ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ವಿಚಿತ್ರ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಕುರುಬರಹಳ್ಳಿ ಜಂಕ್ಷನ್ ಬಳಿ ನಡೆದಿದೆ. ಕಾರಿನೊಳಗೆ ನೈಟ್ರೋಜನ್ ಸಿಲಿಂಡರ್ ಲೀಕ್ ಮಾಡಿಕೊಂಡು ಇವರು ಸಾವಿಗೆ ಶರಣಾಗಿದ್ದಾರೆ.
ಸಾಫ್ಟ್‌ವೇರ್ ಎಂಜಿನಿಯರ್ ವಿಜಯ್ ಕುಮಾರ್ (51) ಸಾವಿಗೀಡಾದ ಟೆಕ್ಕಿ. ಅನಾರೋಗ್ಯದಿಂದ ಬೇಸತ್ತು ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಮೃತ ವಿಜಯ್ ಕುಮಾರ್, ಮಹಾಲಕ್ಷ್ಮಿ ಲೇಔಟ್ ನಿವಾಸಿ ಹಾಗೂ ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತಮ್ಮ ನೋವಿನ ಬಗ್ಗೆ ಮನೆಯವರ ಜೊತೆಗೂ ಬೇಸರದಿಂದ ಚರ್ಚಿಸುತ್ತಿದ್ದರಂತೆ.
ಕುರುಬರಹಳ್ಳಿ ಜಂಕ್ಷನ್ ಬಳಿ ಕಾರು ನಿಲ್ಲಿಸಿರುವ ವಿಜಯ್ ಕುಮಾರ್ ತಮ್ಮ ಕಾರಿನ ಎಲ್ಲ ಗ್ಲಾಸ್‌ಗಳನ್ನೂ ಕ್ಲೋಸ್ ಮಾಡಿಕೊಂಡು ನೈಟ್ರೋಜನ್ ಗ್ಯಾಸ್ ಸಿಲಿಂಡರ್ ಲೀಕ್ ಮಾಡಿಕೊಂಡಿದ್ದಾರೆ. ಇದಕ್ಕಾಗಿಯೇ ನೈಟ್ರೋಜನ್ ಸಿಲಿಂಡರ್ ಖರೀದಿ ಮಾಡಿದ್ದರು ಎಂದು ಗೊತ್ತಾಗಿದೆ.
ಇದಕ್ಕೂ ಮೊದಲು ತಾನು ಕಾರಿನೊಳಗೆ ಕುಳಿತುಕೊಂಡು ಸಾರ್ವಜನಿಕರ ನೆರವು ಪಡೆದು ಕಾರಿಗೆ ಹೊರಗಡೆಯಿಂದ ಕವರ್ ಹೊದಿಸಿದ್ದಾರೆ. ನಂತರ ತಲೆಗೆ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡು ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಗ್ಯಾಸ್ ಲೀಕ್ ಮಾಡಿಕೊಂಡಿದ್ದಾರೆ. ಸ್ಥಳೀಯರು ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಟೆಕ್ಕಿಯನ್ನು ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಅಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಮಾರ್ಗಮಧ್ಯೆ ವಿಜಯ್ ಕುಮಾರ್ ಸಾವನ್ನಪ್ಪಿದ್ದಾರೆ. ಪೊಲೀಸರು ಸದ್ಯ ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ | Suicide Case | ತಾಯಿಯ ಅಕ್ರಮ ಸಂಬಂಧಕ್ಕೆ ಮನನೊಂದು ಮಗ ಆತ್ಮಹತ್ಯೆ