ಬಾಗಲಕೋಟೆ: ಎಸಿಬಿ ದಾಳಿಗೆ ಒಳಗಾಗಿದ್ದ ಬಾಗಲಕೋಟೆ ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು (ಆರ್‌ಟಿಒ) ಅಮಾನತು ಮಾಡಿ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ಎಸ್.ಪುಷ್ಪ ಆದೇಶ ಹೊರಡಿಸಿದ್ದಾರೆ.
ಯಲ್ಲಪ್ಪ ಪಡಸಾಲಿ ಅಮಾನತುಗೊಂಡ ಆರ್‌ಟಿಒ. ಜೂನ್ 17ರಂದು ಆರ್‌ಟಿಒ ಯಲ್ಲಪ್ಪ ಪಡಸಾಲಿ ಅವರ ಧಾರವಾಡ, ಬಾಗಲಕೋಟೆ ಮನೆಗಳ ಮೇಲೆ ಎಸಿಬಿ ದಾಳಿ ನಡೆದಿತ್ತು. ಮೇಲ್ನೋಟಕ್ಕೆ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪತ್ತೆ ಹಾಗೂ ಕರ್ತವ್ಯದಲ್ಲಿದ್ದರೆ ಸಾಕ್ಷ್ಯ ನಾಶ ಸಾಧ್ಯತೆ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಯಲ್ಲಪ್ಪ ಪಡಸಾಲಿ ಒಟ್ಟು ಸ್ಥಿರಾಸ್ತಿಗಳ ಮೌಲ್ಯ 5,03,28,000 ರೂ.ಗಳಾಗಿದ್ದು, ಒಟ್ಟು ಖರ್ಚುಗಳ ಮೊತ್ತ 80 ಲಕ್ಷ ರೂಪಾಯಿಯಾಗಿದೆ. ಬಲ್ಲ ಮೂಲಗಳ ಆದಾಯದ ಅಂದಾಜು ಮೌಲ್ಯ 1.72 ಕೋಟಿ ರೂ.ಗಳಾಗಿದೆ. ಆದರೆ, ಆದಾಯಕ್ಕಿಂತ 4,11,28,000 ರೂಪಾಯಿ ಹೆಚ್ಚುವರಿ ಆಸ್ತಿ (ಶೇ.239.11 ಹೆಚ್ಚುವರಿ) ಹೊಂದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಜೂನ್ 17ರಂದು ರಾಜ್ಯಾದ್ಯಂತ 80 ಕಡೆಗಳಲ್ಲಿ 300 ಎಸಿಬಿ ಅಧಿಕಾರಿಗಳ ತಂಡ 21 ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ ನಡೆಸಿತ್ತು. ಈ ವೇಳೆ ಅಪಾರ ಪ್ರಮಾಣದ ಅಕ್ರಮ ಹಣ, ಆಸ್ತಿ ಪತ್ತೆಯಾಗಿತ್ತು.
ಇದನ್ನೂ ಓದಿ | ಲೋಕಾಯುಕ್ತದಲ್ಲಿ ಮಾಜಿ ಸಿಎಂ ಬಿಎಸ್‌ವೈ ಮೇಲೆ ದಾಖಲಾಯ್ತು ಎಫ್‌ಐಆರ್