Site icon Vistara News

Suicide | ಕಟ್ಟಡದ ಮೇಲೆ ನೇತಾಡುತ್ತಿದ್ದ ಶವ, ಬೆಚ್ಚಿಬಿದ್ದ ಸ್ಥಳೀಯರು

Suicide

ಬೆಳಗಾವಿ: ಎಂದಿನಂತೆ ಬೆಳಗ್ಗೆ ವಾಕಿಂಗ್‌ – ಜಾಗಿಂಗ್‌ಗೆ ಎಂದು ಮನೆಯಿಂದ ಹೊರಗೆ ಬಂದ ಇಲ್ಲಿನ ಶಾಹುನಗರದ ಸ್ಥಳೀಯರಿಗೆ ಒಂದು ಕ್ಷಣ ಎದೆ ಝಲ್‌ ಎಂದಿತ್ತು.

ಶಾಹುನಗರದ ಕೊನೆಯ ಬಸ್ ನಿಲ್ದಾಣದ ಬಳಿ ಇರುವ ಬಸವೇಶ್ವರ ನಿಲಯ ಎಂಬ ಅಪಾರ್ಟ್ಮೆಂಟ್ ಗ್ಯಾಲರಿಗೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ 45 ವರ್ಷದ ಶಿವಾಜಿ ಬಿರ್ಜೆ ಎಂದು ತಿಳಿದು ಬಂದಿದೆ. ಶಾಹುನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವಾಜಿ ಬಿರ್ಜೆ ಟೆರೇಸ್ ಮೇಲೆ ಹತ್ತಿ ಗ್ಯಾಲರಿಗೆ ಹಗ್ಗ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ | Accident | ಬೆಳಗಾವಿಯಲ್ಲಿ ಭೀಕರ ಅಪಘಾತ, ಕ್ರೂಸರ್‌ ಪಲ್ಟಿಯಾಗಿ 7 ಜನ ಸಾವು, ಹಲವರ ಸ್ಥಿತಿ ಗಂಭೀರ

ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಶಿವಾಜಿ ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ.

ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | ಬೆಳಗಾವಿಯಲ್ಲಿ ಪಾರ್ಕಿಂಗ್‌ ವಿಚಾರದಲ್ಲಿ‌ ಗುಂಪು ಘರ್ಷಣೆ, ಒಬ್ಬರ ಹತ್ಯೆ, ವಾಹನಗಳಿಗೆ ಬೆಂಕಿ

Exit mobile version