ಬೆಂಗಳೂರು: ರಾಜ್ಯ ಬಿಜೆಪಿಯು (BJP Karnataka) ವಿಧಾನಸಭೆ ಚುನಾವನೆಯಲ್ಲಿ ಸೋತ ನಂತರದಲ್ಲಿ ನಿರಂತರ ವಾಗ್ದಾಳಿ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಾಯಕರ ಎದುರು ವಿಚಾರಣೆಗೆ ಶುಕ್ರವಾರ ಹಾಜರಾದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿ.ಎಸ್. ಯಡಿಯೂರಪ್ಪ, ಪ್ರಲ್ಹಾದ ಜೋಶಿ ಅವರ ಸಮ್ಮುಖದಲ್ಲಿ ತಮ್ಮ ಸ್ಪಷ್ಟೀಕರಣ ನೀಡಿದರು.
ಈ ವೇಳೆ ತಮ್ಮ ಎಂದಿನ ಧಾಟಿಯಲ್ಲೇ ಬಡಬಡನೆ ಬಸನಗೌಡ ಪಾಟೀಲ್ ಯತ್ನಾಳ್ ಮಾತಾಡಿದ್ದಾರೆ. ನನ್ನ ಭಾಷಣದಲ್ಲಿ ಆಡಿರುವ ಮಾತು ಯಾವುದಾದರೂ ಪಕ್ಷದ ವಿರುದ್ದ ಇದೆಯಾ.? ರೆಕಾರ್ಡ್‌ಗಳನ್ನು ತರಿಸಿಕೊಂಡು ನೋಡಿ. ನಾನು ಯಾರನ್ನು ಸೋಲಿಸಲು ಕೆಲಸ ಮಾಡಿಲ್ಲ. ಇನ್ನೂ ನನ್ನನ್ನೇ ಸೋಲಿಸಲು ಪ್ರಯತ್ನ ಪಟ್ಟಿದ್ಸಾರೆ.
ಈಗ ನನ್ನ ವಿರುದ್ಧ ಆರೋಪ ಮಾಡಿರುವವರೇ ನನ್ನನ್ನು ಸೋಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ನಾನು ಸ್ಥಳೀಯವಾಗಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಾನು ಅಂದರೆ ಬಿಜೆಪಿ, ಬಿಜೆಪಿ ಅಂದರೆ ನಾನು. ನಾನು ಒಬ್ಬ ಬಿಜೆಪಿಯ ಶಿಸ್ತಿನ ಸಿಪಾಯಿ. ನಾನು ಯಾರ ವಿರುದ್ದವೇ ಆಗಲಿ, ಪಕ್ಷದ ವಿರುದ್ದವೇ ಆಗಲಿ ಮಾತಾಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ.
ಸುಮಾರು 25 ನಿಮಿಷಗಳ ಕಾಲ ಮಾತುಕತೆ ನಡೆಸಿದ ಯತ್ನಾಳ್, ತಮ್ಮನ್ನು ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಯತ್ನಾಳ್ ಮಾತಾಡ್ತಿರೋದನ್ನು ಬರೀ ಸಮಚಿತ್ತವಾಗಿ ಕೇಳುತ್ತಾ ಸುಮ್ಮನೆ ಕೇಳಿಸಿಕೊಂಡು ಯಡಿಯೂರಪ್ಪ ಕುಳಿತಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟೀಕರಣ ನೀಡಿ ಹೊರಗೆ ಬರುವಾಗ ಬಂದ ಬಸವರಾಜ್ ಬೊಮ್ಮಾಯಿ ಒಳಗೆ ಹೋದರು. ಹೊರಗೆ ಬಂದ ನಂತರದಲ್ಲಿ ಮಾಧ್ಯಮಗಳಿಗೆ ಯಾವುದೇ ಹೇಳಿಕೆಯನ್ನೂ ಬಸನಗೌಡ ಪಾಟೀಲ್ ಯತ್ನಾಳ್ ನೀಡದೆ ಹೊರನಡೆದರು.
ಹೊರಗೆ ಹೋದ ನಂತರ ಯಾವುದೇ ಮಾಧ್ಯಮ ಹೇಳಿಕೆಗಳನ್ನೂ ಸಭೆಯ ಕುರಿತಾಗಿ ನೀಡದಂತೆ ನಳಿನ್ ಕುಮಾರ್ ಕಟೀಲ್ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ
ವಿಜಯಪುರದಲ್ಲಿ ಹೊಂದಾಣಿಕೆ ರಾಜಕಾರಣದ ಕುರಿತು ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾತನಾಡಿದ್ದ ಎ.ಎಸ್. ಪಾಟೀಲ್ ನಡಹಳ್ಳಿ ಸಹ ಸ್ಪಷ್ಟೀಕರಣ ನೀಡಿದರು. ಹೊಂದಾಣಿಕೆ ರಾಜಕಾರಣ ಎಲ್ಲರಿಗೂ ಗೊತ್ತಿರುವ ಸತ್ಯ. ಯತ್ನಾಳ್ ಹೊಂದಾಣಿಕೆ ಎಷ್ಟಿದೆ ಅನ್ನೋದನ್ನ ಜಿಲ್ಲೆಗೆ ಬಂದು ಅಭಿಪ್ರಾಯಗಳನ್ನು ಕೇಳಿ ಗೊತ್ತಾಗುತ್ತದೆ. ಯತ್ನಾಳ್ ಸೇರಿ ಹಲವರು ಬಹಿರಂಗವಾಗಿ ಮಾತನಾಡುತ್ತಿದ್ದರು. ನಾವು ಅದಕ್ಕೇ ಮಾತಾಡಿದ್ದು. ಅದರಲ್ಲಿ ತಪ್ಪೇನಿದೆ..!? ಈಗ ನೀವು ಮಾತಾಡಬೇಡಿ ಅಂದಿದ್ದೀರಿ.. ಮಾತಾಡಲ್ಲ.. ಆದ್ರೆ ಲೋಕಸಭೆ ಚುನಾವಣೆಗೆ ವಿಧಾನಸಭೆ ಚುನಾವಣೆಯಲ್ಲಿ ಆಗದಂತೆ ಎಚ್ಚರವಹಿಸಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಪ್ರತಾಪ್ ಸಿಂಹ
ಸಂಸದ ಪ್ರತಾಫ್ ಸಿಂಹ ಸಹ ನಾಯಕರ ಎದುರು ಹಾಜರಾಗಿ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಹೇಳಿದರಲ್ಲಿ ಯಾವುದೇ ತಪ್ಪು ಇಲ್ಲ. ನಾನು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದೇನೆ. ನಮ್ಮದು 40% ಸರ್ಕಾರ ಎಂದು ಆರೋಪ ಮಾಡಿದ್ದಿರಿ, ನಿಮ್ಮ ಸರ್ಕಾರದ ಅವಧಿಯಲ್ಲಿ ಅರ್ಕಾವತಿ ಡಿನೋಟಿಫಿಕೇಷನ್ ಹಗರಣ ಆಗಿದೆ, ಎರಡು ತನಿಖೆ ಮಾಡಿ ಇಲ್ಲ ಅಂದ್ರೆ ಹೊಂದಾಣಿಕೆ ಎಂದು ಜನರು ಮಾತನಾಡಿಕೊಳ್ತಾರೆ ಎಂದಿದ್ದೆ.
ಇದನ್ನೂ ಓದಿ: BJP Karnataka: ನೋಟಿಸ್‌ಗೆ ಡೋಂಟ್ ಕೇರ್, ಆಫೀಸಿಂದಲೂ ದೂರ: ಮತ್ತೆ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ
ಇದರಲ್ಲಿ ಪಕ್ಷಕ್ಕೆ ಡ್ಯಾಮೇಜ್ ಎಲ್ಲಿ ಆಗಿದೆ? ಮಾತನಾಡಬೇಡಿ ಅಂದ್ರೆ ಇನ್ನೂ ಮಾತನಾಡಲ್ಲ. ಆದರೆ ಸರ್ಕಾರವನ್ನ ಪ್ರಶ್ನೆ ಮಾಡುವುದು ತಪ್ಪೇ? ಎಂದು ಮರುಪ್ರಶ್ನೆ ಹಾಕಿದ್ದಾರೆ. ಪಕ್ಷಕ್ಕೆ ಮುಜುಗರ ಹೇಳಿಕೆ ಕೊಡುವುದು ಬೇಡ. ಆ ರೀತಿ ಇದ್ರೆ ಪಕ್ಷದ ವೇದಿಕೆಯಲ್ಲಿ ಮಾತನಾಡಿ ಎಂದು ಕಟೀಲ್ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕಟೀಲ್ ಹೇಳಿಕೆ
ಸಭೆಯ ನಂತರದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಸರ್ಕಾರದ ವಿರುದ್ಧ ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ. ನಾಲ್ಕನೇ ತಾರೀಖಿನಿಂದ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ. ಪಕ್ಷ ವಿರೋಧಿ ಹೇಳಿಕೆ ಕೊಟ್ಟವರನ್ನ ಕರೆದು ಮಾತನಾಡಿದ್ದೇವೆ. ಮತ್ತೆ ಮಾತನಾಡದಂತೆ ಸೂಚನೆ ನೀಡಿದ್ದೇವೆ. ಮತ್ತೆ ಮಾತನಾಡಿದ್ರೆ ಶಿಸ್ತು ಕ್ರಮದ ಎಚ್ಚರಿಕೆ ಕೊಡಲಾಗಿದೆ. ಇಲ್ಲಿಯವರೆಗೂ ಹನ್ನೊಂದು ಜನರಿಗೆ ನೋಟೀಸ್ ನೀಡಿದ್ದೇವೆ ಎಂದರು.
ಶಿಸ್ತು ಸಮಿತಿ ಬುಲಾವ್
ಬಸನಗೌಡ ಪಾಟೀಲ್ ಯತ್ನಾಳ್, ಎ.ಎಸ್. ಪಾಟೀಲ್ ನಡಹಳ್ಳಿ, ರೇಣುಕಾಚಾರ್ಯ, ಪ್ರತಾಪ ಸಿಂಹ, ಭಗವಂತ ಖೂಬಾ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ತಮ್ಮೇಶ್ ಗೌಡ, ಮುನಿರಾಜು, ಕೆ.ಎಸ್. ಈಶ್ವರಪ್ಪ, ಸಿ.ಪಿ. ಯೋಗಿಶ್ವರ್, ವೀರಣ್ಣ ಚರಂತಿಮಠ.