Site icon Vistara News

ವಕೀಲೆ ಸಂಗೀತಾ ಶಿಕ್ಕೇರಿ ಮೇಲಿನ ಹಲ್ಲೆ  ಪ್ರಕರಣಕ್ಕೆ ಹೊಸ ಟ್ವಿಸ್ಟ್‌!

ಸಂಗೀತಾ ಶಿಕ್ಕೇರಿ

ಬಾಗಲಕೋಟೆ: ವಕೀಲೆ ಸಂಗೀತಾ ಶಿಕ್ಕೇರಿ ಮೇಲಿನ ಅಮಾನುಷ ಹಲ್ಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇದೀಗ ಹಲ್ಲೆ ಆರೋಪಿ ಆಗಿರುವ ಮಹಾಂತೇಶ್ ಚೊಳಚಗುಡ್ಡನ ಗಿಫ್ಟ್‌ ಸೆಂಟರ್ ಗೆ ವಕೀಲೆಯೇ ಹೋಗಿ ಜಗಳ ಮಾಡಿದ್ದಳು. ಚಪ್ಪಲಿಯಿಂದ ಮಹಾಂತೇಶ್‌ಗೆ ಬಾರಿಸಿದ್ದಳು. ಇದರಿಂದಾಗಿ ಕೋಪಗೊಂಡ ಮಹಾಂತೇಶ್ ಸಹ ಸಂಗೀತಾ ಶಿಕ್ಕೇರಿಗೆ ಥಳಿಸಿದ್ದಾನೆ ಎಂದು ಮಹಾಂತೇಶನ ಸಂಬಂಧಿಕರು ಆಪಾದಿಸಿದ್ದಾರೆ. ಈ ಕುರಿತ ವಿಡಿಯೊ ಈಗ ವೈರಲ್‌ ಆಗಿದೆ.

ವಕೀಲೆ ಸಂಗೀತಾ ಚಪ್ಪಲಿಯಲ್ಲಿ ಹೊಡೆಯುವ ಹಾಗೂ ಬಳಿಕ ಮಹಾಂತೇಶ್ ಆಕೆಗೆ ಒದೆಯುವ ವಿಡಿಯೊ ಈಗ ಚರ್ಚೆಗೆ ಗ್ರಾಸವಾಗಿದೆ. “”ಸಂಗೀತಾ ಶಿಕ್ಕೇರಿ ಮೊದಲು ಅಂಗಡಿಗೆ ಬಂದು ನಮ್ಮ ಸಹೋದರನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಆಗ ಕೋಪಗೊಂಡು ಮಹಾಂತೇಶ ಪ್ರತಿ ಹಲ್ಲೆ ಮಾಡಿದ್ದಾನೆ. ವಿಡಿಯೊ ಮಾಡುವ ಸಲುವಾಗಿಯೇ ಆಕೆ ಬೇಕೆಂದೇ ಬಂದು ಜಗಳ ಮಾಡಿದ್ದಾಳೆ. ವಾಸ್ತವಿಕವಾಗಿ ಈ ಪ್ರಕರಣದಲ್ಲಿ ನಮಗೂ ಅನ್ಯಾಯವಾಗಿದೆ,ʼʼ ಎಂದು ಕುಟುಂಬದವರು ಈ ಹಿಂದೆ ದೂರು ನೀಡಿದ್ದರು. ಈವರೆಗೆ ಮಹಾಂತೇಶ್ ಮಹಿಳೆ ಮೇಲೆ ಹಲ್ಲೆ ಮಾಡುವ ವಿಡಿಯೊ ಅಷ್ಟೆ ಬಯಲಾಗಿತ್ತು. ಇದೀಗ ಮಹಿಳೆಯು ಮಹಾಂತೇಶನ ಅಂಗಡಿಗೆ ನುಗ್ಗಿ ಹಲ್ಲೆ ವಿಡಿಯೊ ದೃಶ್ಯಗಳೂ ಬಹಿರಂಗವಾಗಿವೆ.

ಇದನ್ನೂ ಓದಿ |ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ಮಾಡಿದವರ ಪರ ವಾದಿಸದಿರಲು ವಕೀಲರ ನಿರ್ಧಾರ

ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ನೆರೆಮನೆಯ ಮಹಾಂತೇಶ್‌ ಚೊಳಚಗುಡ್ಡ ಭೀಕರವಾಗಿ ಹಲ್ಲೆ ಮಾಡಿರುವುದನ್ನು ಖಂಡಿಸಿ ಬಾಗಲಕೋಟೆ ವಕೀಲರ ಸಂಘ ಹಾಗೂ ವಿವಿಧ ಸಂಘಟನೆಗಳು ರಾಜ್ಯಾದ್ಯಂತ ಸೋಮವಾರ ಪ್ರತಿಭಟನೆ ನಡೆಸಿದ್ದವು.

ಹಲವು ಮಹಿಳಾ ಸಂಘಟನೆಗಳು ಜಿಲ್ಲಾ ವಕೀಲರ ಸಂಘವನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು.

ಇದನ್ನೂ ಓದಿ | ಆಸ್ತಿ ವಿಚಾರವಾಗಿ ದಬ್ಬಾಳಿಕೆ ಆರೋಪ: ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ

Exit mobile version