Site icon Vistara News

ರಾಜಧಾನಿಗೆ ಆಶಾ ಕಾರ್ಯಕರ್ತೆಯರ ಲಗ್ಗೆ, ಬೇಡಿಕೆ ಈಡೇರಿಕೆಗಾಗಿ ಬೃಹತ್‌ ಪ್ರತಿಭಟನೆ

ಬೆಂಗಳೂರು: ಹಲವು ವರ್ಷಗಳಿಂದ ಈಡೇರದ ಬೇಡಿಕೆಗಳನ್ನು ಕೂಡಲೇ ಪೂರೈಸಿ ಎಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ರಾಜಧಾನಿಯಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ AIUTUC ನೇತೃತ್ವದಲ್ಲಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬೆಳಗ್ಗೆ 11 ಗಂಟೆಯಿಂದ ಆರಂಭವಾದ ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಹಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ. ಕಳೆದ ಬಾರಿ ಐವತ್ತು ಸಾವಿರಕ್ಕೂ ಹೆಚ್ಚು ಆಶಾಗಳು ರಾಜಧಾನಿಗೆ ಆಗಮಿಸಿ ನಗರದಲ್ಲಿ ಟ್ರಾಫಿಕ್ ಜಾಮ್ ಮಾಡಿ ತಮ್ಮ ಪವರ್ ತೋರಿಸಿದರೆ ಈ ಬಾರಿ ಒಂದು ಲಕ್ಷ ಮಂದಿ ಬೆಂಗಳೂರಿಗೆ ಬರಬೇಕು ಎಂದು ಸಂಘಟನೆ ಕರೆ ನೀಡಿತ್ತು. ಎಲ್ಲಾ ಜಿಲ್ಲೆಗಳಿಂದ ಆಶಾ ಕಾರ್ಯಕರ್ತೆಯರು ಬೆಂಗಳೂರಿಗೆ ಧಾವಿಸಿದ್ದಾರೆ.

BMTCಯಿಂದ ವಜಾಗೊಂಡ ಚಾಲಕರ ಪ್ರತಿಭಟನೆ: ದಯಾಮರಣ ಕೋರಿ ಪತ್ರ

ಕೊರೊನಾ ಸಂದರ್ಭದಿಂದ ಈವರೆಗೆ ಅನೇಕ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ ಸರಿಯಾದ ಪ್ರೋತ್ಸಾಹಧನ ಅಥವಾ ವೇತನ ದೊರಕಿಲ್ಲ ಎಂದು ಡಿ. ನಾಗಲಕ್ಷ್ಮೀ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. RCH ಪೋರ್ಟಲ್‌ ಆಶಾ ಕಾರ್ಯಕರ್ತೆಯರ ಕೆಲಸವು ದಾಖಲಾತಿ ಮಾಡುವ ಆನ್‌ಲೈನ್‌ ಪೋರ್ಟಲ್‌. ಆಶಾ ಕಾರ್ಯಕರ್ತೆಯರು ಮಾಡಿದಂತಹ ಕಾರ್ಯಗಳು ಈವರೆಗೆ ಸರ್ಕಾರದ RCH ಪೋರ್ಟಲ್‌ನಲ್ಲಿ ದಾಖಲಾಗಿಲ್ಲ. ಸರ್ಕಾರವು RCH ಪೋರ್ಟಲ್‌ ಸರಿಪಡಿಸುವಂತೆ ಹಾಗೂ ತಮ್ಮ ಕಾರ್ಯಗಳು ಅದರಲ್ಲಿ ಸರಿಯಾಗಿ ದಾಖಲಾಗುವಂತೆ ಆಗ್ರಹಿಸಿದರು. ಅಲ್ಲದೆ, ಈಗಾಗಲೇ ಅನೇಕ ಸರ್ವೇಗಳನ್ನು ಆಶಾ ಕಾರ್ಯಕರ್ತೆಯರು ಮಾಡಿದ್ದು, ಮೊಬೈಲ್‌ ಆಪ್‌ ಮೂಲಕ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಸರ್ಕಾರವು ಈ ಎಲ್ಲಾ ಕಾರ್ಯಗಳಿಗೆ ಸೂಕ್ತ ವೇತನ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು.

ಆಶಾ ಕಾರ್ಯಕರ್ತೆಯರ ಬೃಹತ್‌ ಪ್ರತಿಭಟನೆ

ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳು

  1. ಕಳೆದ ಹದಿನೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹೆಚ್ಚಾಗಿಲ್ಲ.
  2. ಕೋವಿಡ್ ಸಂದರ್ಭದಲ್ಲಿ ವಾರಿಯರ್ಸ್ ಆಗಿ 24 ಗಂಟೆ ಕೆಲಸ ಮಾಡಿದ್ದರೂ ಕೆಲಸಕ್ಕೆ ತಕ್ಕ ವೇತನ ದೊರಕಿಲ್ಲ.
  3. RCH ಪೋರ್ಟಲ್ ಡೇಟಾ ಎಂಟ್ರಿ ಸಮಸ್ಯೆಯನ್ನು ಬಗೆಹರಿಸಿ
  4. ಆರೋಗ್ಯ ಮತ್ತು ನಿವೃತ್ತಿ ಪರಿಹಾರ ಸೇರಿದಂತೆ ಹಲವು ಸೌಲಭ್ಯ ಒದಗಿಸಿ
  5. ಸಹಾಯ ಧನ ನೀಡಿದ್ದಾರೆ, ಆದರೆ 3 ತಿಂಗಳಿಂದ ವೇತನ ನೀಡಿಲ್ಲ.
  6. 2 ರಿಂದ 3 ಗಂಟೆ ಮಾತ್ರ ಕೆಲಸದ ಅವಧಿ ಎಂದು ತಿಳಿಸಿ 11 ರಿಂದ 12 ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ.

ಈ ಬೇಡಿಕೆಗಳು ಈಡೇರದಿದ್ದಲ್ಲಿ 42 ಸಾವಿರ ಕಾರ್ಯಕರ್ತೆಯರು ಕೂಡ ಲಗ್ಗೆ ಇಟ್ಟು ತೀವ್ರ ಪ್ರತಿಭಟನೆ ನಡೆಸುವುದಾಗಿ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಸರಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಸೂಕ್ತ ವೇತನಕ್ಕೆ ಆಗ್ರಹಿಸಿ ಮೇ 17ರಂದು ಅಶಾ ಕಾರ್ಯಕರ್ತೆಯರ ಪ್ರತಿಭಟನೆ

Exit mobile version