Site icon Vistara News

Assault | ಪುಟ್‌ಪಾತ್ ಮೇಲೆ ಬೈಕ್ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮುಖಕ್ಕೆ ಪಂಚ್ ಮಾಡಿದ ಡೆಲಿವರಿ ಬಾಯ್

Assault

ಬೆಂಗಳೂರು: ಪುಟ್‌ಪಾತ್ ಮೇಲೆ ಬೈಕ್ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಡೆಲಿವರಿ ಬಾಯ್‌ ಒಬ್ಬ ಮುಖಕ್ಕೆ ಪಂಚ್ ಮಾಡಿದ ಘಟನೆ ಹೆಚ್‌ಎಸ್‌ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪುಟ್‌ಪಾತ್ ಮೇಲೆ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸುತ್ತಿದ್ದ ಡೆಲಿವರಿ ಬಾಯ್ ಒಬ್ಬನನ್ನು ಪ್ರಶ್ನೆ ಮಾಡಿದ ಪರಾಗ್ ಜೈನ್ ಎಂಬವರನ್ನು ಈ ಡೆಲಿವರಿ ಬಾಯ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಂಚ್‌ ಮಾಡಿದ್ದಾನೆ. ಈತ ಜೆಪ್ಟೊ ಸಂಸ್ಥೆಯ ಡೆಲಿವರಿ ಬಾಯ್‌ ಎಂಬುದು ತಿಳಿದುಬಂದಿದೆ. ಕೂಡಲೇ ಸ್ಥಳೀಯರು ಇಬ್ಬರನ್ನೂ ಬಿಡಿಸಿದ್ದಾರೆ. ಈ ಕುರಿತು ಪರಾಗ್‌ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ಬೆಂಗಳೂರು ನಗರ ಪೊಲೀಸ್‌ ಟ್ವಿಟರ್‌ ಖಾತೆಯಿಂದ ಸಲಹೆ ದೊರೆತಿದೆ.

ಇದನ್ನೂ ಓದಿ | Man Thrashed Girlfriend | ಪ್ರೇಯಸಿ ಮೇಲೆ ಹಲ್ಲೆ ನಡೆಸಿದ ಯುವಕನ ಬಂಧನ, ಜೆಸಿಬಿ ಬಳಸಿ ಆತನ ಮನೆ ಧ್ವಂಸ

Exit mobile version