ಬಳ್ಳಾರಿ: ಸಚಿವ ಶ್ರೀರಾಮುಲು ಅವರನ್ನು ಪೆದ್ದ ಎಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನವಶಕ್ತಿ ಸಮಾವೇಶದಲ್ಲಿ ಹರಿಹಾಯ್ದ ಸಿಎಂ ಬಸವರಾಜ ಬೊಮ್ಮಾಯಿ, ಮುಂದೊಂದು ದಿನ ಶ್ರೀರಾಮುಲು ಮುಖ್ಯಮಂತ್ರಿ ಆಗುವ ಕಾಲವೂ ಬರುತ್ತದೆ ಎಂದರು.
ಕೇಂದ್ರದಲ್ಲಿ ಶೇ.೩ ಇದ್ದದ್ದನ್ನು ಶೇ.೭ಕ್ಕೆ ಹೆಚ್ಚಳ ಮಾಡುವ ಮೂಲಕ ನಮ್ಮ ರಾಜ್ಯದ ನಿರ್ಧಾರಕ್ಕೆ ಅನುಕರಣೀಯ ಮಾರ್ಗವನ್ನು ತೋರಿದವರು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು.
ಕೊಟ್ಟ ಮಾತನ್ನು ತಪ್ಪದಿರುವವನೇ ರಾಮ. ಎಲ್ಲರನ್ನೂ ಸಮಾನವಾಗಿ ಕಾಣುವವನೇ ರಾಮ. ಶ್ರೀರಾಮಚಂದ್ರನಂತೆಯೇ ಈ ವಾಲ್ಮೀಕಿ ಸಮುದಾಯವೂ ಎಲ್ಲರಿಗೂ ಮಾದರಿಯಾಗಿ ದೇಶವನ್ನು ಕಟ್ಟುವ ಕೆಲಸವನ್ನು ಮಾಡಬೇಕು. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಸಮುದಾಯ, ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಬಹಮತಿ ಸುಲ್ತಾನರನ್ನು ಒದ್ದು ಓಡಿಸಿದ್ದು ಇದೇ ವಾಲ್ಮೀಕಿ ಸಮಾಜ, ಔರಂಗಜೇಬನನ್ನು ಮೆಟ್ಟಿ ನೀಂತಿದ್ದು ಇದೇ ಸಮುದಾಯದ ರಾಜ ವೆಂಕಟಪ್ಪ ನಾಯಕ, ಹೈದರಾಲಿಯನ್ನು ಎದುರಿಸಿ ನಿಂತಿದ್ದು ಮದಕರಿ ನಾಯಕ ಎಂದರು.
ಕಾಂಗ್ರೆಸ್‌ನವರು, ತಮ್ಮನ್ನು ಬಿಟ್ಟರೆ ಎಸ್‌ಸಿಎಸ್‌ಟಿ ಉದ್ಧಾರ ಆಗುವುದಿಲ್ಲ ಎನ್ನುತ್ತಿದ್ದರು. ಆ ಸಮುದಾಯಗಳಿಗೆ ಅರವತ್ತು ವರ್ಷದಲ್ಲಿ ಸ್ವಾಭಿಮಾನದ ಬದುಕನ್ನು ನೀಡಲಿಲ್ಲ. ಸಿದ್ರಾಮಣ್ಣ, ಇಲ್ಲಿ ಬಂದು ನೋಡಪ್ಪ. ಎಲ್ಲ ಎಸ್‌ಸಿಎಸ್‌ಟಿ ನಮ್ಮ ಜತೆಗೆ ಇದ್ದಾರೆ. ಇಲ್ಲಿದೆ ನೋಡು ನಿಜವಾದ ಅಹಿಂದ, ನೋಡು ಬಾ.
ವಾಲ್ಮೀಕಿ ಸಮುದಾಯಕ್ಕೆ ಪ್ರಾರಂಭದಲ್ಲಿ ನ್ಯಾಯವನ್ನು ಕೊಡುವ ಕೆಲಸ ಮಾಡಿದ್ದು ಪುಣ್ಯಾತ್ಮ ಯಡಿಯೂರಪ್ಪನವರು. ಕಾಂಗ್ರೆಸ್‌ನದ್ದು ಬಾಯಿಮಾತಿನ ಸಾಮಾಜಿಕ ನ್ಯಾಯ. ನಾವು ಮೀಸಲಾತಿಯನ್ನು ಕೊಟ್ಟು ಸುಮ್ಮನೆ ಕೂರುವುದಿಲ್ಲ. ಈ ಸಮುದಾಯದ ಕೊನೆಯ ವ್ಯಕ್ತಿಯೂ ಸಾಮಾಜಿಕವಾಗಿ, ಆರ್ಥಿಕವಾಗಿ ಮುನ್ನೆಲೆಗೆ ಬರುವವರೆಗೂ ನಾವು ಜತೆಗೆ ಇರುತ್ತೇವೆ ಎಂದರು.
ಎಸ್‌ಟಿ ಸಮುದಾಯ ಹೃದಯಗೆದ್ದ ಹೃದಯ ಸಾಮ್ರಾಟ್ ಶ್ರೀರಾಮುಲು ಎಂದ ಸಿಎಂ ಬೊಮ್ಮಾಯಿ, ಮೀಸಲಾತಿ ಹೆಚ್ಚಳಕ್ಕೆ ನನಗೆ ವಾಲ್ಮೀಕಿ, ಬುದ್ಧ, ಬಸವ ಸ್ಪೂರ್ತಿ. ಎಲ್ಲ ಮನಸ್ಸನ್ನು ಸಮಾನವಾಗಿ ನೋಡಬೇಕೆಂಬುದು ಮೀಸಲಾತಿ ಹೆಚ್ಚಳಕ್ಕೆ ಕಾರಣ. ಭಾರತ ಜೋಡೋದಲ್ಲಿ ಒಂದು ಸಣ್ಣ ಮೈದಾನದಲ್ಲಿ ಸಭೆ ಮಾಡಿ, ಕಾಂಗ್ರೆಸ್ ಸುನಾಮಿ ಮಾಡಿದೆ ಎಂದು ಹೇಳುತ್ತಾರೆ. ಇಲ್ಲಿ ಬಂದು ನೋಡಿ ಇದು ಸುನಾಮಿ, ಅದು ಸುನಾಮಿ ಅಲ್ಲ. ಬಳ್ಳಾರಿಗೆ ಮತ್ತು ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಸೋನಿಯಾ ಗಾಂಧಿ ಗೆದ್ದಾಗ ಕೃತಜ್ಞತೆ ತೋರಲಿಲ್ಲ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಸಮಿತಿ ರಚನೆ ಮಾಡಿದೆ, ಕಾಂಗ್ರೆಸ್ ಏನು ಮಾಡಲಿಲ್ಲ. ರಾಮುಲು ತನ್ನ ಮಾತಿಗೆ ಬದ್ಧವಾಗಿ ಕೆಲಸ ಮಾಡಿದ್ದಾನೆ. ಅವನ ರಕ್ತ ಪವಿತ್ರ ರಕ್ತ, ಅದರಿಂದ ಬರೆಯುದಲ್ಲ. ಅವನ ಭಾವನೆಯಿಂದ ಸಮುದಾಯವನ್ನು ಗೆದ್ದಿದ್ದಾನೆ.
ಇಡೀ ಸಮುದಾಯ ಹೃದಯ ಸಾಮ್ರಾಟ ರಾಮುಲು. ಸಿದ್ರಾಮಣ್ಣ ರಾಮುಲನ್ನು ಪೆದ್ದ ಎಂದೆ, ನೀನು ಬುದ್ಧಿವಂತ ಆಗಿದೆಯಲ್ಲಾ, ನೀನು ಸಿಎಂ ಆಗಿದ್ದಿ, ಅದರೆ ರಾಮುಲು ಇನ್ನೂ ಸಿಎಂ ಆಗಿಲ್ಲ. ರಾಮುಲು ಸಿಎಂ ಆಗುವ ಕಾಲವೂ ಬರುತ್ತದೆ ಎಂದರು.
ಇದನ್ನೂ ಓದಿ | ನವಶಕ್ತಿ ಸಮಾವೇಶ | ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗೆಲ್ಲ ದೇಶವನ್ನು ಒಡೆದಿದೆ: ಕೇಂದ್ರ ಸಚಿವ ಅರ್ಜುನ್ ಮುಂಡಾ