ಬೆಂಗಳೂರು: ಕಳೆದ ಎರಡು ವರ್ಷದಿಂದ ಶಂಕಿತ ಉಗ್ರ ತಾಲೀಬ್ ಹುಸೇನ್ ಬೆಂಗಳೂರಿನಲ್ಲಿಯೇ ಅಡಗಿಕೊಂಡಿದ್ದರೂ ರಾಜ್ಯ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ. Terrorist arrest ವಿಷಯ ಈಗ ರಾಜ್ಯ ಪೊಲೀಸರಿಗೆ ನಿದ್ದೆ ಕೆಡಿಸಿದೆ. ತಾಲಿಬ್ ಹುಸೇನ್ ಬಂಧನವಾಗುತ್ತಿದ್ದಂತೆ ಐಎಸ್‌ಡಿ ಮತ್ತು ಎಟಿಸಿ ಇಲಾಖೆ ತನಿಖೆ ಕೈಗೊಂಡಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬೆಂಗಳೂರಿಗೆ ಆಗಮಿಸಿ ತಾಲೀಬ್ ಹುಸೇನ್ ಎಂಬ ಶಂಕಿತ ಉಗ್ರನನ್ನು ಎರಡು ದಿನದ ಹಿಂದೆ ಬಂಧಿಸಿದ್ದರು. ಬೆಂಗಳೂರು ಪೊಲೀಸರ ಕಣ್ತಪ್ಪಿಸಿ ಈ ಕಾರ್ಯಾಚರಣೆ ನಡೆಸಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ತಾಲೀಬ್ ಹುಸೇನ್ ಬಂಧನದ ವೇಳೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬೆಂಗಳೂರು ಪೊಲೀಸರಿಗೆ ಎಫ್‌ಐಆರ್ ಪ್ರತಿಯನ್ನು ನೀಡಿದ್ದರು. ಆದರೆ ಅದು ಉರ್ದು ಭಾಷೆಯಲ್ಲಿ ಇದ್ದ ಕಾರಣದಿಂದ ಸಂಪೂರ್ಣ ಮಾಹಿತಿ ಸಿಗಲಿಲ್ಲ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಎಟಿಇ ಹಾಗೂ ಐಎಸ್‌ಡಿ ಇಲಾಖೆಯು ತಾಲಿಬ್ ಹುಸೇನ್ ನೆಲೆಸಿದ್ದ ಬಾಡಿಗೆ ಮನೆ, ಕೆಲಸ ಮಾಡುತ್ತಿದ್ದ ಜಾಗ, ಹಾಗೂ ಮಸೀದಿಗೆ ಭೆಟಿ ನೀಡಿ ಮಾಹಿತಿ ಪಡೆಯುವ ಮೂಲಕ ತನಿಖೆ ಆರಂಭಿಸಿದೆ. ತಾಲಿಬ್ ಹುಸೇನ್ ಹಾಗೂ ಆತನ ಪತ್ನಿಯ ಹೆಸರಿನಲ್ಲಿದ್ದ ಲೋಕಲ್ ಸಿಮ್ ಕುರಿತು ಮಾಹಿತಿ ನೀಡುವಂತೆ ದೂರವಾಣಿ ಇಲಾಖೆಗೆ ಕೇಳಿದ್ದಾರೆ. ಕಳೆದ 2 ವರ್ಷಗಳ ಕಾಲ್ ಡಾಟಾ ನೀಡುವಂತೆ ಮನವಿ ಮಾಡಿದ್ದಾರೆ.
ಈ ತನಿಖೆಯಲ್ಲಿ ಮಹತ್ವದ ಸುಳಿವು ಸಿಕ್ಕರೆ ಜಮ್ಮು ಕಾಶ್ಮೀರಕ್ಕೆ ಭೇಟಿ ಸಾಧ್ಯತೆಯಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ .
ಇದನ್ನೂ ಓದಿ: Terrorist arrest | ಉಗ್ರರಿಗೆ ಸ್ಲೀಪರ್ ಸೆಲ್ ಆಗುತ್ತಿದೆಯೇ ಕರ್ನಾಟಕ? ವರ್ಷದಲ್ಲಿ ಸೆರೆಸಿಕ್ಕ ಉಗ್ರರೆಷ್ಟು?