Site icon Vistara News

ಬೆಳಗಾವಿ ಅಧಿವೇಶನ | ಆರ್‌ಎಸ್‌ಎಸ್‌ ವಿರುದ್ಧ-ಕಾಂಗ್ರೆಸ್‌ ವಿರುದ್ಧ ಸದನಕ್ಕೆ ದಾಖಲೆ ನೀಡಿದ ಪ್ರಿಯಾಂಕ್‌ ಖರ್ಗೆ ಮತ್ತು ಸಿ.ಟಿ. ರವಿ

priyank kharge and ct ravi submits supportive doccuments to their statements

ವಿಧಾನಸಭೆ: ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಸಮಯದಲ್ಲಿ ಚರ್ಚೆಯಾಗಿ ಪರಸ್ಪರ ಸವಾಲೊಡ್ಡುಕೊಂಡಿದ್ದ ಬಿಜೆಪಿ ಹಾಗೂ ಕಾಂಗ್ರೆಸ್‌ ಶಾಸಕರು ಸದನಕ್ಕೆ ಮಂಗಳವಾರ ದಾಖಲೆಗಳನ್ನು ಸಲ್ಲಿಸಿದರು.

ಮೀಸಲಾತಿ ಹೆಚ್ಚಳ ಸಂದರ್ಭದಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ಶಾಸಕ ಪ್ರಯಾಂಕ್‌ ಖರ್ಗೆ, ಹಿಂದು ಕೋಡ್‌ ಬಿಲ್‌ ಹಾಗೂ ಸಂವಿಧಾನವನ್ನು ಆರ್‌ಎಸ್‌ಎಸ್‌ ವಿರೋಧಿಸಿತ್ತು ಎಂದು ಕಳೆದ ವಾರ ಆರೋಪಿಸಿದ್ದರು. ಆರ್‌ಎಸ್‌ಎಸ್‌ ಎಂದಿಗೂ ಸಾಮಾಜಿಕ ನ್ಯಾಯದ ಪರವಾಗಿರಲಿಲ್ಲ ಎಂದಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿದ್ದ ಸಿ.ಟಿ. ರವಿ, ಆರ್‌ಎಸ್‌ಎಸ್‌ ವಿರುದ್ಧ ಹಾಗೆಲ್ಲ ಸುಳ್ಳ ಆರೋಪ ಮಾಡಬಾರದು. ಡಾ. ಬಿ.ಆರ್‌. ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್‌. ಅದಕ್ಕೆ ನಾನು ಸಾಕ್ಷ್ಯ ಒದಗಿಸುತ್ತೇನೆ. ಪ್ರಿಯಾಂಕ್‌ ಖರ್ಗೆ ಅವರೂ ತಮ್ಮ ಮಾತಿಗೆ ದಾಖಲೆ ನೀಡಲಿ. ಇಲ್ಲದಿದ್ದರೆ ಅದನ್ನು ಕಡತದಿಂದ ತೆಗೆದುಹಾಕಲಿ. ನನ್ನ ಮಾತು ಸುಳ್ಳು ಎಂದು ಸಾಬೀತಾದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು.

ಇಬ್ಬರೂ ತಮ್ಮ ವಾದಗಳಿಗೆ ದಾಖಲೆಗಳನ್ನು ಸಲ್ಲಿಸುವಂತೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದರು. ಅದರಂತೆ ಮಂಗಳವಾರ ಇಬ್ಬರೂ ಶಾಸಕರು ತಂತಮ್ಮ ವಾದಕ್ಕೆ ದಾಖಲೆಗಳನ್ನು ಸದನಕ್ಕೆ ಸಲ್ಲಿಕೆ ಮಾಡಿದರು.

ಇದನ್ನೂ ಓದಿ | ‌Talk War | ಸಿ.ಟಿ. ರವಿ ಕಳ್ಳಬಟ್ಟಿ ಕುಡಿದು ಮಾತಾಡುತ್ತಿದ್ದಾರೆ ಎಂದ ಬಿ.ಕೆ. ಹರಿಪ್ರಸಾದ್;‌ ನಾನು ಕೊತ್ವಾಲ್‌ ಶಿಷ್ಯ ಅಲ್ಲ ಎಂದ ರವಿ

Exit mobile version