Site icon Vistara News

Bande seer| ಬಂಡೆ ಮಠ ಶ್ರೀ ಆತ್ಮಹತ್ಯೆ: ನೀಲಾಂಬಿಕೆ ಸಹಿತ ಬಂಧಿತರ ನ್ಯಾಯಾಂಗ ಬಂಧನ ನ. 29ರವರೆಗೆ ವಿಸ್ತರಣೆ

Bande seer suicide accused

ರಾಮನಗರ: ಜಿಲ್ಲೆಯ ಮಾಗಡಿಯ ಕಂಚುಗಲ್ ಬಂಡೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಮೂವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸತತ ಎರಡನೇ ಬಾರಿಗೆ ಮಂಗಳವಾರ ನ್ಯಾಯಾಲಯ ವಿಸ್ತರಿಸಿದ್ದು, ನವೆಂಬರ್‌ 29ರವರೆಗೆ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ.

ಬಸವಲಿಂಗ ಸ್ವಾಮೀಜಿ ಅವರನ್ನು ಹನಿಟ್ರ್ಯಾಪ್‌ ಖೆಡ್ಡಾಕ್ಕೆ ಬೀಳಿಸಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದಲ್ಲಿ ಇನ್ನೊಂದು ಮಠದ ಸ್ವಾಮೀಜಿಯಾಗಿರುವ ಮೃತ್ಯುಂಜಯ ಸ್ವಾಮೀಜಿ ಮತ್ತು ವಕೀಲ ಮಹದೇವಯ್ಯ ಹಾಗೂ ಹನಿ ಟ್ರ್ಯಾಪ್‌ ಮಾಡಿದ ನೀಲಾಂಬಿಕೆಯನ್ನು ಬಂಧಿಸಲಾಗಿತ್ತು. ಅವರ ಮೊದಲ ನ್ಯಾಯಾಂಗ ಬಂಧನ ಅವಧಿ ಮಂಗಳವಾರಕ್ಕೆ ಮುಕ್ತಾಯವಾಗಿದೆ.

ನ್ಯಾಯಾಂಗ ಬಂಧನವು ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಹಾಗೂ ವಕೀಲ ಮಹದೇವಯ್ಯ ಅವರನ್ನು ಮಾಗಡಿಯ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಮತ್ತು ಜೆಎಂಎಫ್‌ಸಿ ಎಂ ಧನಲಕ್ಷ್ಮಿ ಅವರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಪೀಠವು ಆರೋಪಿಗಳ ನ್ಯಾಯಾಂಗ ಬಂಧನವನ್ನು 15 ದಿನ ವಿಸ್ತರಿಸಿದೆ. ನವೆಂಬರ್‌ 5ರಂದು ನ್ಯಾಯಾಲಯವು ಅವರನ್ನು 10 ದಿನ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇದಕ್ಕೂ ಮುನ್ನ ತನಿಖೆಗಾಗಿ ಪೊಲೀಸ್‌ ಕಸ್ಟಡಿಗೆ ನೀಡಲಾಗಿತ್ತು.

ಮೃತ್ಯುಂಜಯ ಸ್ವಾಮೀಜಿ ಹಾಗೂ ವಕೀಲ ಮಹದೇವಯ್ಯ ಅವರನ್ನು ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ಹಾಗೂ ನೀಲಾಂಬಿಕೆಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ | Honey Trap | 79ರ ಅಜ್ಜನಿಗೆ ಹನಿಟ್ರ್ಯಾಪ್‌; ಬೆತ್ತಲೆಗೊಳಿಸಿ ಬ್ಲ್ಯಾಕ್‌ಮೇಲ್‌ ಮಾಡಿದವಳು ಕಂಬಿ ಹಿಂದೆ

Exit mobile version