ಬೆಂಗಳೂರು: ಬೆಂಗಳೂರಿನ ತಿಲಕ್ ನಗರದ ಬಿಟಿಪಿ ಏರಿಯಾದಲ್ಲಿ ವಾಸವಾಗಿದ್ದ ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಎಂಬ ಶಂಕಿತ ಉಗ್ರನನ್ನು ಬೆಂಗಳೂರು ಪೊಲೀಸರು ವಶಕ್ಕೆ (Terrorist Arrest) ಪಡೆದಿದ್ದಾರೆ. ಈತ ಉತ್ತರ ಭಾರತದಿಂದ ಬಂದು ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಭಾನುವಾರ (ಜುಲೈ 24) ಸಂಜೆ ಸುಮಾರು 5 ಗಂಟೆಯಿಂದ 30ಕ್ಕೂ ಅಧಿಕ ಸಿಸಿಬಿ ಪೊಲೀಸರು ಈತನ ಮನೆ ಬಳೆ ಕಾದಿದ್ದರು. ಸುಮಾರು 15 ವಾಹನಗಳಲ್ಲಿ ಆಗಮಿಸಿದ್ದ ತಂಡ ತಿಲಕ್ ನಗರದ ಈ ಏರಿಯಾದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದರು. ಅಖ್ತರ್ ಹುಸೇನ್ ತಡರಾತ್ರಿ ಮನೆಗೆ ಆಗಮಿಸುತ್ತಿದ್ದಂತೆ ದಾಳಿ ಮಾಡಿ ವಶಕ್ಕೆ ಪಡೆದರು ಎಂದು ತಿಳಿದುಬಂದಿದೆ.
ಅಖ್ತರ್ ಹುಸೇನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕೆಲ ಯುವಕರೊಂದಿಗೆ ವಾಸ್ತವ್ಯ ಮಾಡುತ್ತಿದ್ದ ಎಂದು ತಿಳಿದುಬಂದಿತ್ತು. ಈ ಮನೆಯಲ್ಲಿ ನಾಲ್ವರು ವಾಸವಾಗಿದ್ದು ದಾಳಿಯ ಸಂದರ್ಭದಲ್ಲಿ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಈ ದಾಳಿ ನಡೆಸುತ್ತಿದ್ದಂತೆ ಸ್ಥಳೀಯರು ಆತಂಕಕ್ಕೆ ಒಳಗಾಗಿ ಗುಂಪಾಗಿ ಸೇರಿದ್ದರು. ಸ್ಥಳೀಯರಿಂದಲೂ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Terrorist arrest | ಬೆಂಗಳೂರು ಪೊಲೀಸರ ನಿದ್ದೆ ಕೆಡಿಸಿದ ಶಂಕಿತ ಉಗ್ರನ ಬಂಧನ