Site icon Vistara News

Basanagowda pateel yatnal: ಹುಬ್ಬಳ್ಳಿ ಬಿಡಿ, 2024ರಲ್ಲಿ ಮೋದಿ ಗೆದ್ದ ಮೇಲೆ ಪಾಕಿಸ್ತಾನದಲ್ಲೂ ಗಣೇಶನ ಕೂರಿಸ್ತೀವಿ ಎಂದ ಯತ್ನಾಳ್‌

Basanagowda pateel Yatnal

ಹುಬ್ಬಳ್ಳಿ: 2024ರ ಲೋಕಸಭಾ ಚುನಾವಣೆಯಲ್ಲಿ (Parliament Elections 2024) ನರೇಂದ್ರ ಮೋದಿಯವರು (PM Narendra Modi) ಮತ್ತೊಮ್ಮೆ ಪ್ರಧಾನಿ ಆಗ್ತಾರೆ. ಆಗ ಪಾಕಿಸ್ತಾನದ ಲಾಹೋರಿನಲ್ಲೂ ಗಣಪತಿ (Ganeshothsava at Lahore) ಕೂರಿಸ್ತೀವಿ- ಹೀಗೆಂದು ಹೇಳಿದ್ದಾರೆ ಬಿಜೆಪಿಯ ಫೈರ್‌ಬ್ರಾಂಡ್‌ ನಾಯಕ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌(Basanagowda pateel Yatnal)

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ನಡೆದ ಗಣೇಶೋತ್ಸವದಲ್ಲಿ ಪೂಜೆಗೊಂಡ ಗಣೇಶ ಮೂರ್ತಿಯ ವಿಸರ್ಜನಾ (Ganesha Shobhayatre) ಮೆರವಣಿಗೆ ಗುರುವಾರ ನಡೆಯಿತು. ಈ ವೇಳೆ ಮೆರವಣಿಗೆಯಲ್ಲಿ ಭಾಗಿಯಾಗಿ ತೆರೆದ ವಾಹನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಷಣ ಮಾಡಿದರು.

ʻʻನಮ್ಮ ದೇಶದಲ್ಲಿ ರಾಷ್ಟ್ರಧ್ವಜ ಹಾರಿಸಲು ಈ ಮಕ್ಕಳ ಅನುಮತಿ ಬೇಕಂತೆ. ನಾವು ಚಂದ್ರನ ಮೇಲೆ ರಾಷ್ಟ್ರಧ್ವಜ ಹಾರಿಸಿ ಬಂದೀವಿ. ಇದೇ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡ್ತೀವಿʼʼ ಎಂದು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ನೀಡಬಾರದು ಎಂದು ಕೋರ್ಟ್‌ ಮೆಟ್ಟಿಲು ಹತ್ತಿದ್ದ ಅಂಜುಮನ್‌ ಇಸ್ಲಾಂ ಸಂಸ್ಥೆಯ ವಿರುದ್ಧ ಅವು ಕಿಡಿ ಕಾರಿದರು. ʻʻಹುಬ್ಬಳ್ಳಿಯ ಈದ್ಗಾ ಮೈದಾನ ಯಾರಪ್ಪನ ಆಸ್ತಿಯೂ ಅಲ್ಲಾ. ಅಂಜುಮನ್ ಆಸ್ತಿ ಅಲ್ಲಾ, ಪಾಕಿಸ್ತಾನ ಆಸ್ತಿ ಅಲ್ಲʼʼ ಎಂದರು. ಇದರ ಜತೆಗೆ ಈದ್ಗಾ ಮೈದಾನದ ಬಳಿಯೇ ಅವರು ಹನುಮಾನ್ ಚಾಲಿಸಾ ಪಠಣ ಮಾಡಿದರು.

ʻʻಪಾಕಿಸ್ತಾನದಲ್ಲಿ ತಿನ್ನೋಕೆ ಅನ್ನಾ ಇಲ್ಲಾ, ಇಲ್ಲಿನ ಮಂದಿ ಪಾಕಿಸ್ತಾನ್ ಜಿಂದಾಬಾದ್ ಅಂತಾರʼʼ ಎಂದು ಗೇಲಿ ಮಾಡಿದ ಯತ್ನಾಳ್‌, ʻʻಮೋದಿಯವರು ಇನ್ನೊಮ್ಮೆ ಪ್ರಧಾನಿ ಆಗ್ತಾರೆ, ಪಾಕಿಸ್ತಾನ ದಾಟಿ ಅಪ್ಘಾನಿಸ್ತಾನ್ ಬಾರ್ಡರ್‌ವರೆಗೆ ಹೋಗ್ತೀವಿʼʼ ಎಂದು ಹೇಳಿದರು.

ʻʻಮೋದಿಯವರು ಪ್ರಧಾನಿಯಾಗಿರುವ ಕಾರಣ ದೇಶ ಶಾಂತವಾಗಿದೆ. ವಿಘ್ನಗಳು ನಾಶವಾಗಲಿ ಅಂತಾನೇ ಗಣೇಶ ಹಬ್ಬದ ದಿನ ಹೊಸ ಸಂಸತ್ ಭವನದಲ್ಲಿ ಮೋದಿ ಅಧಿವೇಶನ ಮಾಡಿದ್ದಾರೆʼʼ ಎಂದು ಹೇಳಿದರು.

ಇದನ್ನೂ ಓದಿ: Karnataka live news: ಹುಬ್ಬಳ್ಳಿ ಈದ್ಗಾ ಗಣೇಶೋತ್ಸವಕ್ಕೆ ಪಾಲಿಕೆ ಅನುಮತಿ; ಪ್ರತಿಭಟನೆ ಕೈಬಿಟ್ಟ ಬಿಜೆಪಿ

ಇದು ರಾಣಿ ಚೆನ್ನಮ್ಮ ಮೈದಾನ ಆಗಬೇಕು

ʻʻʻಈ ಮೈದಾನಕ್ಕೆ ಈದ್ಗಾ ಮೈದಾನ ಅಂದ್ರೆ ಅದು ಸಾಬರಿಗೆ ಹುಟ್ಟಿದಂತೆ. ಈ ಮೈದಾನಕ್ಕೆ‌ ರಾಣಿ ಚೆನ್ನಮ್ಮ ಮೈದಾನ ಅನ್ಬೇಕುʼʼ ಎಂದು ಜನರಿಗೆ ಅವರು ಕರೆ ನೀಡಿದರು.

ಸನಾತನ ಧರ್ಮ ಕುರಿತ ಉದಯನಿಧಿ ಸ್ಟಾಲಿನ್‌ ಹೇಳಿಕೆಯನ್ನು ಖಂಡಿಸಿದ ಅವರು, ʻʻʻಡಿಎಮ್‌ಕೆ ಮುಖಂಡನೊಬ್ಬ ಹೇಳ್ತಾನ, ಸನಾತನ ಧರ್ಮಕ್ಕೆ ರೋಗ ಅಂತಾನೆ. ಸನಾತನ ಧರ್ಮವನ್ನು ವಿರೋಧಿಸುವವರೆಲ್ಲರಿಗೆ ಏಡ್ಸ್ ಬರುತ್ತೆʼʼ ಎಂದರು. ನರೇಂದ್ರ ಮೋದಿಯವರನ್ನು ವಿರೋಧಿಸುವವರೆಲ್ಲಾ ದೇಶದ್ರೋಹಿಗಳು ಎಂದು ಅವರು ನುಡಿದರು.

ಭರ್ಜರಿಯಾಗಿ ನಡೆದ ಗಣೇಶನ ಶೋಭಾ ಯಾತ್ರೆ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿತನಾಗಿದ್ದ ಗಣೇಶನ ಶೋಭಾಯಾತ್ರೆ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಭಗವಾದ್ವಜ ಹಿಡಿದು ಸಾವಿರಾರು ಹಿಂದೂ ಕಾರ್ಯಕರ್ತರು ಡಿಜೆ ಸೌಂಡ್‌ಗೆ ಭರ್ಜರಿ ನೃತ್ಯ ಮಾಡಿತು.

ಮೆರವಣಿಗೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಎಮ್‌.ಆರ್. ಪಾಟೀಲ್ ಭಾಗಿಯಾದರು.

ʻʻʻಗಣೇಶ ಪ್ರತಿಷ್ಠಾಪನೆಗೆ ಅಂಜುಮನ್‌ನವರು ಅನವಶ್ಯಕ ವಿರೋಧ ಮಾಡಿದ್ರು. ಮಹಾನಗರ ಪಾಲಿಕೆ ವಿರೋಧ ಪಕ್ಷ ಕಾಂಗ್ರೆಸ್ ನಾಯಕರೂ ವಿರೋಧ ಮಾಡಿದ್ರು. ಕೋರ್ಟ್ ಆದೇಶದಂತೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದೇವೆ. ವಿಜ್ರಂಭಣೆಯಿಂದ ಗಣೇಶ ಉತ್ಸವ ಮಾಡುತ್ತಿದ್ದೇವೆ. ನಾವು ಯಾರ ತಂಟೆಗೂ ಹೋಗಲ್ಲಾ, ನಮ್ಮ ತಂಟೆಗೆ ಬಂದರೆ ಬಿಡಲ್ಲʼʼ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

Exit mobile version