Site icon Vistara News

Belagavi Politics | ಜಾರಕಿಹೊಳಿ ಸಹೋದರರನ್ನು ಒಟ್ಟುಗೂಡಿಸಿದ ಲಕ್ಷ್ಮೀ!

ಬೆಳಗಾವಿ: ಬೆಳಗಾವಿ ರಾಜಕೀಯದಲ್ಲಿ (Belagavi Politics) ಜಾರಕಿಹೊಳಿ ಕುಟುಂಬದವರ ಪಾತ್ರ ಬಹಳ ದೊಡ್ಡದಿದೆ. ಒಬ್ಬರಲ್ಲಾ ಒಬ್ಬರು ಅಧಿಕಾರದಲ್ಲಿ ಇದ್ದೇ ಇರುತ್ತಾರೆ. ಹಾಗೇ ಪಕ್ಷದ ವಿಷಯ, ರಾಜಕೀಯ ಸಂದರ್ಭ ಬಂದಾಗ ಸದಾ ಬದ್ಧ ವೈರಿಗಳಂತೆ ಪರಿಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ನಿರತರಾಗುವ ಸಹೋದರರನ್ನು ಸೋಮವಾರ (ಅ.೨೪) “ಲಕ್ಷ್ಮೀ” ಒಂದು ಮಾಡಿದ್ದಾಳೆ.

ರಾಜಕೀಯ ಏನೇ ಇರಲಿ, ಕುಟುಂಬ ಎಂದು ಬಂದಾಗ ಒಬ್ಬರನ್ನೊಬ್ಬರು ಬಿಟ್ಟುಕೊಡದ, ಸಂಪ್ರದಾಯಕ್ಕೆ ಬೆಲೆ ಕೊಡುತ್ತಾ ಬಂದಿರುವ ಜಾರಕಿಹೊಳಿ ಕುಟುಂಬವು ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದಾಗುತ್ತದೆ. ದೀಪಾವಳಿಯ ಭಾಗವಾಗಿ ನಡೆಯುವ ಲಕ್ಷ್ಮೀಪೂಜೆಯಲ್ಲಿ ಗೋಕಾಕ ನಗರದ ಹೊಸಪೇಟ ಗಲ್ಲಿಯ ಕಚೇರಿಯಲ್ಲಿ ಇಡಿ ಕುಟುಂಬದವರು ಭಾಗಿಯಾಗಿದ್ದಾರೆ.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಂದ ಲಕ್ಷ್ಮೀ ಪೂಜೆ ನೆರವೇರಿದೆ. ಈ ವೇಳೆ ಮಾಜಿ ಸಚಿವ ರಮೇಶ್ ‌ಜಾರಕಿಹೊಳಿ, ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ, ಭೀಮಶಿ ಜಾರಕಿಹೊಳಿ ಪುತ್ರರಾದ ಸನತ್, ಸರ್ವೋತ್ತಮ ಜಾರಕಿಹೊಳಿ ಭಾಗಿಯಾಗಿದ್ದರು.

ಇದನ್ನೂ ಓದಿ | ಸರ್ಕಾರ ಉರುಳಿಸೋ ಶಕ್ತಿ ರಮೇಶ್‌ ಜಾರಕಿಹೊಳಿಗೆ ಮಾತ್ರವಿದೆ; ಇನ್ನೊಮ್ಮೆ ಸರ್ಕಾರ ಬೀಳಿಸಲಿ: ಸತೀಶ್‌ ಜಾರಕಿಹೊಳಿ ಪ್ರಾರ್ಥನೆ

Exit mobile version