Site icon Vistara News

Road Accident : ಲಾರಿ ಡಿಕ್ಕಿ ಹೊಡೆದು ಬೈಕ್‌ ನಜ್ಜುಗುಜ್ಜು; ಸ್ಥಳದಲ್ಲೇ ಪ್ರಾಣಬಿಟ್ಟ ಸವಾರ, ಮತ್ತೋರ್ವ ಗಂಭೀರ

Road Accident

ಆನೇಕಲ್: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರು ಸಮೀಪದ ಸೂಳಗಿರಿ ಬಳಿ ಅಪಘಾತ ನಡೆದಿದೆ. ಆನೇಕಲ್ ತಾಲೂಕಿನ ರಾಚಮಾನಹಳ್ಳಿಯ ನಿವಾಸಿ ಅರ್ಚಕ ಶ್ರೀನಿವಾಸ್ ಮೃತ‌ ದುರ್ದೈವಿ.

ದೇವಾಲಯದ ಅರ್ಚಕರಾಗಿದ್ದ ಶ್ರೀನಿವಾಸ್, ಪೂಜಾ ನಿಮಿತ್ತ ಬೈಕ್‌ ಮೂಲಕ ಆನೇಕಲ್‌ನಿಂದ ಹೋಗುತ್ತಿದ್ದರು. ಈ ವೇಳೆ ಸೂಳಗಿರಿ ಹೆದ್ದಾರಿಯಲ್ಲಿ ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಶ್ರೀನಿವಾಸ್ ಸ್ಥಳದಲ್ಲಿಯೇ ಮೃತಪಟ್ಟರೆ, ರಾಘವೇಂದ್ರ ಎಂಬುವವರಿಗೆ ಗಂಭೀರ ಗಾಯವಾಗಿದೆ. ಅಪಘಾತದ ರಭಸಕ್ಕೆ ಬೈಕ್‌ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸೂಳಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಯಶವಂತಪುರ ಫ್ಲೈ ಓವರ್ ಡೇಂಜರ್

ನೀವೇನಾದರೂ ಯಶವಂತಪುರ ಫ್ಲೈಓವರ್‌ ಮೇಲೆ 80 -90 ಕಿ.ಮೀ ಸ್ಪೀಡ್‌ನಲ್ಲಿ ಹೋದರೆ ಅಪಾಯ ತಪ್ಪಿದಲ್ಲ. ಸ್ವಲ್ಪ ಯಾಮಾರಿದರೂ ಸೀದಾ ಫ್ಲೈ ಓವರ್‌ನಿಂದ ಕೆಳಗೆ ಬೀಳುವ ಪರಿಸ್ಥಿತಿ ಇದೆ. ಪ್ರತಿನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿದೆ. ಕಳೆದ ಸೆಪ್ಟೆಂಬರ್ 3 ರಂದು ಬೆಳಗ್ಗೆ ಫ್ಲೈ ಓವರ್ ಮೇಲಿನಿಂದ ವಾಹನ ಬಿದ್ದಿತ್ತು. ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದರೆ, ನಾಲ್ವರು ಗಾಯಗೊಂಡಿದ್ದರು. ಆದಾದ ಎರಡು ದಿನಗಳ ನಂತರ ಫ್ಲೈಓವರ್ ಮೇಲೆ ಕಾರು- ಬೈಕ್ ಅಪಘಾತ ಸಂಭವಿಸಿತ್ತು.

ಯಶವಂತಪುರ ಫ್ಲೈ ಓವರ್ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ಯಾ? ಕಿರಿದಾದ ಕರ್ವಿಂಗ್‌ನಿಂದ ವಾಹನ ಸವಾರರಿಗೆ ಕಂಟಕ ಎದುರಾಗಿದೆ. ವೇಗದ ಮಿತಿ ಇಲ್ಲದೇ ಫ್ಲೈ ಓವರ್ ಮೇಲೆ ವಾಹನ ಸವಾರರು ಸಂಚರಿಸುತ್ತಿದ್ದಾರೆ. ಫ್ಲೈ ಓವರ್ ಏರುತ್ತಿದ್ದಂತೆ ಸ್ಪೀಡ್ ಬ್ರೇಕರ್ ಹಾಕುವಂತೆ ಒತ್ತಾಯ ಕೇಳಿ ಬಂದದೆ. ಅರ್ಬನ್ ಸ್ಪೀಡ್ ಲಿಮಿಟ್ ಬೋರ್ಡ್ ಅಳವಡಿಸಬೇಕು. ತಡೆಗೋಡೆಗಳ ಎತ್ತರ ಸಾಲದೆ ವಾಹನಗಳು ಕೆಳಗೆ ಉರುಳುತಿದೆ. ಈ ಹಿನ್ನೆಲೆ ದಪ್ಪ ಹಾಗೂ ಎತ್ತರವಾದ ತಡೆಗೋಡೆ ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ. ಜತೆಗೆ ರಾತ್ರಿ ಹೊತ್ತು ಬ್ಯಾರಿಕೆಡ್ ಹಾಕಿ ರಸ್ತೆ ಕ್ಲೋಸ್ ಮಾಡಬೇಕು. ವಾಹನ ಸವಾರರಿಗೆ ಸೂಚನಾ ಫಲಕಗಳಿಂದ ಮಾಹಿತಿ ನೀಡಲು ಸಲಹೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version