Site icon Vistara News

Love Propose : I Love You ಮೆಸೇಜ್‌ ಕಳಿಸಿದ ಮುಸ್ಲಿಂ ಯುವಕನಿಗೆ ವಿವಾಹಿತೆಯಿಂದ ಚಪ್ಪಲಿ ಏಟು!

Love Propose

ಬಾಗಲಕೋಟೆ: ಐ ಲವ್ ಯೂ ಎಂದು (Love Propose) ಮೆಸೇಜ್‌ ಹಾಕಿದ ಮುಸ್ಲಿಂ ಯುವಕನಿಗೆ ಮಹಿಳೆಯೊಬ್ಬರು ಚಪ್ಪಲಿ ಏಟು ಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್‌ ನಗರದಲ್ಲಿ ಘಟನೆ ನಡೆದಿದೆ. ಯಾಸಿನ್ ಎಂಬಾತ ನಿವೇದಿತಾ ಎಂಬಾಕೆ ಪ್ರೀತಿಸುವಂತೆ ವಾಟ್ಸ್‌ ಆ್ಯಪ್‌ನಿಂದ ಪ್ರೇಮ ನಿವೇದನೆಯನ್ನು ಮಾಡಿದ್ದ.

ನಿವೇದಿತಾ ಹಾಗೂ ಯಾಸಿನ್ ಇಬ್ಬರೂ ಸಹ ವಿವಾಹಿತರು. ಹೀಗಿದ್ದರೂ ಮದುವೆ ಆಗಿರುವ ಮಹಿಳೆಯ ಹಿಂದೆ ಬಿದ್ದ ಯಾಸಿನ್‌ ಪ್ರೀತಿಸುವಂತೆ ನಿವೇದಿತಾಳಿಗೆ ಮಸೇಜ್‌ ಮೂಲಕ ಹಿಂಸೆ ನೀಡುತ್ತಿದ್ದ. ಯಾಸಿನ್‌ ನಡೆಗೆ ರೋಸಿ ಹೋದ ನಿವೇದಿತಾ ಆತನ ಮನೆ ನುಗ್ಗಿ ಕುತ್ತಿಗೆ ಪಟ್ಟಿ ಹಿಡಿದು ಥಳಿಸಿ, ಚಪ್ಪಲಿ ಏಟು ನೀಡಿದ್ದಾರೆ.

ಇನ್ನೂ ನಿವೇದಿತಾ ಹಾಗೂ ಯಾಸಿನ್ ಇಬ್ಬರೂ ಕಾಂಗ್ರೆಸ್ ‌ಪಕ್ಷದ‌ಲ್ಲಿ ಕಾರ್ಯಕರ್ತರಾಗಿದ್ದು, ಪರಿಚಿತರೇ ಆಗಿದ್ದಾರೆ. ಇತ್ತೀಚೆಗೆ ಯಾಸಿನ್‌ ಪ್ರೀತಿ-ಪ್ರೇಮ ಎಂದು ಹಿಂದೆ ಬಿದ್ದು ಚಾಟಿಂಗ್ ಮಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ನಿವೇದಿತಾ ಯಾಸೀನ್ ಮನೆಗೆ ನುಗ್ಗಿ ಚಪ್ಪಲಿ ಏಟು ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಸ್ಥಳೀಯರ ಮಧ್ಯಸ್ಥಿಕೆಯಿಂದ ಚಪ್ಪಲಿ‌ ಏಟಿನ ಪ್ರಸಂಗ ಬಗೆಹರಿದಿದೆ. ಇಲಕಲ್ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Deep fake Scam : ಸೆಲೆಬ್ರಿಟಿಗಳ ಬಳಿಕ ಈಗ ಬೆಂಗಳೂರು ಶಾಲಾ ವಿದ್ಯಾರ್ಥಿನಿಯರಿಗೆ ಡೀಪ್‌ಫೇಕ್‌ ಕಾಟ; ನಗ್ನ ಫೋಟೋ ವೈರಲ್

ಧ್ರುವ ಸರ್ಜಾ ಜತೆಗಿದ್ದ ಜಿಮ್ ಟ್ರೈನರ್ ಮೇಲೆ ಮಚ್ಚಿನಿಂದ‌ ಹಲ್ಲೆ?

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ (Dhruva Sarja) ಜತೆಗಿದ್ದ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಅಟ್ಯಾಕ್ ಆಗಿದೆ ಎಂದು ವರದಿಯಾಗಿದೆ. ಭಾನುವಾರ (ಮೇ 26) ರಾತ್ರಿ ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಸ್ಥಳೀಯ ಹುಡುಗರ ಜತೆ ಗಲಾಟೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ ಅವರು ಸ್ಪಷ್ಟನೆ ಕೊಡಬೇಕಿದೆ. ಸದ್ಯಕ್ಕೆ ಮಚ್ಚಿನಿಂದ‌ ಪ್ರಶಾಂತ್ ಮೇಲೆ ಹಲ್ಲೆ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈಯಕ್ತಿಕ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಗಲಾಟೆ ಆಗಿದೆ ಎನ್ನಲಾಗಿದೆ. ಸಿಟ್ಟಿನಲ್ಲಿ ಮಚ್ಚಿನಿಂದ ಪ್ರಶಾಂತ್ ಮೇಲೆ ಸ್ಥಳೀಯ ಹುಡುಗರು ಹಲ್ಲೆ ಮಾಡಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಶಾಂತ್‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿನಿಮಾ ವಿಚಾರಕ್ಕೆ ಬಂದರೆ ಪ್ರೇಮ್‌ ಹಾಗೂ ಧ್ರುವ ಸರ್ಜಾ (Dhruva Sarja) ಈಗಾಗಲೇ ʻಕೆಡಿʼ ಸಿನಿಮಾ (KD movie) ಬಿಡುಗಡೆ ಯಾವಾಗ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರರಂಗಕ್ಕೆ ಬಂದ 12 ವರ್ಷಗಳಲ್ಲಿ ಧ್ರುವ ಸರ್ಜಾ 4 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ ಎನ್ನುವ ಬೇಸರ ಕೆಲವರದ್ದು. ಇದೀಗ ಹೊಸ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಬಾಲಿವುಡ್‌ಗೆ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Dhruva Sarja: ಬಾಲಿವುಡ್‌ ಸಿನಿಮಾಗೆ ಎಂಟ್ರಿ ಕೊಡ್ತಾರಾ ಧ್ರುವ ಸರ್ಜಾ? ಬಿಗ್‌ ಬಜೆಟ್‌ ಚಿತ್ರದಲ್ಲಿ ಸಹೋದರನ ಪಾತ್ರ?

ಬಹುನಿರೀಕ್ಷಿತ ‘ವಾರ್-2’ ಚಿತ್ರದಲ್ಲಿ ಕನ್ನಡದ ನಟ ಬಣ್ಣ ಹಚ್ಚುತ್ತಾರೆ ಎನ್ನಲಾಗುತ್ತಿದೆ. ತೆಲುಗು ಮಾಧ್ಯಮಗಳಲ್ಲಿ ಕೂಡ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ಜ್ಯೂ. ಎನ್‌ಟಿಆರ್ ಸಹೋದರನ ಪಾತ್ರದಲ್ಲಿ ಧ್ರುವ ನಟಿಸುತ್ತಾರೆ ಎಂದು ಎಂದು ವರದಿಯಾಗುತ್ತಿದೆ. ಧ್ರುವ ಸರ್ಜಾ ಈ ಚಿತ್ರದಲ್ಲಿ ನಟಿಸುತ್ತಾರೆ, ಆ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ವರದಿಯ ಪ್ರಕಾರ, ಜ್ಯೂನಿಯರ್‌ ಎನ್‌ಟಿಆರ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಬಳಿಕ ಆದಿತ್ಯ ಚೋಪ್ರಾ ಅವರು ಅಯನ್ ಮುಖರ್ಜಿ ಅವರ ನಿರ್ದೇಶಕ್ಕೆ ಮನಸೋತು, ಈ ಸಿನಿಮಾ ಮಾಡಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

ಸಿದ್ದಾರ್ಥ್ ಆನಂದ್ ಅವರು ‘ವಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ಮೊದಲ ಪಾರ್ಟ್​​ನಲ್ಲಿ ಟೈಗರ್ ಶ್ರಾಫ್ ಪಾತ್ರ ಕೊನೆಗೊಂಡಿದೆ. ಹೀಗಾಗಿ ‘ವಾರ್-2’ ಚಿತ್ರದಲ್ಲಿ ಹೃತಿಕ್ ಮಾಡಿರುವ ಕಬೀರ್ ಪಾತ್ರ ಮುಂದುವರಿಯುತ್ತಿದೆ. ಜ್ಯೂನಿಯರ್‌ ಎನ್‌ಟಿಆರ್‌ ಅವರು ತಮ್ಮ ಮೊದಲ ಬಾಲಿವುಡ್​ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ವಿಶೇಷ. ವಾರ್‌-2 ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಉತ್ತರ ಮತ್ತು ದಕ್ಷಿಣ ಭಾಗದ ಸೂಪರ್‌ಸ್ಟಾರ್‌ಗಳನ್ನು ಹೊಂದಿದೆ. ಕಿಯಾರಾ ಆಡ್ವಾಣಿ ಈ ಸಿನಿಮಾ ನಾಯಕಿ. ʼವಾರ್ 2ʼ 2025ರ ಆಗಸ್ಟ್ 14ರಂದು ಬಿಡುಗಡೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version