ಬೆಂಗಳೂರು: ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್, ಜೆಡಿಎಸ್ ಸಿದ್ಧವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ. ರಾಜ್ಯದ ಹಲವು ಕ್ಷೇತ್ರಗಳಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ರಾಮನಗರ, ಕನಕಪುರ, ಚನ್ನಪಟ್ಟಣ ಸೇರಿದಂತೆ ಹಲವು ಕಡೆ ಒಳ ಒಪ್ಪಂದ ಆಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (basavaraj bommai) ಹೇಳಿದ್ದಾರೆ.
ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ಗೆಲ್ಲುವುದಕ್ಕೆ ದುರ್ಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದಾರೆ. ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದಕ್ಕೆ ಕಾಂಗ್ರೆಸ್ ದುರ್ಬಲ ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಅನುಕೂಲವಾಗಲು ಕಾಂಗ್ರೆಸ್ ವೀಕ್ ಅಭ್ಯರ್ಥಿ ಹಾಕಿದ್ದಾರೆ ಎಂದು ಹೇಳಿದರು.
ಲಿಂಗಾಯತ ಸಮುದಾಯದ ಡ್ಯಾಮ್ ಒಡೆದಿದೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜಕೀಯ ಲಾಭ ಮಾಡಿಕೊಳ್ಳಲು ಡಿಕೆಶಿ ಸಮುದಾಯವನ್ನು ಡ್ಯಾಮ್‌ಗೆ ಹೋಲಿಸಿದ್ದಾರೆ. ಇವರು 2018ರಲ್ಲೂ ಸಮುದಾಯ ಒಡೆಯಲು ಹೋಗಿ ಕಾಂಗ್ರೆಸ್‌ಗೆ ಯಾವ ಪರಿಸ್ಥಿತಿ ಬಂತು ಎಂದು ನೋಡಿದ್ದೇವೆ. ಮತ್ತೆ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಲಿಂಗಾಯತ ಸಮುದಾಯ ಬಿಜೆಪಿ ಜತೆ ಇದೆ.
ಲಿಂಗಾಯತ ಸಮುದಾಯದವರು ಭ್ರಷ್ಟಾಚಾರ ಮಾಡಿದ್ದಾರೆಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ಒಂದು ಸಮುದಾಯವನ್ನ ಭ್ರಷ್ಟ ಎಂದು ಹೇಳ್ತೀರಾ? ಒಬ್ಬ ಮುಖ್ಯಮಂತ್ರಿಯಾಗಿ, ವಿಪಕ್ಷ ನಾಯಕರಾಗಿ ಕೆಲಸ ಮಾಡ್ತಿರುವ ಮುಖಂಡರು ಈ ರೀತಿ ಮಾತನಾಡಿದ್ದಾರೆ. ಸಮುದಾಯ ಇದನ್ನ ಗಂಭೀರವಾಗಿ ಪರಿಗಣಿಸಿದೆ. ಈ ಚುನಾವಣೆಯಲ್ಲಿ ಜನ ಬುದ್ಧಿ ಕಳಿಸುತ್ತಾರೆ. ಕಾಂಗ್ರೆಸ್ ಜಾತಿ ಮತ್ತು ಧರ್ಮ ಹೊಡೆಯುವ ಕೆಲಸ ಮಾಡ್ತಿದೆ ಎಂದಿದ್ದಾರೆ.
ಅಮುಲ್ ವರ್ಸಸ್ ನಂದಿನಿ ವಿಚಾರದಲ್ಲಿ ಪ್ರತಿಕ್ರಿಯಿಸಿ, ಅಮಲ್ ಉತ್ಪನ್ನಗಳು ನಲವತ್ತು ವರ್ಷಗಳಿಂದ ರಾಜ್ಯದಲ್ಲಿ ಇವೆ. ನಮ್ಮ ನಂದಿನಿ ಸಹ ಹೊರ ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದೇವೆ. ನಲವತ್ತು ವರ್ಷಗಳಲ್ಲಿ ಬಹುತೇಕ ಕಾಂಗ್ರೆಸ್ ಆಡಳಿತದಲ್ಲಿ ಇದೆ. ಆಗ ಯಾಕೆ ಇದರ ಚರ್ಚೆ ಆಗಲಿಲ್ಲ? ಅಮುಲ್ ನಿಷೇಧ ಮಾಡಲಿಲ್ಲ? ನಮ್ಮ ರೈತರನ್ನ ರಕ್ಷಣೆ ಮಾಡುವುದು ಗೊತ್ತು, ನಂದಿನಿ ಉಳಿಸಿಕೊಳ್ಳುವುದು ಗೊತ್ತು. ಆಗ ಕಾಂಗ್ರೆಸ್‌ನವರು ಅಮುಲ್ ಬೇಬಿಗಳಗಿದ್ರಾ? ಈ ಗಿಮಿಕ್‌ಗಳು ಜನರ ಮುಂದೆ ನಡೆಯಲ್ಲ ಎಂದರು.
ಇದನ್ನೂ ಓದ: Karnataka Election 2023: ಚುನಾವಣಾ ಅಕ್ರಮ; ಸಕ್ಕರೆ ಕಾರ್ಖಾನೆಯಲ್ಲಿ ಪತ್ತೆಯಾದವು ಫಳಫಳ ಹೊಳೆಯುವ ಬೆಳ್ಳಿ ದೀಪಗಳು