Site icon Vistara News

Love Case : ಪ್ರೇಮಿ ಜತೆ ಓಡಿಹೋದ 2 ಮಕ್ಕಳ ತಾಯಿ ; ಸಿಟ್ಟಿಗೆದ್ದ ಗಂಡನಿಂದ ಲವರ್‌ ಮನೆ ಧ್ವಂಸ

Love Case in Belagavi

ಚಿಕ್ಕೋಡಿ: ವಿವಾಹಿತ ಮಹಿಳೆಯೊಬ್ಬಳು ತಾನು ಪ್ರೇಮಿಸುತ್ತಿದ್ದ ವಿವಾಹಿತ ಪುರುಷನ ಜತೆ ಪರಾರಿಯಾಗಿದ್ದಾಳೆ (woman elopes with Married lover). ಇದರಿಂದ ಸಿಟ್ಟಿಗೆದ್ದ ಗಂಡನ ಮನೆಯವರು ಪ್ರೇಮಿ ಯುವಕನ ಮನೆಗೆ ತಂಡ ಕಟ್ಟಿಕೊಂಡು ಹೋಗಿ ದಾಳಿ ಮಾಡಿದ್ದಾರೆ (Husband attacks on lovers house). ಈ ಘಟನೆ (Love Case) ನಡೆದಿರುವುದು ಬೆಳಗಾವಿ ಜಿಲ್ಲೆಯ (Belagavi News) ಹುಕ್ಕೇರಿ ತಾಲೂಕಿನ ಜಿನ್ರಾಳ ಗ್ರಾಮದಲ್ಲಿ.

ಜಿನ್ರಾಳ ಗಾಮದ ರೇಣುಕಾ ವಾಲಿಕಾರ್‌ ಮತ್ತು ಲಗಮನ್ನ ವಾಲಿಕಾರ್‌ (34) ಎಂಬವರ ಮಧ್ಯೆ ಕಳೆದ ಕೆಲವು ಸಮಯದಿಂದ ಲವ್ವಿ ಡವ್ವಿ ಇತ್ತು. ರೇಣುಕಾಗೆ ಮದುವೆಯಾಗಿ ಇಬ್ಬರು ಮಕ್ಕಳು ಬೇರೆ ಇದ್ದಾರೆ. ಲಗಮನ್ನ ವಾಲಿಕಾರ್‌ ಕೂಡಾ ವಿವಾಹಿತ. ಅವನಿಗೆ ಒಬ್ಬ ಮಗನಿದ್ದಾನೆ. ಅವರಿಬ್ಬರೂ ಪರಸ್ಪರ ಮಾತನಾಡಿಕೊಂಡು ಮಂಗಳವಾರ ರಾತ್ರಿ ಊರಿಂದಲೇ ಪರಾರಿಯಾಗಿದ್ದಾರೆ. ಇದರಿಂದ ಕೆರಳಿದ ಗಂಡನ ಮನೆಯವರು ರೇಣುಕಾಳ ಪ್ರೇಮಿಯ ಮನೆ ಮೇಲೆ ದಾಳಿ ಮಾಡಿದ್ದಾರೆ.

ಲಗಮನ್ನಾ ವಾಲಿಕಾರ್‌ ಮನೆಯಲ್ಲಿ ತಾಯಿ ಶಾಂತವ್ವ ಮತ್ತು ಇತರರು ವಾಸವಾಗಿದ್ದಾರೆ. ರೇಣುಕಾ ಲಗಮನ್ನನ ಜತೆ ಪರಾರಿಯಾಗಿದ್ದನ್ನು ತಿಳಿದ ಗಂಡನ ಮನೆಯವರು ಸೇರಿ ಶಾಂತವ್ವ ವಾಸವಿದ್ದ ಮನೆ ಮೇಲೆ ಅಟ್ಯಾಕ್ ಮಾಡಿದ್ದಾರೆ. ಮನೆಯ ಮೇಲೆ ಕಲ್ಲು ತೂರಿ, ಪೀಠೋಪಕರಣ, ಅಡುಗೆ ಸಾಮಗ್ರಿ ಸೇರಿದಂತೆ ಎಲ್ಲ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.

30ಕ್ಕೂ ಅಧಿಕ ಜನರು ಇರುವ ತಂಡ ಮನೆಯ ಮೇಲೆ ಅಟ್ಯಾಕ್ ಮಾಡಿದೆ. ದುಷ್ಕರ್ಮಿಗಳು ಕೈಯಲ್ಲಿ ಕುಡುಗೋಲು, ಕೊಡ್ಲಿ, ಕಟ್ಟಿಗೆ ಹಿಡಿದುಕೊಂಡು ಅಟ್ಯಾಕ್ ಮಾಡಿ‌ದ್ದಾರೆ ಎಂದು ಆರೋಪಿಸಲಾಗಿದೆ.

ಮನೆಯಲ್ಲಿ ಲಗಮನ್ನ ವಾಲೀಕಾರ್‌ನ ತಾಯಿ, ಅಜ್ಜಿ ಮತ್ತು ಹೆಂಡತಿ ಹಾಗೂ ಮಗ ಇದ್ದರು. ಅವರು ಹತ್ತಾರು ಮಂದಿ ಮನೆಯತ್ತ ಧಾವಿಸಿ ಬರುತ್ತಿರುವ ಸುದ್ದಿ ಕೇಳಿ ಪಕ್ಕದ ಮನೆಯಲ್ಲಿ ಅಡಗಿ ಕುಳಿತಿದ್ದರು. ಹೀಗಾಗಿ ಅವರ ಪ್ರಾಣಕ್ಕೆ ಏನೂ ಅಪಾಯ ಉಂಟಾಗಿಲ್ಲ.

ಮಗ ಮಾಡಿದ ತಪ್ಪಿಗೆ ತಾಯಿಯ ಮನೆಯನ್ನ ನಾಶ ಮಾಡಿ ಅಟ್ಟಹಾಸಗೈದ ದುಷ್ಕರ್ಮಿಗಳು ಮನೆಯನ್ನು ಬಹುತೇಕ ಧ್ವಂಸಗೊಳಿಸಿದ್ದಾರೆ. ಇದರ ಜತೆಗೆ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ : Love Case : ರೊಟ್ಟಿ ಮಾರೋ ಆಂಟಿ- ಡ್ರೈವರ್‌ ಅಂಕಲ್‌ ಲವ್‌ ಸ್ಟೋರಿಗೆ ಬಿತ್ತು ಬೆಂಕಿ!

ಮಹಿಳೆಯ ಮಾವ ಸಾಮಯ್ಯ ವಾಲಿಕಾರ್, ಕೆಂಪಣ್ಣ ವಾಲಿಕಾರ್, ರೇಣುಕಾ ಗಂಡ ದುಂಡಪ್ಪ ಫಕ್ಕೀರಪ್ಪ ವಾಲಿಕಾರ್, ಭಾಮೈದ ನಿಂಗಪ್ಪ ವಾಲಿಕಾರ್, ಭರಮಾ ವಾಲಿಕಾರ್, ಹನುಮಂತ ಲಗಮಾ ವಾಲಿಕಾರ್, ನಿಂಗಪ್ಪ ಲಗಮಾ ವಾಲಿಕಾರ್, ಲಗಮಾ ಯಲಗುಂಡ ವಾಲಿಕಾರ್ ಸೇರಿ ಹಲವರಿಂದ ದಾಳಿ ನಡೆದಿದೆ ಎಂದು ದೂರು ನೀಡಲಾಗಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version