ಬಾಗಲಕೋಟೆ: ಹಳೆಯ ದ್ವೇಷದಿಂದ ಕೂದಲಿಗೆ ಬಣ್ಣ ಹಚ್ಚಿಸಿಕೊಳ್ಳಲು ಮೆನ್ಸ್ ಪಾರ್ಲರ್‌ಗೆ ಬಂದ ವ್ಯಕ್ತಿಯನ್ನು ಕತ್ತರಿಯಿಂದ ಇರಿದು ಕೊಲೆ ಮಾಡಿದ ಘಟನೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಸಾಗರ್ ಅವಟಿ ಎನ್ನುವ ವ್ಯಕ್ತಿ ಗರುವಾರ ಸಂಜೆ ಕೂದಲಿಗೆ ಕಲರ್ ಮಾಡಿಕೊಳ್ಳಲು ʼಪ್ರಜ್ವಲ್ ಜೆಂಟ್ಸ್ ʼ ಎನ್ನುವ ಮೆನ್ಸ್ ಪಾರ್ಲರ್‌ಗೆ ಹೋಗಿದ್ದರು. ಸಲೂನ್ ಮಾಲೀಕ ಲಕ್ಷ್ಮಣ ಬಂದ ಅವರಿಗೆ ಕಲರ್ ಹಚ್ಚೋದಕ್ಕೆ ಮುಂದಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಇದೇ ಮೆನ್ಸ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಸದಾಶಿವ ನಾವಿ ಕೊಲೆ ಮಾಡಿದ ಆರೋಪಿ. ಆತ ಸಾಗರ್ ಅವಟಿಯೊಂದಿಗೆ ಹಣದ ವಿಷಯದಲ್ಲಿ ಜಗಳ ತೆಗೆದಿದ್ದು, ಹಳೆಯ ದ್ವೇಷವೂ ಇದ್ದುದ್ದರಿಂದ ಕತ್ತರಿಯಿಂದ ಎದೆ ಎಡಭಾಗಕ್ಕೆ ಇರಿದ ಪರಿಣಾಮ ಸಾಗರ್ ಗಂಭೀರ ಗಾಯಗೊಂಡನೆಂದು ಹೇಳಲಾಗಿದೆ. ಕೂಡಲೇ ಆತನನ್ನು ಜಮಖಂಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದರೂ. ಚಿಕಿತ್ಸೆ ಫಲಿಸದೆ ಸಾಗರ ಅವಟಿ ಮೃತಪಟ್ಟಿದ್ದಾನೆ.
ಬನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನದೆಸಿದ್ದಾರೆ. ಸದ್ಯ ಸದಾಶಿವನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಜಗಳ ಬಿಡಿಸಲು ಹೋದವನ ಕೊಲೆ