Site icon Vistara News

Lok Sabha Election 2024: ಬಳ್ಳಾರಿ ಪೊಲೀಸರ ಭರ್ಜರಿ ಬೇಟೆ; 5.6 ಕೋಟಿ ರೂ. ನಗದು, 3 ಕೆಜಿ ಬಂಗಾರ, 68 ಕೆಜಿ ಬೆಳ್ಳಿ ವಶ!

Lok Sabha Election 2024 Rs 5.6 crore seized from jewellers owner house in Bellary 3 kg gold, 68 kg silver recovered

ಬಳ್ಳಾರಿ: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿನಲ್ಲಿ ಬಳ್ಳಾರಿಯಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಹೇಮಾ ಜ್ಯುವೆಲರ್ಸ್ ಮಾಲೀಕರಾದ ನರೇಶ್ ಸೋನಿ ಎಂಬುವವರ ಬ್ರೂಸ್‌ಪೇಟೆ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, ದಾಖಲೆಗಳಿಲ್ಲದ 5.6 ಕೋಟಿ ರೂಪಾಯಿ ನಗದು ಹಾಗೂ 3 ಕೆಜಿ ಬಂಗಾರ, 68 ಕೆಜಿ ಬೆಳ್ಳಿ ಗಟ್ಟಿ, 103 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದು, ಈ ಎಲ್ಲ ವಸ್ತುಗಳನ್ನು ಮಹಜರು ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. 98 ಕೆಪಿ ಆ್ಯಕ್ಟ್ ಅಡಿ ಪ್ರಕರಣವನ್ನು ದಾಖಲಿಸಿ ಆದಾಯ ತೆರಿಗೆ ಇಲಾಖೆಗೆ ಇದನ್ನು ಹಸ್ತಾಂತರ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

Lok Sabha Election 2024 Rs 5.6 crore seized from jewellers owner house in Bellary 3 kg gold, 68 kg silver recovered

ಅಲ್ಲದೆ, ನರೇಶ್ ಸೋನಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಹಣದ ಮೂಲ ಪತ್ತೆಗೆ ವಿಚಾರಣೆ ನಡೆಸಲಾಗುತ್ತದೆ. ವಿಚಾರಣೆ ನಂತರ ಖಚಿತ ಮಾಹಿತಿ ಲಭ್ಯವಾಗಬೇಕಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಳ್ಳಾರಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಿದ್ದ ಪೊಲೀಸರಿಗೆ ಈ ವಿಷಯ ತಿಳಿದುಬಂದಿದೆ ಎಂದು ಗೊತ್ತಾಗಿದೆ.

Lok Sabha Election 2024 Rs 5.6 crore seized from jewellers owner house in Bellary 3 kg gold, 68 kg silver recovered

ಇದನ್ನೂ ಓದಿ: Lok Sabha Election 2024: ಬೆಂಗಳೂರಲ್ಲಿ ಅಬ್ಬರದ ರೋಡ್‌ ಶೋ ನಡೆಸಿದ ಸಿಎಂ ಸಿದ್ದರಾಮಯ್ಯ!

ಇಷ್ಟೊಂದು ಪ್ರಮಾಣದ ಹಣ ಸಂಗ್ರಹ ಏಕೆ?

ಹಾಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಈ ಸಮಯದಲ್ಲಿ ಮನೆಯಲ್ಲಿ ದಾಖಲೆ ಇಲ್ಲದೆ ಕೋಟಿಗಟ್ಟಲೆ ಹಣವನ್ನು ಇಟ್ಟುಕೊಂಡಿದ್ದು ಏಕೆ? ಇವುಗಳಿಗೆ ದಾಖಲೆ ಏಕಿಲ್ಲ? ಇದನ್ನು ಚುನಾವಣೆಯಲ್ಲಿ ಹಂಚಿಕೆ ಮಾಡಲು ಇಟ್ಟುಕೊಳ್ಳಲಾಗಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ. ಈಗ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ನರೇಶ್‌ ಅವರ ಹೇಳಿಕೆ ಮೇಲೆ ಎಲ್ಲವೂ ಗೊತ್ತಾಗಬೇಕಿದೆ.

Exit mobile version