ಬೆಂಗಳೂರು: ಟಿಪ್ಪುನಗರದ ಮಾಜಿ ಕಾರ್ಪೊರೇಟರ್ ಆಯುಬ್ ಖಾನ್ ಮೇಲೆ ಸಂಬಂಧಿಕರೇ ಚಾಕು ಇರಿದಿದ್ದಾರೆ. ಬುಧವಾರ ರಾತ್ರಿ ಸುಮಾರು 7:30ಕ್ಕೆ ಘಟನೆ ನಡೆದಿದೆ. ಆಸ್ತಿ ವಿವಾದಕ್ಕೆ ಗಲಾಟೆ ಶುರುವಾಗಿದ್ದು, ನಂತರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.
ಗಲಾಟೆ ನಡುವೆ, ಕೈಯಲ್ಲಿ ಹಿಡಿದಿದ್ದ ಚಾಕುವಿನಿಂದ ಆಯುಬ್ಖಾನ್ ಹೊಟ್ಟೆ ಭಾಗಕ್ಕೆ ಸಹೋದರ ಸಂಬಂಧಿ ಮಥೀನ್ ಖಾನ್ ಚಾಕು ಇರಿದಿದ್ದಾನೆ. ಚಾಮರಾಜಪೇಟೆ ಬಳಿಯಿರುವ ವಿನಾಯಕ ಥಿಯೇಟರ್ ಬಳಿ ಘಟನೆ ನಡೆದಿದೆ. ಆಸ್ತಿ ವಿಚಾರದ ಜತೆಗೆ, ರಾಜಕೀಯವಾಗಿ ಬೆಳೆಯುವುದಕ್ಕೆ ಬಿಡುತ್ತಿಲ್ಲ ಎಂಬ ಕೋಪವನ್ನೂ ಸೇರಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಚಾಕು ಇರಿತದಿಂದ ಗಾಯಗೊಂಡ ಆಯೂಬ್ ಖಾನ್ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಮಹಾಂತೇಶನ ಕೊಲೆಗೇ ಸಂಚು ರೂಪಿಸಿದ್ದರಂತೆ ಚಂದ್ರಶೇಖರ ಗುರೂಜಿ