ಬೆಂಗಳೂರು: ಅತಿಥಿ ದೇವೋ ಭವ ಎಂಬ ಶಬ್ಧ ನಮ್ಮ ದೇಶದ ಘೋಷ ವಾಕ್ಯ . ಅದು ರಾಜ್ಯದ ಮಟ್ಟಕ್ಕೂ ಅನ್ವಯವಾಗುತ್ತದೆ. ಮೂಲ ನಿವಾಸಿಗಳಿಗೆ ಹೊರಗಿಂದ ಬಂದವರು ಗೌರವ ಕೊಡಬೇಕು. ಆದರೆ ಬೆಂಗಳೂರು ನಗರದಲ್ಲಿ (Bengaluru News) ಆ ತರಹ ವಾತಾವರಣ ಇಲ್ಲದಂತಾಗಿದೆ. ಮತ್ತೊಮ್ಮೆ ಉತ್ತರ ಭಾರತದ ಮಹಿಳೆ ಬೆಂಗಳೂರು ನಗರದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ʻತೊಲಗ್ರೋ ಮೊದಲುʼ ಎಂಬ ಹ್ಯಾಷ್‌ಟ್ಯಾಗ್ ಮೂಲಕ ಅಭಿಯಾನ ಶುರುವಾಗಿದೆ.
ಮೊದಲನೇದಾಗಿ ನಾರ್ತ್, ಸೌತ್, ಈಸ್ಟ್ , ವೆಸ್ಟ್ ಇಂಡಿಯಾ ಎಂಬುದೆಲ್ಲ ಗುರುತಿಗಾಗಿ ಅಷ್ಟೆ ಇರುವುದು. ಆದರೆ ಕೆಲ ವ್ಯಕ್ತಿಗಳು ಡಿವೈಡ್ ಮಾಡಿ ಕೀಳಾಗಿ ನೋಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಉತ್ತರ ಭಾರತದ ಮಹಿಳೆಯೊಬ್ಬಳು ಬೆಂಗಳೂರಿನ ಬಗ್ಗೆ ರೀಲ್ಸ್ ಮಾಡಿ ಅವಮಾನ ಮಾಡುವಂತೆ ಮಾತನಾಡಿದ್ದಾಳೆ.
ಕಾಮೆಂಟ್ ಮೂಲಕವೇ ಬಿಸಿ ಮುಟ್ಟಿಸಿದ ಸ್ಯಾಂಡಲ್‌ವುಡ್
ಈ ಹಿಂದೆ ಆಟೋ ಚಾಲಕನ ಜತೆ ಕಿರಿಕ್ ಮಾಡಿಕೊಂಡಿದ್ದ ಮಹಿಳೆಯೊಬ್ಬಳು, ಬೆಂಗಳೂರಿನವರಿಗೆ ಡೀಸೆನ್ಸಿ ಇಲ್ಲ ಎಂದು ವಿಡಿಯೊ ಮಾಡಿದ್ದಳು. ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಾನು ಹಾಗೇ ಹೇಳಿಲ್ಲ, ಮಾತಿನಿಂದ ನೋವು ಆಗಿದ್ದರೆ ಕ್ಷಮಿಸಿ ಅಂತ ಸಮಜಾಯಿಷಿ ನೀಡಲು ಮುಂದಾಗಿದ್ದಳು. ಅದರ ಬೆನ್ನಲ್ಲೆ ಈಗ ಮತ್ತೊಬ್ಬ ಮಹಿಳೆ ತನ್ನ ಮನಸ್ಸಿನ ವಿಕಾರತೆಯನ್ನು ಹೊರಹಾಕಿದ್ದಾಳೆ.
ಮಹಿಳೆಯೊಬ್ಬಳು ವಿಡಿಯೋದಲ್ಲಿ ನಾವೆಲ್ಲ ನಾರ್ಥಿಗಳು ಬೆಂಗಳೂರು ಬಿಟ್ಟರೆ, ಎಲ್ಲ ನಗರದ ಪಿಜಿಗಳು ಖಾಲಿ ಖಾಲಿಯಾಗಿರುತ್ತದೆ. ಕೋರಮಂಗಲದ ಪಬ್‌ಗಳು ಬಿಕೋ ಎನ್ನುತ್ತಿರುತ್ತೆ ಎಂದು ವಿಡಿಯೋ ಮಾಡಿದ್ದಾಳೆ. ಅಂದರೆ ನಾರ್ಥ್ ಇಂಡಿಯನ್‌ಗಳಿಂದ ಮಾತ್ರ ಬೆಂಗಳೂರು ಉದ್ದಾರ ಆಗಿದೆ ಎಂಬ ಭ್ರಮೆಯಲ್ಲಿರುವುದು ಇಲ್ಲಿ ಸ್ಪಷ್ಟವಾಗಿದೆ. ಇನ್ನೂ ಈ ವಿಡಿಯೊಗೆ ಸಾರ್ವಜನಿಕರು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದ ಕೂಡ ಆಕ್ರೋಶ ವ್ಯಕ್ತವಾಗಿದೆ.
ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ʻಪ್ಲೀಸ್ ಲೀವ್ʼ ಎಂದರೆ, ನಟಿ ಚೈತ್ರಾ ಆಚಾರ್ ಬೇಗ ಇಲ್ಲಿಂದ ಹೊರಡಿ ನಾವು ಡ್ಯಾನ್ಸರ್‌ಗಳಿಲ್ಲದ ಪಬ್‌ಗಳನ್ನು ನೋಡಬಹುದು . ಮೊದಲು ಇಲ್ಲಿಂದ ತೊಲಗಿ ಎಂಬರ್ಥದಲ್ಲಿ ಕಾಮೆಂಟ್‌ಗೆ ರಿಪ್ಲೇ ಕೊಟ್ಟಿದ್ದಾರೆ. ಅಷ್ಟೇಲ್ಲದೆ ನಿರೂಪಕಿ ಕಂ ನಟಿ ಅನುಪಮ ಗೌಡ , ರೂಪೇಶ್ ರಾಜಣ್ಣ ಸೇರಿ ಹಲವು ಮಂದಿ ಖಡಕ್ ಉತ್ತರ ಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ ಹ್ಯಾಷ್ ಟ್ಯಾಗ್ ಹಾಕಿ ತೊಲಗ್ರೋ ಬೇಗ ಎಂಬ ಅಭಿಯಾನವೂ ಶುರುವಾಗಿದೆ. ಬೆಂಗಳೂರಿನಲ್ಲಿದ್ದುಕೊಂಡು ಪದೆ ಪದೇ ನಗರವನ್ನು ತುಚ್ಛವಾಗಿ ಮಾತನಾಡುವವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ವಿಚಾರ ಕೈ ಮೀರಿ ಹೋಗುವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ