ಮಂಡ್ಯ: ಬೇಬಿ ಬೆಟ್ಟದ (Baby Hill) ಟ್ರಯಲ್ ಬ್ಲಾಸ್ಟಿಂಗ್‌ಗಾಗಿ ಬಂದಿದ್ದ ಜಾರ್ಖಂಡ್ ವಿಜ್ಞಾನಿಗಳನ್ನು ವಾಪಸ್ ಕಳಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಸರ್ಕಾರದ ಒಪ್ಪಿಗೆ ಪಡೆದು ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗುತ್ತಿದ್ದಂತೆ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿತ್ತು.
ಬ್ಲಾಸ್ಟಿಂಗ್ ಕೈ ಬಿಡುತ್ತಿದ್ದಂತೆ ಕೆಆರ್‌ಎಸ್ ಸಮೀಪದ ಕಟ್ಟೇರಿ ಬಳಿ ನಡೆಯುತ್ತಿದ್ದ ರೈತರು ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ. ದೂರವಾಣಿ ಮೂಲಕ ರೈತ ಸಂಘದ ಜಿಲ್ಲಾಧ್ಯಕ್ಷರಿಗೆ ಜಿಲ್ಲಾಧಿಕಾರಿ ಅಶ್ವಥಿ ಭರವಸೆ ನೀಡಿರುವುದಾಗಿ ಪ್ರತಿಭಟನಾಕಾರರು ಮಾಹಿತಿ ನೀಡಿದ್ದಾರೆ. ಆದರೆ, ವಿಜ್ಞಾನಿಗಳು ಸರ್ಕಾರಿ ಗೆಸ್ಟ್‌ಹೌಸ್‌ನಲ್ಲೇ ಇದ್ದಾರೆ ಎಂದು ಕೆಲವು ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿಭಟನೆ ಕೈಬಿಟ್ಟು 5 ನಿರ್ಣಯ ಕೈಗೊಂಡ ಹೋರಾಟಗಾರರು
1. ಜಿಲ್ಲಾಡಳಿತದ ನಿರ್ಧಾರ ಸ್ವಾಗತಾರ್ಹ, ಶಾಶ್ವತವಾಗಿ ಟ್ರಯಲ್ ಬ್ಲಾಸ್ಟ್‌ಗೆ ಬ್ರೇಕ್ ಹಾಕಬೇಕು
2. ಕೆಆರ್‌ಎಸ್ ಸುತ್ತಮುತ್ತ 20 ಕಿಮೀ ವ್ಯಾಪ್ತಿಯ ಶಾಶ್ವತ ಗಣಿಗಾರಿಕೆ ನಿಷೇಧ ಮಾಡಬೇಕು
3. ಶಾಶ್ವತ ಗಣಿಗಾರಿಕೆ ನಿಷೇಧಕ್ಕಾಗಿ ರಾಜ್ಯ ಮಟ್ಟದ ಚಳವಳಿಗೆ ನಿರ್ಧಾರ
4. ಸಾರ್ವಜನಿಕರಿಗೆ ಅರಿವು ಮೂಡಿಸಲು ಪರಿಣಿತರಿಂದ ಸೆಮಿನಾರ್ ಆಯೋಜನೆ
5. ಶಾಶ್ವತ ಗಣಿಗಾರಿಕೆ ನಿಷೇಧದಿಂದ ತೊಂದರೆಗೆ ಸಿಲುಕುವ ಕಾರ್ಮಿಕರಿಗೆ ಪರ್ಯಾಯ ಉದ್ಯೋಗಕ್ಕೆ ಒತ್ತಾಯ
ಇದನ್ನೂ ಓದಿ | Mandya Baby Hill | ಬೇಬಿ ಬೆಟ್ಟ ನಮ್ಮದು, ನಮ್ಮ ಪರ್ಮಿಷನ್ ಕೇಳಬೇಕಿತ್ತು ಎಂದ ಪ್ರಮೋದಾದೇವಿ