Site icon Vistara News

Doctor Death | ಲ್ಯಾಂಡ್‌ ಜಿಹಾದ್‌ಗೆ ಬಲಿಯಾದರೇ ಗಡಿನಾಡ ದಂತವೈದ್ಯ?

doctor death

ಮಂಗಳೂರು: ಗಡಿನಾಡಿನಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ʻಲ್ಯಾಂಡ್ ಜಿಹಾದ್‌ʼಗೆ ಗಡಿನಾಡ ದಂತ ವೈದ್ಯ, ಬದಿಯಡ್ಕದ ಡಾ.ಕೃಷ್ಣಮೂರ್ತಿ ಬಲಿಯಾದರೇ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಸಾರ್ವಜನಿಕ ಪ್ರತಿಭಟನೆ ನಡೆದಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ.

ಮಂಗಳೂರು ‌ಗಡಿ ಭಾಗದ ಕೇರಳದ ಕಾಸರಗೋಡು ‌ಜಿಲ್ಲೆಯ ಬದಿಯಡ್ಕದಲ್ಲಿ ಕಳೆದ 30 ವರ್ಷಗಳಿಂದ ದಂತ ವೈದ್ಯರಾಗಿ ಖ್ಯಾತಿ ಗಳಿಸಿದ್ದ ಡಾ.ಕೃಷ್ಣಮೂರ್ತಿ ಅವರು ನವೆಂಬರ್ 8ರಂದು ನಾಪತ್ತೆಯಾಗಿ ನ.10ರಂದು ಶವವಾಗಿ ಪತ್ತೆಯಾಗಿದ್ದರು. ಉಡುಪಿ ಜಿಲ್ಲೆ ಕುಂದಾಪುರದ ಹಟ್ಟಿಯಂಗಡಿ ಬಳಿ ರೈಲ್ವೇ ಹಳಿಯಲ್ಲಿ ಶವ ಪತ್ತೆಯಾಗಿತ್ತು.

ವೈದ್ಯರ ಸಾವಿನ ಹಿಂದೆ ಭೂ ಮಾಫಿಯಾ, ಭೂ ಜಿಹಾದ್‌ ಇದೆ ಎಂದು ವಿಶ್ವ ಹಿಂದೂ ಪರಿಷತ್ತು ಗಂಭೀರ ಆರೋಪ ಮಾಡಿದೆ. ಆರು ತಿಂಗಳಿನಿಂದ ಜಾಗದ ವಿಚಾರದಲ್ಲಿ ಲ್ಯಾಂಡ್ ಮಾಫಿಯಾ ಡಾ.ಕೃಷ್ಣಮೂರ್ತಿಯವರ ಬೆನ್ನು ಬಿದ್ದಿತ್ತು. ಜಾಗ ಖರೀದಿ ವಿಚಾರದಲ್ಲಿ ಡಾ.ಕೃಷ್ಣಮೂರ್ತಿಗೆ ಸ್ಥಳೀಯ ಕೆಲ ಮುಸ್ಲಿಮರು ಕಿರುಕುಳ ನೀಡುತ್ತಿದ್ದರೆಂಬ ಆರೋಪವಿತ್ತು. ನ.8ರಂದು ಬದಿಯಡ್ಕದ ತಮ್ಮ ಕ್ಲಿನಿಕ್‌ಗೆ ಡಾ.ಕೃಷ್ಣಮೂರ್ತಿ ಎಂದಿನಂತೆ ಬಂದಿದ್ದರು. ಈ ವೇಳೆ ಕ್ಲಿನಿಕ್‌ಗೆ ಬಂದಿದ್ದ ಮುಸ್ಲಿಂ ಯುವತಿ ಜೊತೆ ಅನುಚಿತವಾಗಿ ವರ್ತಿಸಿದರೆಂದು ಆರೋಪಿಸಿ, ಕೃಷ್ಣಮೂರ್ತಿಗೆ ಬೆದರಿಕೆ ಒಡ್ಡಿದ ತಂಡವೊಂದು ಹಲ್ಲೆಗೆ ಮುಂದಾಗಿತ್ತು. ಆ ಘಟನೆ ‌ಬಳಿಕ ಕೃಷ್ಣಮೂರ್ತಿ ನಾಪತ್ತೆಯಾಗಿದ್ದರು.

ಇದನ್ನೂ ಓದಿ | ನಿಗೂಢವಾಗಿ ನಾಪತ್ತೆಯಾಗಿದ್ದ ಬದಿಯಡ್ಕದ ದಂತವೈದ್ಯರ ಶವ ಪತ್ತೆ

ಮುಸ್ಲಿಂ ಯುವತಿ ಮೂಲಕ ವೈದ್ಯರನ್ನ ಬ್ಲಾಕ್ ಮೇಲ್ ಮಾಡಲಾಗಿದ್ದು, ಬ್ಲ್ಯಾಕ್ ಮೇಲ್‌ಗೆ ಬೆದರಿ ಕೃಷ್ಣಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಲ್ಯಾಂಡ್‌ ಮಾಫಿಯಾಗೆ ಬಗ್ಗದ ದಂತ ವೈದ್ಯರಿಗೆ ಯುವತಿ ಮುಂದಿಟ್ಟು ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ವಿಹಿಂಪ ಆರೋಪಿಸಿದೆ. ಈ ಕುರಿತ ಸಾರ್ವಜನಿಕ ಪ್ರತಿಭಟನೆಯೊಂದನ್ನು ನಡೆಸಲಾಗಿದೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಂ ಲೀಗ್ ಮುಖಂಡ ಸೇರಿ ಐವರನ್ನು ಬದಿಯಡ್ಕ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಅಡಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತ್ ಕಾರ್ಯದರ್ಶಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತ್ ಪದಾಧಿಕಾರಿ ಮುಹಮ್ಮದ್ ಹನೀಫ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್, ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ನಿವಾಸಿ ಉಮರುಲ್ ಫಾರೂಕ್‌ರನ್ನು ಬಂಧಿಸಲಾಗಿದೆ.

Exit mobile version