ಬೆಂಗಳೂರು: ಶುಕ್ರವಾರ (ಆಗಸ್ಟ್ 11) ಸಂಜೆ 4.30ರ ಹೊತ್ತಿಗೆ ಬಿಬಿಎಂಪಿ ಕಚೇರಿಯ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ (BBMP Quality Control lab) ಸಂಭವಿಸಿದ ಅಗ್ನಿ ದುರಂತದಲ್ಲಿ (BBMP Fire accident) ಗಾಯಗೊಂಡ ಒಂಬತ್ತು ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿಕ್ಟೋರಿಯಾ ಆಸ್ಪತ್ರೆಯ (Victoria Hospital) ಟ್ರಾಮಾ ಸೆಂಟರ್ ನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಲೇಟೆಸ್ಟ್ ಮಾಹಿತಿ ಇಲ್ಲಿದೆ.
ಎಲ್ಲಾ 9 ಗಾಯಾಳುಗಳಿಗೆ ಟ್ರಾಮಾ ಸೆಂಟರ್‌ನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 9 ಜನರಲ್ಲಿ ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಚೀಫ್ ಇಂಜಿನಿಯರ್ ಶಿವಕುಮಾರ್, ಆಪರೇಟರ್ ಜ್ಯೋತಿ, ಎಕ್ಸಿಕ್ಯೂಟಿವ್ ಎಂಜಿನಿಯರ್ ಕಿರಣ್ ಅವರ ಸ್ಥಿತಿ ಸುಧಾರಿಸಿದೆಯಾದರೂ ಗಂಭೀರವಾಗಿಯೇ ಇದೆ.
ಚೀಫ್ ಇಂಜಿನಿಯರ್ ಶಿವಕುಮಾರ್‌ಗೆ 25% ಸುಟ್ಟಗಾಯವಾಗಿದೆ. ಅವರಿಗೆ ಗಂಟಲಿನ ಸಮಸ್ಯೆಯಿಂದಾಗಿ ಮಾತನಾಡಲು ಕಷ್ಟವಾಗುತ್ತಿದೆ. ಇಇ ಕಿರಣ್ ಸ್ಥಿತಿ ಗಂಭೀರವಾಗಿದ್ದು, ಡಯಾಲಿಸಿಸ್ ಮಾಡಲಾಗುತ್ತಿದೆ. ಕಿರಣ್ ಮೇಲೆ ಕಿಡ್ನಿ ಮೇಲೆ ಯಾವುದೇ ತೊಂದರೆ ಆಗದಂತೆ ನೆಫ್ರಾಲಜಿ ತಜ್ಞರು ನಿಗಾ ಇಟ್ಟಿದ್ದಾರೆ. ಆಪರೇಟರ್ ಜ್ಯೋತಿ ಅವರ ಪರಿಸ್ಥಿತಿಯೂ ಕ್ರಿಟಿಕಲ್ ಆಗಿ ಮುಂದುವರಿದಿದೆ. ಅವರ ಮುಖಕ್ಕೆ ಹಾನಿಯಾಗಿದ್ದು, ಉಸಿರಾಟದ ಸಮಸ್ಯೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಮೂವರೂ ಇನ್ನೂ 4-5 ದಿನ ಐಸಿಯುನಲ್ಲಿಯೇ ತೀವ್ರ ನಿಗಾ ಸ್ಥಿತಿಯಲ್ಲಿ ಇರಲಿದ್ದಾರೆ. ಉಳಿದ 6 ಜನರ ಮೇಲೆ ಮುಂದಿನ 24 ಗಂಟೆ ನಿಗಾ ಇಡಬೇಕಾಗಿದೆ.
ಗಾಯಾಳುಗಳ ಸದ್ಯದ ಸ್ಥಿತಿ ಹೀಗಿದೆ
1.ಶಿವಕುಮಾರ್: ಮುಖ್ಯ ಅಭಿಯಂತರರು, 40 ವರ್ಷ, 25% ಬರ್ನಿಂಗ್ ಆಗಿದೆ, ಗಂಟಲಿನಲ್ಲಿ ಸಮಸ್ಯೆ ಇದೆ. ಸದ್ಯದ ಆರೋಗ್ಯ ಸ್ಥಿತಿ ಗಂಭೀರ
2. ಕಿರಣ್: ಕಾರ್ಯಪಾಲಕ ಅಭಿಯಂತರರು, 35 ವರ್ಷ, 12% ಬರ್ನಿಂಗ್ ಆಗಿದೆ, ಡಯಾಲಿಸಿಸ್ ಮಾಡಲಾಗ್ತಿದೆ. ಸದ್ಯದ ಸ್ಥಿತಿ ಗಂಭೀರ
3. ಜ್ಯೋತಿ: ಆಪರೇಟರ್, 21 ವರ್ಷ, 28% ಬರ್ನಿಂಗ್ ಆಗಿದೆ. ಮುಖಕ್ಕೆ ಹಾನಿ, ಉಸಿರಾಟದ ಸಮಸ್ಯೆ ಇದೆ. ಸದ್ಯದ ಆರೋಗ್ಯ ಸ್ಥಿತಿ ಗಂಭೀರ
4. ಮನೋಜ್: ಗಣಕಯಂತ್ರ ನಿರ್ವಾಹಕರು, 32 ವರ್ಷ, 17% ಬರ್ನಿಂಗ್ ಆಗಿದೆ, ಸದ್ಯ ನಾರ್ಮಲ್ ಆಗಿದ್ದಾರೆ
5. ಶ್ರೀನಿವಾಸ್: ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್, 37 ವರ್ಷ, 27% ಸುಟ್ಟ ಗಾಯಗಳಾಗಿವೆ. ಸದ್ಯದ ಸ್ಥಿತಿ ನಾರ್ಮಲ್
6. ಸೀರಾಜ್: ಪ್ರಥಮ ದರ್ಜೆ ಸಹಾಯಕರು, 29 ವರ್ಷ, 28% ಸುಟ್ಟ ಗಾಯಗಳಾಗಿವೆ. ಸದ್ಯದ ಸ್ಥಿತಿ
ನಾರ್ಮಲ್
7. ಶ್ರೀಧರ್: ಕಾರ್ಯಪಾಲಕ ಅಭಿಯಂತರರು, 38 ವರ್ಷ,18 % ಬರ್ನಿಂಗ್. ಸದ್ಯದ ಸ್ಥಿತಿ ನಾರ್ಮಲ್
8. ಸಂತೋಷ್ ಕುಮಾರ್: ಕಾರ್ಯಪಾಲಕ ಅಭಿಯಂತರರು, 47 ವರ್ಷ, 11 ಪರ್ಸೆಂಟ್ ಬರ್ನಿಂಗ್ ಆಗಿದೆ.
ಸದ್ಯದ ಸ್ಥಿತಿ ನಾರ್ಮಲ್
9.ವಿಜಯಮಾಲ: ಕಾರ್ಯಪಾಲಕ ಅಭಿಯಂತರರು, 27 ವರ್ಷ, 25 % ಬರ್ನಿಂಗ್. ಸದ್ಯದ ಸ್ಥಿತಿ ನಾರ್ಮಲ್
ಇದನ್ನೂ ಓದಿ: BBMP Fire Accident : ಬಿಬಿಎಂಪಿ ಅಗ್ನಿ ದುರಂತ ನಿಜಕ್ಕೂ ಸಂಭವಿಸಿದ್ದು ಹೇಗೆ? ಹಾಗಿದ್ರೆ ಪರೀಕ್ಷೆ ನಡೆಸೋದು ತಜ್ಞರಲ್ವ?