Site icon Vistara News

Aero India 2023: ಕರ್ನಾಟಕದ ಚಂದನದಂತೆ ಏರೋ ಇಂಡಿಯಾ ಕಂಪು ಪಸರಿಸಲಿದೆ: ರಕ್ಷಣಾ ಸಚಿವ ರಾಜನಾಥ ಸಿಂಗ್‌

Rajnath singh says Aero India 2023 will generate more employment to karnataka youth

#image_title

ಬೆಂಗಳೂರು: ಕರ್ನಾಟಕವು ತ್ಯಾಗ, ವಿಜ್ಞಾನ, ಶೌರ್ಯದ ನಾಡಾಗಿದ್ದು, ಇಲ್ಲಿನ ಚಂದನವು ದೂರ ದೇಶಗಳವರೆಗೆ ಕಂಪು ಬೀರಿದಂತೆಯೇ ಏರೋ ಇಂಡಿಯಾ (Aero India 2023) ಕಾರ್ಯಕ್ರಮವೂ ವಿಶ್ವಾದ್ಯಂತ ಪಸರಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ಯಲಹಂಕದ ವಾಯುನೆಯೆಯಲ್ಲಿ ಐದು ದಿನ ನಡೆಯಲಿರುವ 14ನೇ ಆವೃತ್ತಿಯ ಏರೋ ಇಂಡಿಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಮಾತನಾಡಿದರು.

ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ನಮ್ಮ ದೇಶ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಏರೋ ಇಂಡಿಯಾದ ಪ್ರಮುಖ ಲಕ್ಷಣಗಳೆಂದರೆ ಎತ್ತರ ಹಾಗೂ ವೇಗ. ಭಾರತದ ಕುರಿತು ಅತ್ಯಂತ ಎತ್ತರದ ಬದ್ಧಥೆ ಹಾಗೂ ನಿರ್ಧಾರ ಕೈಗೊಳ್ಳುವಲ್ಲಿ ವೇಗವು ಮೋದಿ ಸರ್ಕಾರದಲ್ಲಿದೆ. ಇದೆಲ್ಲ ಸಾಧನೆಯ ಹಿಂದೆ ಪ್ರಧಾನಿಯವರ ಪ್ರೇರಣಾ ಶಕ್ತಿ ಇದೆ.

ಇಂದು ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ದೂರ ಕ್ರಮಿಸಿದೆ. ಮಾರ್ಗದಲ್ಲಿ ಆಗಮಿಸುವ ಅಡೆತಡೆಗಳನ್ನು ನಿವಾರಿಸಿಕೊಂಡಿದ್ದು, ಭವಿಷ್ಯದಲ್ಲಿ ಇದು ಸಹಕಾರವಾಗಲಿದೆ. ಕರ್ನಾಟಕದ ಭೂಮಿ ಶೌರ್ಯ, ಪರಾಕ್ರಮ, ತ್ಯಾಗಕ್ಕೆ ಹೆಸರುವಾಸಿ. ಈ ಭೂಮಿಯು ನಮ್ಮ ದೇಶದ ಊತ್ಪಾದನೆ ಹಾಘೂ ವಿಜ್ಞಾನಕ್ಕೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ರಕ್ಷಣಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋಧೀಐಔಋಊ ಂಊರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಎರಡು ಕಾರ್ಯಕ್ರಮ ಕರ್ನಾಟಕದಲ್ಲೇ ನಡೆದಿದೆ ಎನ್ನುವುದು ಈ ರಾಜ್ಯದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ: Aero India 2023: ಉದ್ಘಾಟನೆಗೆ ಬಂದ ಪ್ರಧಾನಿಗೆ ಲೋಹದ ಹಕ್ಕಿಗಳ ಸಾಹಸದ ಸ್ವಾಗತ, ಸಂಭ್ರಮದಿಂದ ಕೈಬೀಸಿದ ಮೋದಿ

ಕರ್ನಾಟಕದ ಚಂದನ ಸುವಾಸನೆ ದೇಶದ ಗಡಿಗಳನ್ನು ದಾಟಿ ದೂರ ದಾಟುವಂತೆ ಏರೋ ಇಂಡಿಯಾದ ಪ್ರಭಾವವೂ ದೂರ ದೂರದವರೆಗೆ ಆಗಲಿದೆ ಎನ್ನುವುದು ನಮ್ಮ ಆಶಯ. ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪಾತ್ರ ಮಹತ್ವವಾದದ್ದು.

ಪ್ರಧಾನಿಯವರ ವ್ಯಾಪಕ ದೃಷ್ಟಿ ಹಾಗೂ ಸಂಕಲ್ಪದ ಕಾರಣಕ್ಕೆ ಆರ್ಥಿಕತೆಯಲ್ಲೂ ಮುನ್ನಡೆ ಸಾಧಿಸುತ್ತಿದ್ದು, ಶೀಘ್ರದಲ್ಲೆ ಮೂರನೇ ಅತಿ ದೊಡ್ಡ ಆರ್ಥಿಕತೆ ಆಗಲಿದೆ. ಈ ಕಾರ್ಯಕ್ರಮದಲ್ಲಿ ಅನೇಕ ದೇಶಗಳ ರಕ್ಷಣಾ ಸಚಿವರು, ಸಿಇಒಗಳು, ವಾಯುದಳ ಮುಖ್ಯಸ್ಥರು ಆಗಮಿಸಲಿದ್ದಾರೆ. ಇವರೆಲ್ಲರಿಗೂ ಸ್ವಾಗತ. ಈ ಕಾರ್ಯಕ್ರಮದಲಿ 700 ಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ಅತ್ಯುತ್ತಮ ಸಂಶೋಧನೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಇದು ವಿಶ್ವದಲ್ಲಿ ಹೆಚ್ಚಾಗುತ್ತಿರುವ ಆಸಕ್ತಿಯನ್ನೂ ತೋರಿಸುತ್ತದೆ ಎಂದರು.

Exit mobile version