ಬೆಂಗಳೂರು: ಗರ್ಭಪಾತ ಮಾತ್ರೆ ಮಹಿಳೆಯ ಪ್ರಾಣಕ್ಕೆ ಕುತ್ತು ತಂದಿರುವ ಘಟನೆ ನಗರದಲ್ಲಿ ನಡೆದಿದೆ. ಅಬಾರ್ಶನ್ ಮಾತ್ರೆ (Abortion Pills) ಸೇವಿಸಿದ್ದರಿಂದ ಅಧಿಕ ರಕ್ತಸ್ರಾವವಾಗಿ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಪ್ರೀತಿ ಕುಶ್ವಾಸ್ ಮೃತ ಮಹಿಳೆ. ಗಂಡನಿಗೆ ತಿಳಿಸದೇ ಗರ್ಭಪಾತ ಮಾತ್ರೆ ಸೇವನೆ ಮಾಡಿದ್ದರಿಂದ ಮಹಿಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಮಹಿಳೆ ಗರ್ಭಧಾರಣೆ ಪರೀಕ್ಷೆ ಮಾಡಿಸಿದ್ದಾರೆ, ಈ ವೇಳೆ ಗರ್ಭಿಣಿ ಎಂಬ ವಿಷಯ ದೃಢಪಟ್ಟಿದೆ. ಈ ಬಗ್ಗೆ ಮಹಿಳೆ ಗಂಡನ ಬಳಿ ತಿಳಿಸಿದ್ದಾರೆ. ಇದಕ್ಕೆ ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ತೋರಿಸೋಣ ಎಂದು ಹೇಳಿದ್ದಕ್ಕೆ ಮಹಿಳೆ ಮುನಿಸಿಕೊಂಡು, ಗಂಡನಿಗೆ ವಿಚಾರ ತಿಳಿಸದೆ ಗರ್ಭಪಾತ ಮಾತ್ರೆ ಸೇವಿಸಿದ್ದಾರೆ.
ನಂತರ ಅಧಿಕ ರಕ್ತಸ್ರಾವವಾಗುತ್ತಿರುವ ಬಗ್ಗೆ ಗಂಡನಿಗೆ ಫೋನ್ ಮಾಡಿ ಮಹಿಳೆ ತಿಳಿಸಿದ್ದಾರೆ. ತಕ್ಷಣ ಗಂಡ, ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದಾಗ ಪತ್ನಿ ಅದಕ್ಕೆ ನಿರಾಕರಿಸಿದ್ದಾರೆ. ನಂತರ ರಕ್ತಸ್ರಾವ ಹೆಚ್ಚಾಗಿ ಮಹಿಳೆ ಮೃತಪಟ್ಟಿದ್ದಾರೆ. ಮೃತ ಪ್ರೀತಿ ಕುಶ್ವಾಸ್‌ಗೆ ಹನ್ನೊಂದು ತಿಂಗಳ ಗಂಡು ಮಗು ಇದೆ.
ಘಟನೆ ಸಂಬಂಧ ಮಹಿಳೆ ಸಹೋದರ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಹೃದಯಾಘಾತದಿಂದ ಮಹಿಳೆ ಸಾವು
ಉಡುಪಿ: ಬ್ರಹ್ಮಾವರ ತಾಲೂಕು ಕೋಟ ಪಡುಕರೆಯ ಮಹಿಳೆಯೊಬ್ಬರು ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದ್ದಾಳೆ. ಭವ್ಯಾ (30) ಮೃತರು. ಕೋಟ ಪಡುಕರೆ ಖಾಸಗಿ ಮೀನು ಸಂಸ್ಕರಣಾ ಫ್ಯಾಕ್ಟರಿ ಕಚೇರಿಯಲ್ಲಿ ಇವರು ಕೆಲಸ ಮಾಡುತ್ತಿಳು. ಇವರು ಪತಿ, ಸಹೋದರ, ತಂದೆ, ತಾಯಿಯನ್ನು ಅಗಲಿದ್ದಾರೆ.
ಇದನ್ನೂ ಓದಿ | Suicide case | ಕೌಟುಂಬಿಕ ಕಲಹದ ಯಾತನೆ: ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ