ಬೆಂಗಳೂರು: ಯುವಕರ ನಡುವೆ ಗಲಾಟೆಯೊಂದು ತಿಂಗಳ ಹಿಂದೆ (Assault Case) ನಡೆದಿತ್ತು. ಬೆಂಗಳೂರಿನ ಕಾಡುಗೋಡಿಯ ಬೆಳತ್ತೂರು ಕಾಲೋನಿಯಲ್ಲಿ ಧನಂಜಯ್ ಎಂಬಾತನನ್ನು ಆತನ ಸ್ನೇಹಿತರೇ ಹಿಗ್ಗಾಮುಗ್ಗಾ ಥಳಿಸಿದ್ದರು. ತಾವು ಅರೆ ಬೆತ್ತಲಾಗಿ ಧನಂಜಯ್‌ನನ್ನು ಅರೆ ಬೆತ್ತಲೆ ಮಾಡಿ ನಡುರಸ್ತೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದರು.
ಹಲ್ಲೆ ಮಾಡುವ ವಿಡಿಯೊವನ್ನು ಅಲ್ಲಿನ ಸ್ಥಳೀಯರು ಚಿತ್ರೀಕರಿಸಿದ್ದರು. ಆದರೆ ಇದೀಗ ಒಂದು ತಿಂಗಳ ನಂತರ ಸೋಷಿಯಲ್ ಮೀಡಿಯಾದಲ್ಲಿ ಹಲ್ಲೆ ವಿಡಿಯೊ ವೈರಲ್ ಆಗಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಬೆಂಗಳೂರು ಸೇಫ್ ಸಿಟಿಯಿಂದ ದೂರಾಗುತ್ತಿದೆ ಎಂದು ಕಿಡಿಕಾರಿದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಕಾಡುಗೋಡಿ ಪೊಲೀಸರು, ವಿಡಿಯೊ ಅಧಾರಿಸಿ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಧನಂಜಯ್ ಹಾಗೂ ಆರೋಪಿಗಳು ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: MM Hills : ಮಲೆಮಹದೇಶ್ವರ ಬೆಟ್ಟದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ; ಒಬ್ಬರು ಸಾವು, ಮೂವರು ಗಂಭೀರ
ಸದ್ಯ ಹೋಟೆಲ್ ಮ್ಯಾನೇಜರ್ ದೂರಿನ ಮೇರೆಗೆ ಸಂತೋಷ್, ಆಕಾಶ್, ಅಮರೇಶ್, ನವೀನ್, ವಿಶಾಲ್ ಜೋಷಿ ಹಾಗೂ ಸುರೇಂದ್ರ, ಮಂಜುನಾಥ್ ಎಂಬುವವರನ್ನು ಬಂಧಿಸಲಾಗಿದೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕಾಡುಗೋಡಿ ಹಲ್ಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ವೈಟ್ ಫಿಲ್ಡ್ ಡಿಸಿಪಿ ಶಿವಕುಮಾರ್, ಮೇ 8ರಂದು ಸಾಯಿಪ್ಯಾಲೆಸ್ ಹೊಟೇಲ್ ಮುಂದೆ ಈ ಘಟನೆ ನಡೆದಿದೆ. ಹಲ್ಲೆ ಮಾಡಿದ ಆರೋಪಿಗಳು ಹೋಟೆಲ್ ಮುಂದೆ ಮಧ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದರು. ಇದನ್ನೂ ಧನಂಜಯ್ ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಾದ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಧನಂಜಯ್‌ನನ್ನು ಕರೆಸಿ ನಮ್ಮ ಸಿಬ್ಬಂದಿ ದೂರು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ