ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿಲ್ಲದ ಮಾಜಿ ಸಚಿವ ಜೆ. ಜನಾರ್ದನ ರೆಡ್ಡಿ ಅವರ ಹೆಸರನ್ನೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರಸ್ತಾಪಿರುವುದು ಅಚ್ಚರಿ ಮೂಡಿಸಿದೆ.
ನಿಜವಾದ ಅಹಿಂದ ಸಮಾವೇಶ ಇಲ್ಲಿ ನಡೆಯುತ್ತಿದೆ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ವಿರುದ್ಧ ನವಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಹರಿಹಾಯ್ದರು.
ಎಸ್ಟಿ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ತಂತ್ರ ರೂಪಿಸಿರುವ ಬಿಜೆಪಿ, ನವಶಕ್ತಿ ಸಮಾವೇಶ ಕಾರ್ಯಕ್ರಮಕ್ಕೆ ಎಸ್ಟಿ ಸಮುದಾಯದ ಮುಖಂಡ ಅರ್ಜುನ್ ಮುಂಡಾ ಅವರನ್ನು ಆಹ್ವಾನಿಸಿದೆ.
ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ ಸರ್ಕಾರಕ್ಕೆ ಅಭಿನಂದನೆ ಜತೆಗೆ ಕಾಂಗ್ರೆಸ್ ವಿರುದ್ಧ ಉಗ್ರ ಭಾಷಣ ಮಾಡಿದ ಶ್ರೀರಾಮುಲು, ನವಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಸಂಚಲನ ಮೂಡಿಸಿದರು.
ಬಳ್ಳಾರಿಯಲ್ಲಿ ಆಯೋಜನೆ ಆಗಿರುವ ನವಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸುರಪುರ ಶಾಸಕ ರಾಜುಗೌಡ, ಸಚಿವ ಗೋವಿಂದ ಕಾರಜೋಳ ಮಾತನಾಡಿದ್ದಾರೆ.
ಮತಾಂತರವಾದವರಿಗೆ ಹಾಗೂ ಮತಾಂತರಕ್ಕೆ ಕುಮ್ಮಕ್ಕು ನೀಡಿದವರಿಗೆ ಇಂದಿನ ಕಾಂಗ್ರೆಸ್ನಲ್ಲಿ ಪ್ರೊಮೋಷನ್ ಸಿಗುತ್ತದೆ ಎಂದು ನವಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ನವೆಂಬರ್ 20ರಂದು ಬಳ್ಳಾರಿಯಲ್ಲಿ ಬಿಜೆಪಿಯ ಎಸ್ ಟಿ ಪಂಗಡದ ಬೃಹತ್ ಸಮಾವೇಶ ನಡೆಯಲಿದೆ. ಸುಮಾರು 10 ಲಕ್ಷ ಮಂದಿಯ ನಿರೀಕ್ಷೆ ಇರುವ ಸಮಾವೇಶಕ್ಕೆ ಸಕಲ ಸಿದ್ಧತೆಗಳು ನಡೆದಿವೆ.