Site icon Vistara News

Bank Fraud | ಮೃತಪಟ್ಟವರ ಹೆಸರಿನಲ್ಲೂ ಸಿಗಲಿದೆ ಬ್ಯಾಂಕ್‌ನಿಂದ ಸಾಲ!

ಬ್ಯಾಂಕ್

ಮಂಡ್ಯ: ಇಲ್ಲಿನ ಮದ್ದೂರು ಪಟ್ಟಣದ ಶಿಂಷಾ ಸಹಕಾರ ಬ್ಯಾಂಕಿನಲ್ಲಿ (Bank Fraud) ಮೃತಪಟ್ಟವರೂ ಸಾಲ ಪಡೆದಿದ್ದಾರೆ! ಈ ಅಕ್ರಮದಲ್ಲಿ ಬ್ಯಾಂಕ್‌ ಅಧಿಕಾರಿಗಳೇ ಶಾಮೀಲಾಗಿದ್ದು, ನಕಲಿ ದಾಖಲೆ ಸೃಷ್ಟಿಸಿ ವೈಯಕ್ತಿಕ ಸಾಲ ಮಂಜೂರು ಮಾಡಿ ಅಕ್ರಮ ಎಸಗಿಸಿರುವುದು ಈಗ ಬೆಳಕಿಗೆ ಬಂದಿದೆ.

ಈ ಅಕ್ರಮವು ಆಡಿಟ್ ವರದಿಯಲ್ಲಿ ಬಹಿರಂಗವಾಗಿದ್ದು, ವರದಿ ಮೇರೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗಿದೆ. ಮೃತಪಟ್ಟ ಗ್ರಾಹಕರ ಹೆಸರಲ್ಲಿ ಸಾಲ ಪಡೆದು, ಹಣ ದುರುಪಯೋಗ ಪ್ರಕರಣ ಹಿನ್ನೆಲೆಯಲ್ಲಿ ಇದೀಗ ಕರ್ತವ್ಯ ದುರುಪಯೋಗ ಆರೋಪದಡಿ ಬ್ಯಾಂಕ್ ಸಿಇಒ ಲಕ್ಷ್ಮಿನಾರಾಯಣಗೌಡ ಸಹಿತ ನಾಲ್ವರನ್ನು ಅಮಾನತುಪಡಿಸಿ ಆದೇಶಿಸಲಾಗಿದೆ.

ಮಂಡ್ಯ ಸಹಕಾರ ಇಲಾಖೆ ಉಪ ನಿಬಂಧಕರ ಶಿಫಾರಸು ಮೇರೆಗೆ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಬ್ಯಾಂಕ್ ಅಧ್ಯಕ್ಷ ತಗ್ಗಳ್ಳಿ ಚಂದ್ರು ಅಮಾನತು ಆದೇಶ ಹೊರಡಿಸಿದ್ದಾರೆ. ಸಿಇಒ ಲಕ್ಷ್ಮೀನಾರಾಯಣಗೌಡ ಜತೆಗೆ ಬ್ಯಾಂಕ್ ಉಪ ವ್ಯವಸ್ಥಾಪಕ ವಿ.ಉಮಾಶಂಕರ್, ಲೆಕ್ಕಾಧಿಕಾರಿ ಬಿ.ಎನ್‌.ಕುಮಾರ್‌, ಕಿರಿಯ ಸಹಾಯಕ ಟಿ.ಗೋಪಿ ಅಮಾನತುಗೊಂಡ ಅಧೀನ ಸಿಬ್ಬಂದಿಯಾಗಿದ್ದಾರೆ.

ಇದನ್ನೂ ಓದಿ | ಕೋಟಿ ಕೋಟಿ ಲೂಟಿ ಮಾಡಿ ಶೋಕಿ ಮಾಡಿದ ಬ್ಯಾಂಕ್‌ ಜವಾನ!

Exit mobile version