ಬಳ್ಳಾರಿ: ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಮೀಸಲಾತಿಯನ್ನು ಹೆಚ್ಚಿಸುವ ಕರ್ನಾಟಕ ಸರ್ಕಾರದ ನಿರ್ಧಾರ ಕ್ರಾಂತಿಕಾರಕ ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಎಸ್‌ಟಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ನವಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ನಡ್ಡಾ, ಹಿಂದುಳಿದ, ಎಸ್‌ಟಿ, ಎಸ್‌ಸಿ ಸಮಾಜದ ಸೇವೆಗೆ ಬಿಜೆಪಿ ಸದಾ ಸಿದ್ಧ. ಕಾಂಗ್ರೆಸ್ ಎಲ್ಲ ಸಮುದಾಯಗಳನ್ನೂ ತನ್ನ ಮತಬ್ಯಾಂಕ್ ಆಗಿ ಉಪಯೋಗಿಸಿಕೊಂಡಿದೆ ಎಂದರು.
ಮತದಾರರೇ ನಿಮ್ಮ ಎರಡೂ ಕೈಯಿಂದ ಆಶೀರ್ವಾದ ಮಾಡಿ ಎಂದ ನಡ್ಡಾ, ನಿಮ್ಮ ಸೇವೆಗೆ ಸದಾ ಬದ್ಧವಾಗಿದ್ದೇವೆ. ಕಳೆದ ಹಲವು ದಶಕಗಳಿಂದ ಆಡಳಿತ ಮಾಡಿದ ಕಾಂಗ್ರೆಸ್, ಬುಡಕಟ್ಟು ಜನಾಂಗಕ್ಕೆ ರಾಷ್ಟ್ರಪತಿ ಸ್ಥಾನ ಏಕೆ ಕೊಡಲಿಲ್ಲ?
ಈಗ ಜಾರ್ಖಂಡ ಸಿಎಂ, ಛತ್ತೀಸ್‌ಗಢ ರಾಜ್ಯಪಾಲರು ಎಸ್‌ಟಿ ಸಮುದಾಯವರು, ರಾಷ್ಟ್ರಪತಿ ಮುರ್ಮು ಅವರು ಎಸ್‌ಟಿ ಸಮುದಾಯದವರು. ಅವರನ್ನು ರಾಷ್ಟ್ರಪತಿ ಮಾಡಿದ ಪಕ್ಷ ಬಿಜೆಪಿ, ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ.
ಕಾಂಗ್ರೆಸ್ ಮತ ಬ್ಯಾಂಕಿಗಾಗಿ ನಿಮ್ಮನ್ನು ಉಪಯೋಗಿಸಿದೆ, ಇದು ನಿಮಗೆ ಗೊತ್ತಿರಲಿ. ಮಕ್ಕಳಿಗೆ ಶಿಷ್ಡವೇತನ, ಏಕಲವ್ಯ ವಸತಿ ನಿಲಯ ಸೇರಿದಂತೆ ಹಲವು ಸೌಲಭ್ಯಗಳನ್ನು ಆದಿವಾಸಿಗಳಿಗೆ ನೀಡಿರುವುದು ಬಿಜೆಪಿ. ಮೀಸಲಾತಿ ಹೆಚ್ಚಳ ಮಾಡಿ ರಾಜ್ಯ ಬಿಜೆಪಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ರಾಜ್ಯ ಸರ್ಕಾರದ ಮೇಲೆ ಯಡಿಯೂರಪ್ಪನವರ ಆಶೀರ್ವಾದ ಇದೆ.
ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದರು.
ಇದನ್ನೂ ಓದಿ | ನವಶಕ್ತಿ ಸಮಾವೇಶ | ST ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದು BJP: ಯಡಿಯೂರಪ್ಪ