Site icon Vistara News

ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿ ಕಾಲಿಗೆ ಗುಂಡೇಟು

ಬೆಂಗಳೂರು: ರಾಜಧಾನಿಯ ಸಂಜಯನಗರದಲ್ಲಿ ಶರಣಪ್ಪ ಎಂಬ ರೌಡಿಯ ಕಾಲಿಗೆ ಪೊಲೀಸರು ಹಾರಿಸಿ ಬಂಧಿಸಿದ್ದಾರೆ. ಬಂಧಿಸಲು ಹೋದ ವೇಳೆ ಹಲ್ಲೆಗೆ ಮುಂದಾದ ಶರಣಪ್ಪನ ಮೇಲೆ ಗುಂಡು ಹಾರಿಸಲಾಯಿತು.

ಶರಣಪ್ಪ ಸಂಜಯ್ ನಗರ ಪೊಲೀಸ್‌ ಠಾಣೆಯ ರೌಡಿ ಶೀಟರ್ ಆಗಿದ್ದು, ಕೆಲ ದಿನಗಳ ಹಿಂದೆ ಸಾರ್ವಜನಿಕ ರಸ್ತೆಯಲ್ಲಿ ಲಾಂಗ್ ಹಿಡಿದು ಮನಸೋ ಇಚ್ಛೆ ಝಳಪಿಸಿ ರಸ್ತೆಯಲ್ಲಿ ಹೋಗುವ ಬರುವ ಸಾರ್ವಜನಿಕರನ್ನು ಬೆದರಿಸಿದ್ದ. ಮಾತ್ರವಲ್ಲದೆ ರಸ್ತೆಯಲ್ಲಿ ತಮ್ಮ ಪಾಡಿಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಮನಸೋ ಇಚ್ಚೆ ಅಟ್ಯಾಕ್ ಮಾಡಿದ್ದ. ಆತನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.

ಅರೋಪಿಯ ಪತ್ತೆಗೆ ಸಂಜಯ್ ನಗರ ಠಾಣೆಯ ಪೊಲೀಸರು ತೆರಳಿದ್ದರು. ಭೂಪಸಂದ್ರದ ರೈಲ್ವೆ ಟ್ರ್ಯಾಕ್ ಬಳಿ ಕಂಡ ಆರೋಪಿಯನ್ನು ಬಂಧಿಸಲು ಪೊಲೀಸರು ಮುಂದಾದಾಗ, ಪಿಎಸ್ಐ ಗೌರೀಶ್ ನಾಯಕ್ ಮೇಲೆ ದಾಳಿ ಮಾಡಲು ಶರಣಪ್ಪ ಮುಂದಾಗಿದ್ದ. ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಪ್ಪನಿಗೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ಮಣಿಯದೇ ಶರಣಪ್ಪ ದಾಳಿ ಮುಂದುವರಿಸಿದ್ದ. ಆತ್ಮರಕ್ಷಣೆಗಾಗಿ ಸಂಜಯ್ ನಗರ ಇನ್ಸ್‌ಪೆಕ್ಷರ್ ಬಾಲರಾಜ್ ಆರೋಪಿ ಕಾಲಿಗೆ ಗುಂಡು ಹಾರಿಸಿದರು.

ಆಸ್ತಿ ವಿಚಾರಕ್ಕೆ ಮಗನಿಗೇ ಬೆಂಕಿಯಿಟ್ಟ ಅಪ್ಪ: ವಾರ ನರಳಿ ಪ್ರಾಣ ಬಿಟ್ಟ ಪುತ್ರ

ಗಾಯಗೊಂಡಿರುವ ಆರೋಪಿಯನ್ನು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ರೌಡಿಶೀಟರ್‌ಗಳು ಪೊಲೀಸರ ಮೇಲೆ ದಾಳಿ ಮಾಡುವ ಹಾಗೂ ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿ ಬಂಧಿಸುವ ಪ್ರಕರಣಗಳು ಹೆಚ್ಚುತ್ತಿವೆ.

Exit mobile version