ಬೆಂಗಳೂರು, ಕರ್ನಾಟಕ: ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದ್ದ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಚ್ ವೈ ಮೇಟಿ ಅವರು ಗೆಲುವು ಸಾಧಿಸಿದ್ದಾರೆ. ಎಚ್ ವೈ ಮೇಟಿ ಅವರು 78 ಸಾವಿರ ಚಿಲ್ಲರೆ ಮತಗಳನ್ನು ಪಡೆದುಕೊಂಡಿದ್ದಾರೆ. ಇವರು ಎದುರು ಸೋತಿರುವ ಬಿಜೆಪಿಯ ವೀರಣ್ಣ ಚರಂತಿಮಠ ಅವರು 72 ಸಾವಿರ ಚಿಲ್ಲರೆ ಮತಗಳನ್ನು ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚಿರಂತಿಮಠ ಅವರು 10 ಸಾವಿರ ಮತಗಳನ್ನು ಪಡೆದುಕೊಂಡಿದ್ದಾ(Bagalkot Election Results).
2023ರ ಚುನಾವಣೆಯ ಅಭ್ಯರ್ಥಿಗಳು ಯಾರು?
ಹಾಲಿ ಶಾಸಕ ಬಿಜೆಪಿಯ ವೀರಣ್ಣ ಚರಂತಿಮಠ ಅವರು ಮತ್ತೆ ಆಯ್ಕೆ ಬಯಸಿ ಕಣದಲ್ಲಿದ್ದರು. 2018ರಲ್ಲಿ ಸೋತಿದ್ದ ಎಚ್ ವೈ ಮೇಟಿ ಅವರಿಗೆ ಮತ್ತೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಜೆಡಿಎಸ್‌ನಿಂದ ದೇವರಾಜ್ ಪಾಟೀಲ್ ಸ್ಪರ್ಧಿಸಿದ್ದರು.
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಬಿ.ವೈ.ವಿಜಯೇಂದ್ರ ಗೆಲುವಿನ ‘ಶಿಕಾರಿ’
ಈ ಕ್ಷೇತ್ರ ಕೂಡ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಕಾಂಗ್ರೆಸ್ ಮತ್ತು ಜನತಾ ಪರಿವಾರ ಪ್ರಾಬಲ್ಯ ಹೊಂದಿತ್ತು. 1998ರ ಉಪಚುನಾವಣೆಯಿಂದ ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಛಾಪು ಮೂಡಿಸುತ್ತಾ ಬಂದಿದೆ. 2018ರ ಚುನಾವಣೆಯಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠ ಅವರು 85633 ಮತಗಳನ್ನು ಪಡೆದುಕೊಂಡರು. ಕಾಂಗ್ರೆಸ್ ಎಚ್ ವೈ ಮೇಟಿ ಅವರು 69719 ಮತಗಳನ್ನು ಪಡೆದುಕೊಂಡು ಸೋಲು ಅನುಭವಿಸಿದರು. 2013ರ ಚುನಾವಣೆಯಲ್ಲಿ 2018 ಚುನಾವಣೆಯ ಫಲಿತಾಂಶ ಉಲ್ಪಾಪಲ್ಟಾ ಆಗಿತ್ತು.