Site icon Vistara News

ಬಿಬಿಎಂಪಿ ಶಾಲಾ ಶಿಕ್ಷಕರಿಗೆ ಇನ್ನು ವಿದೇಶ ಪ್ರವಾಸ ಯೋಗ, ಹೇಗೆ ಗೊತ್ತೆ?

School Problems

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಶಾಲಾ ಶಿಕ್ಷಕರು ಇನ್ನು ಬಿಬಿಎಂಪಿ ಪ್ರಾಯೋಜನೆಯಲ್ಲಿ ವಿದೇಶ ಪ್ರವಾಸ ಮಾಡಬಹುದು. ಸುಮ್ಮನೇ ಅಲ್ಲ. ಶಾಲೆಗೆ ನೂರಕ್ಕೆ ನೂರರಷ್ಟು ಫಲಿತಾಂಶ ಬಂದರೆ ಮಾತ್ರ!

ಶಾಲಾ ಫಲಿತಾಂಶವನ್ನು ವೃದ್ಧಿಸಲು ಈ ವಿನೂತನ ಯೋಜನೆ ಕೈಗೊಳ್ಳಲಾಗಿದೆ. ಬಳ್ಳಾರಿಯಲ್ಲಿಯೂ ಹಿಂದೆ ಇದೇ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಘೋಷಣೆಯ ಬಳಿಕ 70ರಿಂದ 80 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದವು. ಈ ಪರಿಣಾಮ ನೋಡಿ ಇಲ್ಲೂ ಯೋಜನೆ ವಿಸ್ತರಿಸಲು ಚಿಂತಿಸಲಾಗಿದೆ.

ಶೇಕಡ ನೂರು ಫಲಿತಾಂಶ ಪಡೆದ ಶಾಲಾ ಶಿಕ್ಷಕರಿಗೆ ಶೈಕ್ಷಣಿಕ ಪ್ರವಾಸದಂತಹ ಕೊಡುಗೆಗಳನ್ನು ನೀಡುವ ಮೂಲಕ ಶೈಕ್ಷಣಿಕತೆಗೆ ಮತ್ತಷ್ಟು ಉತ್ತೇಜನ ನೀಡಲು ಪಾಲಿಕೆ ಮುಂದಾಗಿದ್ದು, ವಿನೂತನ ಯೋಜನೆಯ ರೂಪುರೇಷೆ ರೂಪಿಸಲಾಗುತ್ತಿದೆ. ಈ ಯೋಜನೆಗೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಉಪಯೋಗಿಸಿಕೊಳ್ಳಲು ಚಿಂತನೆ ನಡೆದಿದ್ದು, ಮೇಲಧಿಕಾರಿಗಳ ಅನುಮತಿ ಸಿಕ್ಕ ಮೇಲೆ ಪ್ರಕಟಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಆದರೆ ಈ ಯೋಜನೆಗೂ ಮುನ್ನ ಬಿಬಿಎಂಪಿ ಶಾಲೆಗಳಲ್ಲಿನ ಮೂಲಸೌಕರ್ಯ ಉನ್ನತೀಕರಣ, ಪಾತಾಳಕ್ಕಿಳಿದಿರುವ ಹಾಜರಾತಿ- ನೋಂದಣಿ ಹೆಚ್ಚಳ, ಮೂಲಭೂತ ಅಗತ್ಯ ಸೌಕರ್ಯಗಳ ಅಳವಡಿಕೆ ಆಗಬೇಕು ಎಂದು ಶಿಕ್ಷಕರು ಹೇಳುತ್ತಿದ್ದಾರೆ.

ಇದನ್ನೂ ಓದಿ | ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಧ್ಯಾನ ಮಾಡಿಸಲು ಶಿಕ್ಷಣ ಸಚಿವರ ಸೂಚನೆ

Exit mobile version