Site icon Vistara News

ಬೆಂಗಳೂರಲ್ಲಿ ರಾಷ್ಟ್ರಪತಿ ಸಂಚಾರ, ಹಲವೆಡೆ ಟ್ರಾಫಿಕ್‌ ಜಾಮ್‌ ಅಲರ್ಟ್!‌ ಎಲ್ಲೆಲ್ಲಿ ಜಾಮ್‌ ಆಗ್ತಿದೆ?

ramnath kovind

ಬೆಂಗಳೂರು: ಸೋಮವಾರ ರಾಜ್ಯಕ್ಕೆ ಆಗಮಿಸಿರುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಇಂದು (ಮಂಗಳವಾರ) ಬೆಂಗಳೂರಿನಲ್ಲಿ ಇಸ್ಕಾನ್ ದೇವಾಲಯದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಂಚಾರ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದ್ದು ಬೆಂಗಳೂರಿನ ಹಲವೆಡೆ ಟ್ರಾಫಿಕ್‌ ಜಾಮ್‌ ಆಗುವ ಸಾಧ್ಯತೆ ಹೆಚ್ಚಾಗಿದೆ.

ಒಬ್ಬ ಡಿಸಿಪಿ ಮೂರು ಎಸಿಪಿ ನೇತೃತ್ವದಲ್ಲಿ ಮಾರ್ಗದಲ್ಲಿ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಉಳಿದಂತೆ ರಾಷ್ಟ್ರಪತಿಗಳು ಸಂಚಾರ ಮಾಡುವ ಮಾರ್ಗಗಳಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ರಾಷ್ಟ್ರಪತಿ ಸಂಚಾರ ನಡೆಸುವ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುವುದು ಖಚಿತವಾಗಿರುವುದರಿಂದ ಬೆಂಗಳೂರಿನ ಪ್ರಯಾಣಿಕರು ಕೆಲ ಮಾರ್ಗಗಳನ್ನು ಅವಾಯ್ಡ್‌ ಮಾಡುವುದು ಉತ್ತಮ. ಬೆಳಗ್ಗೆ 10.15ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಟ್ರಾಫಿಕ್‌ ಉಂಟಾಗುವ ಸಾಧ್ಯತೆ ಇದೆ.

ಕನಕಪುರ ರಸ್ತೆಲ್ಲಿರುವ ಎಲ್ಲಾ ಅಂಗಡಿಗಳನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಚ್ಚುವಂತೆ ತಿಳಿಸಲಾಗಿದೆ. ಮಧ್ಯಾಹ್ನ 1 ಗಂಟೆಯ ನಂತರ ರಾಷ್ಟ್ರಪತಿಯವರು ದೇವಸ್ಥಾನದಿಂದ ಹಿಂದಿರುಗಲಿದ್ದಾರೆ. ಈ ಕೆಳಗಿನ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಬಹುದು.

ದೊಡ್ಡಕಲ್ಲಸಂದ್ರ, ಇಸ್ಕಾನ್ ದೇವಸ್ಥಾನಕ್ಕೆ ಪ್ರಯಾಣಿಸಲಿರುವ ಮಾರ್ಗ:

  1. ಕ್ವೀನ್ಸ್ ರಸ್ತೆ
  2. ವಿಠಲ್‌ ಮಲ್ಯ ರಸ್ತೆ
  3. RRMR ರಸ್ತೆ
  4. NR ವೃತ್ತ
  5. ದೇವಾಂಗ ರಸ್ತೆ
  6. ಲಾಲ್‌ಬಾಗ್ ರಸ್ತೆ
  7. ಕೃಂಬಿಗಲ್ ರಸ್ತೆ
  8. ಸೌತೆಂಡ್
  9. ಬನಶಂಕರಿ
  10. ಸಾರಕ್ಕಿ
  11. ಕೋಣನಕುಂಟೆ ಕ್ರಾಸ್,
  12. ದೊಡ್ಡಕಲ್ಲಸಂದ್ರ, ಇಸ್ಕಾನ್ ದೇವಸ್ಥಾನ ರಸ್ತೆ (ದೊಡ್ಡಕಲ್ಲಸಂದ್ರದ ಹತ್ತಿರ)

ಕಾರ್ಯಕ್ರಮದ ಬಳಿಕ ಹಿಂದಿರುಗವ ಮಾರ್ಗ:

ಕನಕಪುರ ರಸ್ತೆ

ಸೌತೆಂಡ್

ಜೆಸಿ ರಸ್ತೆ

ಟೌನ್ ಹಾಲ್

ಕಾರ್ಪೊರೇಷನ್ ವೃತ್ತ,

ಕಸ್ತೂರಬಾ ರಸ್ತೆ,

ಅನಿಲ್ ಕುಂಬ್ಳೆ ಜಂಕ್ಷನ್

ಬಿಆರ್‌ವಿ

ಹಳೆಯ ವಿಮಾನ ನಿಲ್ದಾಣ ರಸ್ತೆ

ಇದನ್ನೂ ಓದಿ: ರಾಷ್ಟ್ರಪತಿ ಬೆಂಗಳೂರು ಪ್ರವಾಸ: ಭಾಗವಹಿಸುವ 2 ಕಾರ್ಯಕ್ರಮಗಳ ವಿವರ ಇಲ್ಲಿದೆ

Exit mobile version