Site icon Vistara News

Bengaluru Belly | ಬೆಂಗಳೂರು ಬೆಲ್ಲಿ ರೆಸ್ಟೋರೆಂಟ್‌ನಲ್ಲಿ ಏನುಂಟು ಏನಿಲ್ಲ!

bangalore belly

ಬೆಂಗಳೂರು: ಫುಡ್ಡಿಗಳಿಗೆ ಬೆಸ್ಟ್‌ ಪ್ಲೇಸ್‌ ಎಂದರೆ ಅದು ರಾಜಧಾನಿ ಬೆಂಗಳೂರು. ದೇಶ-ವಿದೇಶದ ಎಲ್ಲ ಖಾದ್ಯಗಳು ಒಂದೇ ಸೂರಿನಡಿ ಸಿಗುವ ತಾಣ. ಈಗ ಇದೇ ಸಾಲಿಗೆ ಬೆಂಗಳೂರಿನಲ್ಲಿ ಜನತೆಗೆ ವೈವಿಧ್ಯಮಯ ಆಹಾರ ಮತ್ತು ಪಾನೀಯಗಳನ್ನು ಆಸ್ವಾದಿಸಲು ʻಬೆಂಗಳೂರು ಬೆಲ್ಲಿʼ (Bengaluru Belly) ಎಂಬ ವಿಶಿಷ್ಟ ರೆಸ್ಟೋರೆಂಟ್ ಆರಂಭವಾಗಿದೆ.

Bengaluru Belly

ಬೆಂಗಳೂರು ಬೆಲ್ಲಿ ರೆಸ್ಟೋರೆಂಟ್‌ ತನ್ನ ಗ್ರಾಹಕರಿಗೆ ಆಹಾರ ಸೇವೆಯನ್ನು ” ಫ್ಲೇವರ್ಸ್‌ ಆಫ್‌ ಇಂಡಿಯಾ” ಎಂಬ ಟ್ಯಾಗ್‌ಲೈನ್‌ನಲ್ಲಿ ಒದಗಿಸುತ್ತಿದೆ. ಭಾರತೀಯ ಶೈಲಿಯ ಬಫೆಟ್‌ ಜತೆಗೆ ಚೈನೀಸ್‌ ಶೈಲಿಯ ಆಹಾರ, ಲೈವ್ ಚಾಟ್‌ ಮತ್ತು ಪಾಪ್‌ಕಾರ್ನ್‌ ಸೆಂಟರ್‌ಗಳು, ಯುರೋಪಿಯನ್‌ ಕೇಕ್ಸ್‌ ಹೀಗೆ ತರಹೇವಾರಿ ಖಾದ್ಯಗಳು ಇಲ್ಲಿ ಸಿಗಲಿವೆ.

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಫೇಸ್-‌1ರ ನೀಲಾದ್ರಿ ರಸ್ತೆಯಲ್ಲಿ ಬೆಂಗಳೂರು ಬೆಲ್ಲಿ ರೆಸ್ಟೋರೆಂಟ್ (Bengaluru Belly) ಇದ್ದು, ಉದ್ಯಮಿ ಜಿ.ಕೆ. ಪ್ರಮೋದ್ ಪ್ರಾರಂಭಿಸಿರುವ ರೆಸ್ಟೋರೆಂಟ್​​ಗೆ ವಿಸ್ತಾರ ನ್ಯೂಸ್ ಮೀಡಿಯಾದ ಸಿಇಒ ಹಾಗೂ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಮತ್ತು ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕರಾದ ಎಚ್.ವಿ.ಧರ್ಮೇಶ್ ಅವರು ಭೇಟಿ ನೀಡಿ ಶುಭ ಹಾರೈಸಿದರು.

ಬಳಿಕ ಮಾತನಾಡಿದ ವಿಸ್ತಾರ ನ್ಯೂಸ್‌ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಬೆಂಗಳೂರು ಬೆಲ್ಲಿ ರೆಸ್ಟೋರೆಂಟ್‌ ಆಹಾರ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಉದ್ಯಮಿ ಜಿ.ಕೆ. ಪ್ರಮೋದ್‌ ಅವರು ಇಷ್ಟು ದಿನ ಬ್ಯುಸಿನೆಸ್‌ ಲೀಡರ್ಸ್‌ ಅನ್ನು ತಯಾರಿ ಮಾಡುತ್ತಿದ್ದರು. ಈಗ ಆಹಾರ ಉದ್ಯಮದಲ್ಲಿ ಹೊಸ ಪ್ರಯೋಗ ಶುರು ಮಾಡಿದ್ದಾರೆ. ಹಲವು ಫುಡ್‌ ಜಾಯಿಂಟ್‌ಗಳನ್ನು ನೋಡಿದ್ದೇನೆ. ಆದರೆ, ಪ್ರಮೋದ್‌ ಅವರು ಒಂದೇ ಸೂರಿನಡಿ ಎಲ್ಲ ಫುಡ್‌ಗಳನ್ನು ಸಿಗುವಂತೆ ಮಾಡಿದ್ದು ಖುಷಿ ತಂದಿದೆ ಎಂದರು.

ಉದ್ಯಮಿ ಜಿ.ಕೆ.ಪ್ರಮೋದ್

ಗ್ರಾಹಕರ ಅಭಿರುಚಿಗೆ ತಕ್ಕಂತೆ ರೆಸ್ಟೋರೆಂಟ್‌ ವಿನ್ಯಾಸ ಮಾಡಲಾಗಿದೆ. ಇಲ್ಲಿ ದೇಶ-ವಿದೇಶಗಳ ಖಾದ್ಯಗಳು ಸಿಗಲಿದ್ದು, ಜನರ ಕೈಗೆಟುಕುವ ದರದಲ್ಲಿ ಲಭ್ಯವಿದೆ. ಬೇಕರಿ ಐಟಂನಿಂದ ಹಿಡಿದು ಕಾಫಿ ಕೆಫೆ, ಖಾಸಗಿ ಪಾರ್ಟಿಗಳನ್ನು ಇಲ್ಲಿ ಆಯೋಜಿಸಬಹುದು. ಲೈವ್‌ ಮ್ಯೂಸಿಕ್‌, ಮ್ಯಾಜಿಕ್‌ ಶೋಗಳನ್ನೂ ಆಯೋಜಿಸಲಾಗುವುದು. ತಮ್ಮ ಅಭಿರುಚಿಗೆ ತಕ್ಕಂತೆ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬಹದಾಗಿದ್ದು, ಪಾರ್ಟಿಯಲ್ಲಿ ಅಲಂಕಾರಕ್ಕೂ ಅವಕಾಶವನ್ನು ಕಲ್ಪಿಸಲಾಗುವುದು. ಇದಕ್ಕಾಗಿ ಸಾಕಷ್ಟು ಸ್ಥಳಾವಕಾಶವನ್ನೂ ರೆಸ್ಟೋರೆಂಟ್ ನೀಡಲಿದೆ ಎಂದು ಬೆಂಗಳೂರು ಬೆಲ್ಲಿ ರೆಸ್ಟೋರೆಂಟ್ ಮಾಲೀಕ ಜಿ.ಕೆ.ಪ್ರಮೋದ್ ತಿಳಿಸಿದರು.

ಬೆಂಗಳೂರು ಬೆಲ್ಲಿ ರೆಸ್ಟೋರೆಂಟ್‌ನಲ್ಲಿ 30 ಐಷಾರಾಮಿ ಬೋಟಿಕ್‌ ಹೋಟೆಲ್‌ ಕೊಠಡಿಗಳು ಲಭ್ಯವಿದೆ. ಹೋಟೆಲ್‌ ಉದ್ದಿಮೆ ವಲಯದಲ್ಲಿ ಸುದೀರ್ಘ ಅನುಭವದ ಆಧಾರದಲ್ಲಿ ರೆಸ್ಟೋರೆಂಟ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದರು.

ಇದನ್ನೂ ಓದಿ | Bengaluru Belly | ಪ್ರತಿಯೊಬ್ಬರ ಹೊಟ್ಟೆ ತುಂಬಿಸಲು ಬೆಂಗಳೂರು ಬೆಲ್ಲಿ ರೆಸ್ಟೊರೆಂಟ್‌ ಅಕ್ಟೋಬರ್‌ 14ರಿಂದ ಆರಂಭ

Exit mobile version