Site icon Vistara News

Karnataka Election 2023: ಬಜರಂಗದಳ ಬಿಜೆಪಿಯದ್ದೇ ಸಂಘಟನೆ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bajrang Dal is BJP's organization, Says Minister Shobha Karandlaje

ಬೆಂಗಳೂರು, ಕರ್ನಾಟಕ: ಬಜರಂಗದಳ (Bajrang Dal) ಮತ್ತು ಬಿಜೆಪಿ ಸೇರಿ ಸಂಘ ಪರಿವಾರದ ಅನೇಕ ಸಂಘಟನೆಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ತಾಯಿ ಬೇರು. ಬಿಜೆಪಿಯು ರಾಜಕೀಯ ಸಂಘಟನೆಯಾಗಿದೆ. ಅದರ ಹಿಂದೆ ಆರೆಸ್ಸೆಸ್, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ಗಳಿವೆ. ಯಾರು ಏನು ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ, ಬಜರಂಗದಳ ನಮ್ಮದೇ ಸಂಘಟನೆಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಸ್ಪಷ್ಟಪಡಿಸಿದ್ದಾರೆ(Karnataka Election 2023).

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಮೀಡಿಯಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಅಲ್ಲಾ ಬಗ್ಗೆ ತಪ್ಪಾಗಿ ಹೇಳಿದ್ರೆ ಇಷ್ಟೊತ್ತಿಗೆ ರಾಜ್ಯ ಹೊತ್ತಿ ಉರಿಯುತ್ತಿತ್ತು. ಹಿಂದುಗಳು ಏನು ಹೇಳಿದರೂ ಸಹಿಸಿಕೊಳ್ಳುತ್ತಾರೆ ಅಂತ ನೀವು ಹೇಳ್ತೀರಾ? ಎಸ್‌ಡಿಪಿಐ ಪ್ರಣಾಳಿಕೆ ವಿಚಾರವನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ. ಕಾಂಗ್ರೆಸ್ ಸುಳ್ಳಿನ ಕಂತೆಯನ್ನು ಹೊಂದಿದೆ ಎಂದು ಹೇಳಿದರು.

70 ವರ್ಷಗಳಿಂದ ಹಿಂದುಗಳಿಗೆ ಕಾಂಗ್ರೆಸ್ ಏನೂ ಮಾಡಲಿಲ್ಲ. ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡಿದರು. ಧರ್ಮವನ್ನ ಎಳೆದು ತರುವ ಕೆಲಸ ಮಾಡ್ತಿದ್ದಾರೆ. ಹನುಮಾನ್ ಚಾಲಿಸಾ ಓದುವುತ್ತೇವೆ ಕಾಂಗ್ರೆಸ್ ಅವರು ಬಂದು ಕಿವಿಕೊಟ್ಟು ಕೇಳಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದರು.

ಇದನ್ನೂ ಓದಿ: Karnataka Election: ಕಪಿಗಳ ನಾಡು ಎಂದ ಸುರ್ಜೇವಾಲಾ; ತಿರುಗೇಟು ಕೊಟ್ಟ ಶೋಭಾ ಕರಂದ್ಲಾಜೆ

ಬಿಜೆಪಿಯವರಿಗೆ ಹನುಮಾನ್ ಚಾಲೀಸ್ ಹೇಳೋದಕ್ಕೆ ಬರಲ್ಲ ಎಂದು ಕಾಂಗ್ರೆಸ್‌ನ ರಣದೀಪ್ ಸುರ್ಜೇವಾಲ್ ಸವಾಲು ಹಾಕಿದ್ದಾರೆ. ಇವತ್ತು ಸಂಜೆ ಏಳು ಗಂಟೆಗೆ ಹನುಮಾನ್ ಚಾಲಿಸ ಹೇಳ್ತೀವಿ. ನೀವು(ಸುರ್ಜೆವಾಲಾ) ಬರಬೇಕು. ಇದು ನಮ್ಮ ಸವಾಲು. ಮಲ್ಲೇಶ್ವರಂನ 8 ನೇ ಕ್ರಾಸ್‌ನಲ್ಲಿ ಇರುವ ಶ್ರೀರಾಮ ದೇವಸ್ಥಾನದಲ್ಲಿ ನಾವು ಪಠಣ ಮಾಡುತ್ತೇವೆ. ನೀವು ಬಂದು ಕೇಳಿ. ಹನುಮ ಹುಟ್ಟಿದ್ದು ಕಿಷ್ಕೆಂದಯಲ್ಲಿ. ಹಂಪಿಯಲ್ಲಿ ಹನುಮ ಓಡಾಡಿದ್ದ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Exit mobile version