿಮಲೆಯ ಅಯ್ಯಪ್ಪ ಸ್ವಾಮಿ (Shabarimale Ayyappa swami) ದರ್ಶನಕ್ಕಾಗಿ ವ್ರತ ಹಿಡಿದು ಮಾಲಾಧಾರಿಗಳಾಗಿದ್ದ ಮೂವರು ಅಯ್ಯಪ್ಪ ಭಕ್ತರು (Ayyappa Devotees) ನದಿಯಲ್ಲಿ ನೀರುಪಾಲಾಗಿದ್ದಾರೆ (Three Ayyappa devotees dead).

ನಂಜನಗೂಡಿಗೆ ಹೆಜ್ಜಿಗೆ ಸೇತುವೆ ಬಳಿ ಕಪಿಲಾ ನದಿಯಲ್ಲಿ ಸ್ನಾನಕ್ಕೆ ಇಳಿದ ಮೂವರು ಅಯ್ಯಪ್ಪ ಮಾಲಧಾರಿಗಳು ಮೃತಪಟ್ಟಿದ್ದಾರೆ. ಒಟ್ಟು ಐವರು ಭಕ್ತರು ಐವರು ನದಿಗೆ ಇಳಿದು ಸ್ನಾನ ಮಾಡುತ್ತಿದ್ದರು. ಈ ವೇಳೆ ಮೂವರು ನೀರು ಪಾಲಾಗಿದ್ದಾರೆ. ಇಬ್ಬರನ್ನು ರಕ್ಷಿಸಲಾಗಿದೆ.

ಎಲ್ಲ ಅಯ್ಯಪ್ಪ ಭಕ್ತರು ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದವರಾಗಿದ್ದು, ಒಂದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ನಂಜನಗೂಡಿನಲ್ಲಿ ಕಪಿಲೆಯಲ್ಲಿ ಸ್ನಾನ ಮಾಡುವ ದುರಂತ ಸಂಭವಿಸಿದೆ. ನೀರುಪಾಲಾದ ಮೂವರಿಗಾಗಿ ಹುಡುಕಾಟ ನಡೆಯುತ್ತಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಧಾವಿಸಿದ್ದಾರೆ.

ತುಮಕೂರಿನ ಕೊರಟಗೆರೆಯ ಎಂಟು ಮಂದಿ ಜತೆಯಾಗಿ ಶಬರಿಮಲೆಗೆ ಹೋಗಿದ್ದರು. ಅಪ್ಪು (16), ರಾಕೇಶ್‌, ಗವಿರಂಗ, ರಾಮಕೃಷ್ಣ, ನಿಖಿತ್‌ಗೌಡ, ಮಾದೇಶ್, ಭುವನ್‌ಗೌಡ ಸೇರಿ ಎಲ್ಲರೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಕಪಿಲಾ ನದಿಗೆ ನೀರಿಗೆ ಇಳಿದಿದ್ದರು. ಆದರೆ, ಅಪ್ಪು, ರಾಕೇಶ್‌ ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗವಿ ರಂಗ ಎಂಬಾತನನ್ನು ರಕ್ಷಿಸಲಾಗಿದೆ. ಇನ್ನೊಬ್ಬ ನಾಪತ್ತೆಯಾಗಿದ್ದು ಹುಡುಕಾಟ ನಡೆದಿದೆ.

ಇದನ್ನೂ ಓದಿ: Building Collapse: ನಿರ್ಮಾಣ ಹಂತದ ಶಾಲೆ ಕಟ್ಟಡ ಕುಸಿತ, 2 ಕಾರ್ಮಿಕರು ಸಾವು, 16 ಮಂದಿಗೆ ಗಂಭೀರ ಗಾಯ

ಕೆರೆಯಲ್ಲಿ ತೇಲಿ ಬಂದ ಮೃತದೇಹಗಳು; ಮಕ್ಕಳೊಟ್ಟಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಅನುಮಾನಾಸ್ಪದವಾಗಿ ತಾಯಿ- ಇಬ್ಬರು ಹೆಣ್ಣುಮಕ್ಕಳ ಮೃತ ದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಕೆರೆಯಲ್ಲಿ (Dead Body Found) ಮೃತದೇಹಗಳು ಪತ್ತೆಯಾಗಿವೆ.

ಮಿಟ್ಟೇಮರಿ ಕೆರೆಯಲ್ಲಿ ಮೃತದೇಹಗಳು ತೇಲುತ್ತಿದ್ದವು. ಇದನ್ನೂ ಕಂಡೊಡನೆ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಮಿಸಿದ ಪೊಲೀಸರು ಕೆರೆಯಲ್ಲಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತಳನ್ನು ಯಗವಕೋಟೆ ನಿವಾಸಿ ರಾಧ (32) ಎಂದು ಗುರುತಿಸಲಾಗಿದೆ.

ಕೌಟುಂಬಿಕ ಕಲಹಕ್ಕೆ ಬೇಸತ್ತು ರಾಧ, ಪೂರ್ವಿತಾ (4) ಹಾಗು ಒಂದೂವರೆ ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಾಗೇಪಲ್ಲಿ ಮೂಲದ ರಾಧಳನ್ನು ಚಿಂತಾಮಣಿ ತಾಲೂಕಿನ ಯಗವಕೋಟೆಯ ಮಲ್ಲಿಕಾರ್ಜುನ ಎಂಬುವವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

ಸದ್ಯ ಪೊಲೀಸರು ಮೂರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಾಗೇಪಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಾಗೇಪಲ್ಲಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version