Site icon Vistara News

Trains Cancelled: ಈ ಎರಡು ದಿನ ಬೆಂಗಳೂರು- ಹುಬ್ಬಳ್ಳಿ- ಮೈಸೂರು ರೈಲು ಸಂಚಾರ ಇಲ್ಲ

Train

ಬೆಂಗಳೂರು: ಬೆಂಗಳೂರು- ಹುಬ್ಬಳ್ಳಿ- ಮೈಸೂರು (Bengaluru- Hubli- Mysuru) ನಡುವೆ ಸಂಚರಿಸುವ ಕೆಲವು ರೈಲುಗಳ ಸಂಚಾರವನ್ನು ಏ.6ರಂದು ಹಾಗೂ ಏ.7ರಂದು (Trains Cancelled) ರದ್ದುಪಡಿಸಲಾಗಿದೆ.

ರೈಲ್ವೆ ಹಳಿ ಹಾಗೂ ನಿಲ್ದಾಣಗಳಲ್ಲಿ ವಿವಿಧ ಸುರಕ್ಷತಾ ಕಾಮಗಾರಿಗಳನ್ನು (Safety measures) ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕೆಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆಯ ನೈರುತ್ಯ ರೈಲ್ವೆ ತಿಳಿಸಿದೆ. ಬೆಂಗಳೂರು- ಹುಬ್ಬಳ್ಳಿ, ಬೆಂಗಳೂರು- ಮೈಸೂರು ರೈಲುಗಳ ಸಂಚಾರ ವ್ಯತ್ಯಾಸಕ್ಕೆ ಒಳಗಾಗಿವೆ.

ರದ್ದುಪಡಿಸಿದ ರೈಲುಗಳು

ಆಗ್ನೇಯ ರೈಲ್ವೆಯಲ್ಲಿ ಹುದ್ದೆಗಳಿಗೆ ಆಹ್ವಾನ

ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನಿರ್ವಹಿಸಬೇಕು ಎಂದು ಆಗ್ರಹಿಸುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಆಗ್ನೇಯ ಮಧ್ಯ ರೈಲ್ವೆ (South East Central Railway)ಯಲ್ಲಿ ಖಾಲಿ ಇರುವ ತರಬೇತುದಾರ ಹುದ್ದೆಗಳ (Apprentice posts) ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ (South East Central Railway Trade Apprentice Recruitment 2024). ಒಟ್ಟು 733 ಅಪ್ರೆಂಟಿಸ್‌ ಹುದ್ದೆಗಳಿವೆ. ಎಸ್‌ಎಸ್‌ಎಲ್‌ಸಿ, ಐಟಿಐ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನ ಏಪ್ರಿಲ್‌ 12 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಕಾರ್ಪೆಂಟರ್ – 38, ಸಿಒಪಿಎ (COPA) – 100, ಡ್ರಾಫ್ಟ್‌ಮನ್ (ಸಿವಿಲ್)- 10, ಎಲೆಕ್ಟ್ರೀಷಿಯನ್- 137, ಎಲೆಕ್ಟ್ರೀಷಿಯನ್ ಮೆಕ್ಯಾನಿಕಲ್) -5, ಫಿಟ್ಟರ್ -187, ಮಷಿನಿಸ್ಟ್‌ – 4, ಪೇಂಟರ್ – 42, ಪ್ಲಂಬರ್ – 25, ಮೆಕ್ಯಾನಿಕಲ್ (Rac) – 15, ಎಸ್‌ಎಂಡಬ್ಲ್ಯು – 4, ಸ್ಟೆನೊ (ಇಂಗ್ಲಿಷ್) – 27, ಸ್ಟೆನೊ (ಹಿಂದಿ) – 19, ಡೀಸೆಲ್ ಮೆಕ್ಯಾನಿಕ್ – 12, ಟರ್ನರ್ – 4, ವೆಲ್ಡರ್- 18, ವೈಯರ್‌ಮನ್ – 80, ಕೆಮಿಕಲ್ ಲ್ಯಾಬೋರೇಟರಿ ಅಸಿಸ್ಟಂಟ್ – 4, ಡಿಜಿಟಲ್ ಪೋಟೋಗ್ರಾಫರ್ – 2 ಹುದ್ದೆಗಳಿವೆ. ಈ ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ, ಐಟಿಐ ಅನ್ನು ಸಂಬಂಧಿಸಿದ ಟ್ರೇಡ್‌ನಲ್ಲಿ ಪಾಸ್‌ ಮಾಡಿದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 15 ವರ್ಷ ಮತ್ತು ಗರಿಷ್ಠ ವಯಸ್ಸು 24 ವರ್ಷ. ಮೀಸಲಾತಿಗೆ ಅನುಗುಣವಾಗಿ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಮಾಜಿ ಯೋಧರು ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಆಗ್ನೇಯ ಮಧ್ಯ ರೈಲ್ವೆ ಅಪ್ರೆಂಟಿಸ್‌ ಪೋಸ್ಟ್‌ಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿರುವ ಅಂಕಗಳ ಆಧಾರದಲ್ಲಿ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ, ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ. ಈ ಅಭ್ಯರ್ಥಿಗಳಿಗೆ ಮೆಡಿಕಲ್ ಟೆಸ್ಟ್‌ ನಡೆಸಿ, ನಂತರದಲ್ಲಿ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ಅಪ್ರೆಂಟಿಸ್ ಹುದ್ದೆ ಅವಧಿಯಲ್ಲಿ, ಅಪ್ರೆಂಟಿಸ್ ಕಾಯ್ದೆ -1961ರ ಪ್ರಕಾರ ಮಾಸಿಕ ಸ್ಟೈಫಂಡ್‌ ನೀಡಲಾಗುತ್ತದೆ. ಈ ತರಬೇತಿಯ ಅವಧಿ 1 ವರ್ಷ.

ಇದನ್ನೂ ಓದಿ: Job Alert: ಆಗ್ನೇಯ ಮಧ್ಯ ರೈಲ್ವೆಯಿಂದ 733 ಅಪ್ರೆಂಟಿಸ್‌ಗಳ ನೇಮಕಕ್ಕೆ ಅರ್ಜಿ ಆಹ್ವಾನ; ಐಟಿಐ ಪಾಸಾದವರು ಅಪ್ಲೈ ಮಾಡಿ

Exit mobile version