Site icon Vistara News

ಅಮಾಯಕರ ದರೋಡೆಗೆ ಸಂಚು, ಮೂವರು ರೌಡಿಗಳು ಸಿಸಿಬಿ ಬಲೆಗೆ

ರಾಬಾರಿ

ಬೆಂಗಳೂರು: ನಗರದಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ ಮೂವರು ರೌಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಟನ್‌ ಪೇಟೆಯ ಜಾನ್‌ಪೀಟರ್, ವಿಜಯನಗರದ ಭೈರೇಗೌಡ ಹಾಗೂ ಕೋಣನಕುಂಟೆಯ ಫಿರೋಜ್‌ ಪಾಷ ಎಂದು ಗುರುತಿಸಲಾಗಿದೆ. ಈ ಮೂವರು ರೌಡಿಗಳ ವಿರುದ್ಧ ಕೊಲೆ ಹಾಗು ದರೋಡೆ ಪ್ರಕರಣಗಳು ದಾಖಲಾಗಿತ್ತು. ಈ ಮೂವರು ಇನ್ನಿಬ್ಬರು ರೌಡಿಗಳ ಜತೆ ಸೇರಿ ಸಾರ್ವಜನಿಕರನ್ನು ದರೋಡೆ ಮಾಡುವ ಸಂಚು ಮಾಡಿದ್ದರು. ಅ ಇಬ್ಬರು ರೌಡಿಗಳನ್ನು ಮಣಿಕಂಠ ಹಾಗೂ ರಿಜ್ವಾನ್‌ ಎಂದು ಗುರುತಿಸಲಾಗಿದೆ.

ಈ ಐವರು ದುಷ್ಕರ್ಮಿಗಳು ಕಾಟನ್‌ಪೇಟೆಯ ಬಿನ್ನಿಮಿಲ್‌ ಫ್ಯಾಕ್ಟರಿಯ ಬಳಿಯ ಖಾಲಿ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳ ಸವಾರರು ಹಾಗೂ ಇನ್ನಿತರೆ ಸಾರ್ವಜನಿಕರನ್ನು ಟಾರ್ಗೆಟ್‌ ಮಾಡುತ್ತಿದ್ದರು. ಒಬ್ಬಂಟಿಯಾಗಿ ಸಂಚರಿಸುವವರ ಮೇಲೆ ಮಾರಕವಸ್ತುಗಳಿಂದ ಹಲ್ಲೆ ನಡೆಸುವುದಾಗಿ ಹೆದರಿಸಿ ಅವರ ಬಳಿ ಇರುವ ಹಣ, ಮೊಬೈಲ್‌ ಹಾಗೂ ಇನ್ನಿತರೆ ಬೆಲೆಬಾಳುವ ವಸ್ತುಗಳನ್ನು ದೋಚಲು ಹೊಂಚು ಹಾಕುತ್ತಿದ್ದರು.

ಈ ಬಗ್ಗೆ ಕಾಟನ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕೂಡಲೇ ಕಾರ್ಯಾಚರಣೆ ಆರಂಭಿಸಿ ಕಾಟನ್‌ಪೇಟೆ ಪೊಲೀಸರು ಈ ದುಷ್ಕರ್ಮಿಗಳನ್ನು ಸೆರೆಹಿಡಿಯಲಾಗಿದೆ ಹಾಗೂ ಅವರ ಬಳಿ ಇದ್ದ ಮಾರಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ವಿರುದ್ಧ ತನಿಖೆ ನಡೆಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ‘ತೆಲುಗಿನ ಕ್ರೈಮ್ ಸಿನೆಮಾಗಳೇ ಪ್ರೇರಣೆ’; ನಿವೃತ್ತ ಯೋಧ ಸುರೇಶ್ ಕೊಲೆ ಆರೋಪಿಗಳು ಅರೆಸ್ಟ್

Exit mobile version