ಬೆಂಗಳೂರು: ವಿಕೋಪಕ್ಕೆ ತಿರುಗಿದ ಜಗಳವು (Assault Case) ವ್ಯಕ್ತಿಯೊಬ್ಬನ ಸಾವಿನಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಳ್ತೂರು ಕಾಲೋನಿಯಲ್ಲಿ ಘಟನೆ ನಡೆದಿದೆ.ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಸಿಟ್ಟಾಗಿ ಕಪಾಳಕ್ಕೆ ಹೊಡೆದಿದ್ದರಿಂದ ಪ್ರಾಣಪಕ್ಷಿಯೇ ಹಾರಿಹೋಗಿದೆ. ಪ್ರಭುರಾಮ್ ಪ್ರಸಾದ್ (33) ಮೃತ ದುರ್ದೈವಿ.
ನಿನ್ನೆ ಭಾನುವಾರ ರಾತ್ರಿ ಪ್ರಭುರಾಮ್ ಹಬ್ಬಕ್ಕೆಂದು ಮಗನ ಜತೆ ಬೈಕ್‌ನಲ್ಲಿ ದೇಗುಲದ ಬಳಿ ಹೋಗಿದ್ದರು. ದಾರಿ ಮಧ್ಯೆ ಬರುವಾಗ ಸ್ಕೂಟರ್‌ನಲ್ಲಿ ಏನೋ ಸೌಂಡ್ ಬರುತ್ತಿದೆ ಎಂದು ಸೈಡ್‌ಗೆ ನಿಲ್ಲಿಸಿ, ಪರಿಶೀಲಿಸುತ್ತಿದ್ದರು. ಇದೇ ವೇಳೆ ಅದೇ ದಾರಿಯಲ್ಲಿ ಕಾರಿನಲ್ಲಿ ಬಂದ ಪರಿಚಯಸ್ಥ ಮಹಿಳೆ ಬೈಕ್‌ಗೆ ಟಚ್ ಮಾಡಿದ್ದಾಳೆ.
ಈ ಬಗ್ಗೆ ಪ್ರಭುರಾಮ್ ಪ್ರಶ್ನೆ ಮಾಡಿದ್ದಕ್ಕೆ ಮನೆ ಹತ್ರ ಬಾ ಎಂದು ಹೊರಟು ಹೋಗಿದ್ದಾಳೆ. ಬಳಿಕ ಮನೆ ಬಳಿ ಹೋದಾಗ ಮಹಿಳೆಯ ಪತಿ ಅನಿಲ್ ಎಂಬಾತ ಪ್ರಭುರಾಮ್ ಜತೆಗೆ ಜಗಳ ತೆಗೆದಿದ್ದಾನೆ. ಈ ವೇಳೆ ಪ್ರಭುರಾಮ್ ಕೆನ್ನೆಗೆ ಅನಿಲ್ 4-5 ಬಾರಿ ಬಲವಾಗಿ ಹೊಡೆದಿದ್ದಾನೆ. ಜಗಳದ ಬಳಿಕ ಮನೆಗೆ ಹೋದ ಪ್ರಭು ನೋವಿನಲ್ಲೇ ಮಲಗಿದ್ದಾನೆ. ಆದರೆ ರಾತ್ರಿ 1 ಗಂಟೆ ಸುಮಾರಿಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ.
ಪ್ರಭುರಾಮ್ ತಾಯಿ ಪ್ರಕರಣ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ IPC ಸೆಕ್ಷನ್ 304 ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ಅತ್ಯಾಚಾರ ಕೇಸ್; ಎಚ್.ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು: ವಕೀಲರ ಅಸಮಾಧಾನ
Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್ ಡಾಂಗ್!
ಬೆಂಗಳೂರು: ನಮ್ಮ ಮೆಟ್ರೋ ರೈಲಿನ ಬಾಗಿಲ ಬಳಿ ಬಿಗಿದಪ್ಪಿ ನಿಂತಿದ್ದ ಯುವಕ- ಯುವತಿಯ ವರ್ತನೆಗೆ ಸಹ ಪ್ರಯಾಣಿಕರು ಕಿಡಿಕಾರಿದ್ದಾರೆ. ದೆಹಲಿ ಮೆಟ್ರೋದಂತೆ ಬೆಂಗಳೂರಲ್ಲಿ ನಮ್ಮ ಮೆಟ್ರೋ ಪರಿವರ್ತನೆ ಆಗುತ್ತಿದೆ ಎಂದು ಅಸಮಾಧಾನ (Namma Metro) ತೋರಿದ್ದಾರೆ.
ಸಾರ್ವಜನಿಕರ ಎದುರಿನಲ್ಲಿ ಈ ರೀತಿ ಅಸಭ್ಯವಾಗಿ ವರ್ತನೆ ಮಾಡುತ್ತಿರುವುದಕ್ಕೆ ಆಕ್ರೋಶಗಳು ಕೇಳಿ ಬಂದಿವೆ. ಸಹ ಪ್ರಯಾಣಿಕರೊಬ್ಬರು ಯುವಕ-ಯುವತಿಯ ವಿಡಿಯೊ ಸೆರೆಹಿಡಿದು ಎಕ್ಸ್‌ನ ಸ್ಯಾಮ್ (Sam459om) ಎಂಬುವವರ ಖಾತೆಯಿಂದ ಪೋಸ್ಟ್ ಆಗಿದೆ. ಯುವಕನನ್ನು ಒಪ್ಪಿಕೊಂಡಿದ್ದ ಯುವತಿ ಅಕ್ಷರಶಃ ಚುಂಬಿಸುತ್ತಿದ್ದಳು ಎಂದು ಬಿಎಂಆರ್‌ಸಿಎಲ್, ನಮ್ಮ ಮೆಟ್ರೋ ಹಾಗೂ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಇತ್ತ ಬೆಂಗಳೂರು ನಗರ ಪೊಲೀಸರು ಈ ಬಗ್ಗೆ ಕ್ರಮವಹಿಸಲಾಗುವುದು, ಘಟನೆ ಸಂಬಂಧ ಮಾಹಿತಿ ನೀಡಿ ಎಂದು ರೀ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ನಮ್ಮ ಮೆಟ್ರೋದಲ್ಲಿ ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲ ವಯೋಮಾನದವರು ಪ್ರಯಾಣಿಸುತ್ತಾರೆ. ಈ ರೀತಿಯ ನಡವಳಿಕೆಯು ಸರಿಯಲ್ಲ ಎಂದಿದ್ದಾರೆ.
Hey @OfficialBMRCL @NammaMetro_ @BlrCityPolice
— KPSB 52 (@Sam459om) May 5, 2024
what happening in Namma metro
slowly Bangalore metro are turning into Delhi metro
Take some action on them
The girl was literally kissing the boy pic.twitter.com/p3pdi2vM7I
ಕೆಲವರು ಪ್ರೀತಿ-ಪ್ರೇಮ, ಪ್ರಣಯವೆಲ್ಲ ಮನೆಯಲ್ಲಿದ್ದರೆ ಚೆನ್ನ ಎಂದಿದ್ದಾರೆ. ಹಾಗೇ, ಸಾರ್ವಜನಿಕ ಪ್ರದೇಶದಲ್ಲಿ ಹೀಗೆ ಮಾಡುವುದರಿಂದ ಉಳಿದವರಿಗೆ ಮುಜುಗರ ಆಗುತ್ತದೆ ಎಂದೂ ಹೇಳಿದ್ದಾರೆ. ಆದರೆ ಇನ್ನೂ ಕೆಲವರು. ಇದರಲ್ಲಿ ಅಸಭ್ಯ ವರ್ತನೆ ಏನಿದೆ. ಪರಸ್ಪರ ಅಪ್ಪಿಕೊಂಡು ನಿಂತಿದ್ದರಷ್ಟೇ. ಬೇರೆ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ