ದೇವನಹಳ್ಳಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆದಿದೆ. ಗುದದ್ವಾರದಲ್ಲಿ ಚಿನ್ನ ಅಡಗಿಸಿ (Gold Smuggling) ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಮೂವರ ಬಂಧನ ಮಾಡಲಾಗಿದೆ. ಶ್ರೀಲಂಕಾದ ಕೊಲೊಂಬೊದಿಂದ 6E 1168 ವಿಮಾನದಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದಿದ್ದ ಪ್ರಯಾಣಿಕರ ತಪಾಸಣೆ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ.
ತಪಾಸಣೆ ವೇಳೆ ಮೂವರು ಆರೋಪಿಗಳು ಪೆಸ್ಟ್ ರೂಪದಲ್ಲಿ ಗುದದ್ವಾರದಲ್ಲಿ ಚಿನ್ನ ಅಡಗಿಸಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಪೆಸ್ಟ್ ರೂಪದಲ್ಲಿ ಇಟ್ಟುಕೊಂಡು ಬಂದಿದ್ದ 1 ಕೋಟಿ 19 ಲಕ್ಷದ 38 ಸಾವಿರ ಮೌಲ್ಯದ 1,670 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳಿಂದ ತೀವ್ರ ವಿಚಾರಣೆ ನಡೆಯುತ್ತಿದೆ.
ವೃದ್ಧನ ಗುದದ್ವಾರದಲ್ಲಿತ್ತು 16 ಇಂಚಿನ ಸೋರೆಕಾಯಿ! ವೈದ್ಯರಿಗೇ ಗಾಬರಿ!
ಈ ಹಿಂದೆ ಮನುಷ್ಯರ ದೇಹದಿಂದ ಸೂಜಿ, ಪಿನ್ನು, ಕಬ್ಬಿಣದ ತುಂಡುಗಳು, ಮುಂತಾದ ಚಿಕ್ಕ ಚಿಕ್ಕ ವಸ್ತುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ದೇಹದಿಂದ ಹೊರಗೆ ತೆಗೆದ ಅನೇಕ ಘಟನೆಗಳು ನಡೆದಿತ್ತು. ಇಂತಹ ಚಿಕ್ಕ ವಸ್ತುಗಳನ್ನು ದೇಹದಿಂದ ಹೊರತೆಗೆಯುವುದು ವೈದ್ಯರಿಗೆ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿಯ ದೇಹದಲ್ಲಿರುವ ವಸ್ತುವನ್ನು ಕಂಡು ವೈದ್ಯರಿಗೆ ಆಘಾತವನ್ನುಂಟಾಗಿದೆ. ಮಧ್ಯಪ್ರದೇಶದ ವ್ಯಕ್ತಿಯೊಬ್ಬನ ಗುದದ್ವಾರದಿಂದ ಸೋರೆಕಾಯಿ ಅನ್ನು ವೈದ್ಯರು ತೆಗೆದುಹಾಕಿದ್ದು, ಇದು ಅಚ್ಚರಿಗೆ ಕಾರಣವಾಗಿದೆ. ಈ ಸುದ್ದಿ ಈಗ ಹೆಚ್ಚು ವೈರಲ್ (Viral News) ಆಗಿದೆ.
60 ವರ್ಷದ ರೈತನೊಬ್ಬ ತೀವ್ರ ಹೊಟ್ಟೆನೋವಿನಿಂದ ನರಳುತ್ತಾ ವೈದ್ಯರ ಬಳಿಗೆ ಹೋಗಿದ್ದ. ಆಗ ವೈದ್ಯರು ಎಕ್ಸ್-ರೇ ಮಾಡಿದ್ದಾರೆ. ಆಗ ಅವನ ಗುದನಾಳದಲ್ಲಿ ಸೋರೆಕಾಯಿ ಇರುವುದು ಕಂಡುಬಂದಿದೆ! ಆದರೆ ಈ ತರಕಾರಿ ಅವನ ಗುದ್ವಾರದೊಳಗೆ ಹೇಗೆ ಹೋಗಿದೆ ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೆ, ಆ ವ್ಯಕ್ತಿ ಈ ಬಗ್ಗೆ ಯಾವುದೇ ಸ್ಪಷ್ಟೀಕರಣವನ್ನು ನೀಡುತ್ತಿಲ್ಲ ಎನ್ನಲಾಗಿದೆ. ವೈದ್ಯರು ಆ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು, ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಆ ವಸ್ತುವನ್ನು ಹೊರಗೆ ತೆಗೆದು ಹಾಕಿದ್ದಾರೆ. ಡಾ. ಮನೋಜ್ ಚೌಧರಿ, ಡಾ. ನಂದಕಿಶೋರ್ ಜಾತವ್, ಡಾ. ಆಶಿಶ್ ಶುಕ್ಲಾ ಮತ್ತು ಡಾ. ಸಂಜಯ್ ಮೌರ್ಯ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಇದರಿಂದ ಆ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಹಿಂದಿನ ಕಾರಣ ಮಾನಸಿಕ ಅಸ್ವಸ್ಥತೆ, ಲೈಂಗಿಕ ಸಮಸ್ಯೆ ಅಥವಾ ಅಪಘಾತ ಆಗಿರಬಹುದು ಎಂದು ಡಾ. ಚೌಧರಿ ತಿಳಿಸಿದ್ದಾರೆ. ಆದರೆ ನಿಖರವಾದ ಕಾರಣವನ್ನು ತಿಳಿಯಲು ಆಸ್ಪತ್ರೆ ತನಿಖೆಯನ್ನು ಪ್ರಾರಂಭಿಸಿದೆ ಎನ್ನಲಾಗಿದೆ.
ಇದಕ್ಕೂ ಮುನ್ನ ಮಾರ್ಚ್‍ನಲ್ಲಿ ವಿಯೆಟ್ನಾಂನಲ್ಲಿ ಇದೇ ರೀತಿಯ ಘಟನೆ ಜನರನ್ನು ಬೆಚ್ಚಿಬೀಳಿಸಿತು. 34 ವರ್ಷದ ವ್ಯಕ್ತಿಯೊಬ್ಬರು ತೀವ್ರ ಹೊಟ್ಟೆ ನೋವಿನಿಂದ ವೈದ್ಯರನ್ನು ಭೇಟಿಯಾದಾಗ, ಅವರಿಗೆ ಆಘಾತಕಾರಿ ಸಮಸ್ಯೆ ಇರುವುದು ತಿಳಿದುಬಂದಿದೆ. ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ ನಂತರ, ವೈದ್ಯರಿಗೆ ಅವನ ಅನಾರೋಗ್ಯದ ಹಿಂದಿನ ಕಾರಣ ಅವನ ಹೊಟ್ಟೆಯಲ್ಲಿ ಸಿಕ್ಕಿಹಾಕಿಕೊಂಡ 30 ಸೆಂ.ಮೀ ಉದ್ದದ ಈಲ್ ಎಂಬುದು ತಿಳಿದು ಬಂದಿತ್ತು.
ಇದನ್ನೂ ಓದಿ: ಮಗ ಸತ್ತು ಶವ ಕೊಳೆಯುತ್ತಿದ್ದರೂ ಮಲಗಿದ್ದಾನೆಂದು ಮನೆಯಲ್ಲೇ ಇರಿಸಿಕೊಂಡಿದ್ದ ತಾಯಿ-ಮಗಳು!
ಅದು ಗುದದ್ವಾರದ ಮೂಲಕ ವ್ಯಕ್ತಿಯ ದೇಹವನ್ನು ಪ್ರವೇಶಿಸಿ ನಂತರ ಅವನ ಕರುಳಿಗೆ ಜಾರಿತ್ತು ಎಂದು ವೈದ್ಯರು ತಿಳಿಸಿದ್ದರು. ಇದೊಂದು ಅಪರೂಪದ ಪ್ರಕರಣವಾಗಿದ್ದು, ಗುದದ್ವಾರದ ಪ್ರದೇಶವು ಸಾಕಷ್ಟು ಮಲದ ದ್ರವವನ್ನು ಹೊಂದಿರುತ್ತದೆ. ಸುಲಭವಾಗಿ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾಗುತ್ತದೆ. ಆದರೂ ವೈದ್ಯರು ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆ ಮಾಡಿ ಆತನನ್ನು ಕಾಪಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ