Site icon Vistara News

ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

suicide news

ಬೆಳಗಾವಿ: ಇಬ್ಬರು ಮಕ್ಕಳನ್ನು ಕೊಂದು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವಟ್ನಾಳ ಬಳಿ ನವಿಲುತೀರ್ಥ ಜಲಾಶಯದಲ್ಲಿ ನಡೆದಿದೆ.

ವಟ್ನಾಳ ಬಳಿ ನವಿಲುತೀರ್ಥ ಜಲಾಶಯದ ಹಿನ್ನೀರಿಗೆ ಇಬ್ಬರು ಮಕ್ಕಳನ್ನು ಎಸೆದು ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ತನುಜಾ ಗೋಡಿ (32) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿನ್ನೀರಿನಲ್ಲಿ ಮೂವರ ಶವಗಳು ಪತ್ತೆಯಾಗಿವೆ. ಮೊದಲು ಮಕ್ಕಳಾದ 4 ವರ್ಷದ ಸುದೀಪ್, 3 ವರ್ಷದ ರಾಧಿಕಾರನ್ನು ನೀರಿಗೆ ಎಸೆದಿದ್ದ ತಾಯಿ ತನುಜಾ ಬಳಿಕ ತಾನೂ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಹೊರತಗೆದಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಇದನ್ನೂ ಓದಿ | Suicide Case | ಭದ್ರಾವತಿಯಲ್ಲಿ ಬಸ್‌ನಿಂದ ಹಾರಿದ ವ್ಯಕ್ತಿ; ವಿಜಯನಗರದಲ್ಲಿ ಸಾಲ ಬಾಧೆಗೆ ವಿಷ ಸೇವಿಸಿ ರೈತ ಆತ್ಮಹತ್ಯೆ

Exit mobile version