Site icon Vistara News

Bengaluru Airport : ಬೆಂಗಳೂರು ಏರ್‌ಪೋರ್ಟ್‌ನ 17.7 ಎಕರೆಗಳಲ್ಲಿ ತಲೆ ಎತ್ತಲಿದೆ ಬಿಸಿನೆಸ್‌ ಪಾರ್ಕ್‌

ಬೆಂಗಳೂರು: ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (BIAL) ಅಂಗ ಸಂಸ್ಥೆಯಾದ (Bengaluru Airport) ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್ (BACL) ನ ಮಹತ್ವಾಕಾಂಕ್ಷಿ ಯೋಜನೆಯಾದ “ಬಿಸಿನೆಸ್‌ ಪಾರ್ಕ್‌” ತೆರೆಯಲು 2 ದಶಲಕ್ಷ ಚದರ ಅಡಿ ಪ್ರದೇಶವನ್ನು ತನ್ನದಾಗಿಸಿಕೊಳ್ಳುವ ಮೂಲಕ ಈ ಯೋಜನೆಯತ್ತ ತನ್ನ ಮೊದಲ ಹೆಜ್ಜೆಯನ್ನು ಇಟ್ಟಿದೆ.

ಜಾಗತಿಕ ಸಾಮರ್ಥ್ಯ ಕೇಂದ್ರ (ಗ್ಲೋಬಲ್ ಕೆಪ್ಯಾಸಿಟಿ ಸೆಂಟರ್,ಜಿಸಿಸಿ) ಗಳಲ್ಲೇ ಬೆಂಗಳೂರನ್ನು ಜಾಗತಿಕ ಕೇಂದ್ರವನ್ನಾಗಿಸುವ ಗುರಿಯನ್ನು ಹೊಂದಲಾಗಿದ್ದು, ಇದರ ಭಾಗವಾಗಿ ಬೃಹತ್‌ ಬಿಸಿನೆಸ್‌ ಪಾರ್ಕ್‌ ತೆರೆಯಲಾಗುತ್ತಿದೆ. ಇದರಿಂದ ಒಟ್ಟು 3.5 ಲಕ್ಷ ಉದ್ಯೋಗ ಸೃಷ್ಟಿಗೆ ಹಾಗೂ ಆರ್ಥಿಕತೆಗೆ 50 ಶತಕೋಟಿ ಡಾಲರ್‌ ಕೊಡುಗೆ ನೀಡಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (BLR ವಿಮಾನ ನಿಲ್ದಾಣ) ಆವರಣದ್ಲಲಿರುವ ಬೆಂಗಳೂರು ವಿಮಾನ ನಿಲ್ದಾಣ ನಗರವನ್ನು ವಿಶ್ವ ದರ್ಜೆಯ ಮಿಶ್ರ-ಬಳಕೆಯ ತಾಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ವಿಮಾನ ನಿಲ್ದಾಣ ನಗರದಲ್ಲಿ ಪ್ರಮುಖವಾಗಿ ವ್ಯಾಪಾರ, ಉದ್ಯಾನವನಗಳು, ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳು, ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಕೇಂದ್ರಗಳು ಮತ್ತು ವಿವಿಧ ಮನರಂಜನಾ ಹಾಗೂ ಆತಿಥ್ಯ ತಾಣಗಳು ತಲೆಯೆತ್ತಲಿದೆ. ಈ ನಗರವು ಸುಸ್ಥಿರ, ಸ್ಮಾರ್ಟ್, ಆಕರ್ಷಕ ನಗರಾಭಿವೃದ್ಧಿಯಿಂದ ಅಂತಾರಾಷ್ಟ್ರೀಯ ಹೆಬ್ಬಾಗಿಲಾಗಿ ಈ ನಗರ ಕಾರ್ಯನಿರ್ವಹಿಸಲು ಸಿದ್ಧವಾಗುತ್ತಿದೆ.

Construction of Business Park of Bangalore Airport City Limited a subsidiary of Bangalore International Airport Limited

ಈ ಬ್ಯುಸಿನೆಸ್ ಪಾರ್ಕ್ ಅನ್ನು 17.7 ಎಕರೆಗಳಲ್ಲಿ ನಿರ್ಮಿಸಲಾಗುತ್ತಿರುವ ಈ ಬಿಸಿನೆಸ್ ಪಾರ್ಕ್, ನಾಲ್ಕು ಬ್ಲಾಕ್‌ಗಳನ್ನು ಒಳಗೊಂಡಿದ್ದು, ಪ್ರತಿ ಬ್ಲಾಕ್‌ 0.5 ಮಿಲಿಯನ್ ಚದರ ಅಡಿ ನಗರ ಅರಣ್ಯದೊಳಗೆ ಮೂಡಿಬರಲಿದೆ. ಬಯೋಫಿಲಿಕ್ ವಿನ್ಯಾಸವು ಸೊಂಪಾದ ಉದ್ಯಾನಗಳು, ಬಾಲ್ಕನಿಗಳು ಮತ್ತು ಹಸಿರಿನಿಂದ ಕೂಡಿರುವ ಸ್ಥಳಗಳನ್ನು ಒಳಗೊಂಡಿದ್ದು, ಈ ಮೂಲಕ ವ್ಯಾಪಾರ ವಹಿವಾಟನ್ನು ಇನ್ನಷ್ಟು ಆಸಕ್ತಿದಾಯಗೊಳಿಸುವ ಉದ್ದೇಶವನ್ನು ಹೊಂದಿದೆ.

ಬಿಎಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ರಾವ್ ಮುನುಕುಟ್ಲ ಮಾತನಾಡಿ, “ಬೆಂಗಳೂರು ವಿಶ್ವದ ಜಿಸಿಸಿ ರಾಜಧಾನಿಯಾಗಿ ಬೆಳೆಯುತ್ತಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಾಹನ ಮತ್ತು ಏರೋಸ್ಪೇಸ್‌ ಕ್ಷೇತ್ರದಲ್ಲಿ ಶೇ. 36ರಷ್ಟು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (GCCs) ಬೆಂಗಳೂರು, ಭಾರತದ ಪ್ರಧಾನ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಬೆಂಗಳೂರು ಏರ್‌ಪೋರ್ಟ್ ಸಿಟಿಯಲ್ಲಿರುವ 2 ಮಿಲಿಯನ್ ಚದರ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬಿಸಿನೆಸ್ ಪಾರ್ಕ್ ಸಾಕಷ್ಟು ನೆಟ್‌ವರ್ಕಿಂಗ್ ಅವಕಾಶಗಳು, ಸುಧಾರಿತ ಮೂಲಸೌಕರ್ಯಗಳು ಹಾಗೂ ಉನ್ನತ ದರ್ಜೆಯ ಸೌಕರ್ಯಗಳೊಂದಿಗೆ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.

ಈ ನಮ್ಮ ಯೋಜನೆಯು ಕರ್ನಾಟಕ ರಾಜ್ಯದ ಪ್ರಸ್ತುತ ಜಿಸಿಸಿ ನೀತಿಯೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ಮೂಲಕ, ಬೆಂಗಳೂರನ್ನು ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಕೇಂದ್ರಬಿಂದುವಾಗಿಸಲಿದೆ. ವಿಮಾನ ನಿಲ್ದಾಣ ನಗರದ ಒಟ್ಟಾರೆ ಅಭಿವೃದ್ಧಿಯ ಶೇ.52 ರಷ್ಟು ಭಾಗವು ವ್ಯಾಪಾರ ಉದ್ಯಾನವನಗಳ (ಬಿಸಿನೆಸ್ ಪಾರ್ಕ್) ಜಾಲವನ್ನು ಹೊಂದಲಿದ್ದು, ಸಹಯೋಗ ಹಾಗೂ ನಾವಿನ್ಯತೆಗೆ ಪ್ರೋತ್ಸಾಹ ಕೊಡಲಿದೆ.

ಇದನ್ನೂ ಓದಿ: Jio Cloud PC : ಮನೆಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲಿದೆ ‘ಜಿಯೋ ಕ್ಲೌಡ್ ಪಿಸಿ’

ಮುಂದಿನ ದಿನಗಳಲ್ಲಿ ತಲೆ ಎತ್ತಲಿರುವ ಏರ್‌ಪೋರ್ಟ್ ವೆಸ್ಟ್ ಮೆಟ್ರೋ ನಿಲ್ದಾಣವು ಈ ಬಿಸಿನೆಸ್ ನ ಅತಿ ಸಮೀಪದಲ್ಲಿದ್ದು, ಬೆಂಗಳೂರಿನ ಸಿಟಿ ಸೆಂಟರ್‌ಗೆ ಸಂಪರ್ಕವನ್ನು ಕಲ್ಪಿಸಲಿದೆ. ಇದರಿಂದ ಉದ್ಯೋಗಿಗಳು, ಸಂದರ್ಶಕರಿಗೂ ಸಹ ವೇಗ ಮತ್ತು ಪರಿಸರ ಸ್ನೇಹಿ ಪ್ರಯಾಣವನ್ನು ಒದಗಿಸಲಿದೆ. ಬೆಂಗಳೂರು ವಿಮಾನ ನಿಲ್ದಾಣ ನಗರವು ಸುಧಾರಿತ ತಂತ್ರಜ್ಞಾನ ಕೇಂದ್ರವನ್ನು ರೂಪಿಸುತ್ತಿದ್ದು, ಇದರಲ್ಲಿ 3D ಮುದ್ರಣ ಸಂಸ್ಥೆ ಮತ್ತು ಹೈಟೆಕ್ ಕೇಂದ್ರ ಪಾಕಶಾಲೆಗಳು ಸೇರಿದಂತೆ ಹಲವು ನಾವಿನ್ಯತೆಯ ಕೇಂದ್ರಬಿಂದುವಾಗಿರಲಿದೆ ಎಂದರು.

ಈ ನಗರದಲ್ಲಿ ಮನರಂಜನೆ ಮತ್ತು ಆತಿಥ್ಯ ತಾಣಗಳು ತಲೆ ಎತ್ತುತ್ತಿದ್ದು, ವಿಮಾನ ನಿಲ್ದಾಣ ಪರಿಸರ ವ್ಯವಸ್ಥೆಯಲ್ಲಿ ಭಾರತದ ಪ್ರಪ್ರಥಮ ಕನ್ಸರ್ಟ್ ಅರೆನಾ, ಸಮಾವೇಶ ಮತ್ತು ಪ್ರದರ್ಶನ ಕೇಂದ್ರಗಳನ್ನು ಸಹ ಈ ಯೋಜನೆ ಒಳಗೊಂಡಿದೆ. ಈಗಾಗಲೇ ಏರ್‌ಪೋರ್ಟ್‌ ಆವರಣದಲ್ಲಿರುವ ಹೋಟೆಲ್‌ ತಾಜ್ ಬೆಂಗಳೂರು ಮತ್ತು ಪ್ರಸ್ತುತ ನಿರ್ಮಾಣ ಹಂತದಲ್ಲಿರುವ 775 ಕೊಠಡಿಗಳ ಕಾಂಬೋ ಹೋಟೆಲ್ (ವಿವಾಂಟಾ & ಜಿಂಜರ್) ಸೇರಿದಂತೆ ಏರ್‌ಪೋರ್ಟ್ ಸಿಟಿಯೊಳಗೆ 5,200 ಹೋಟೆಲ್ ಕೊಠಡಿಗಳನ್ನು ಒಳಗೊಂಡು ಬೃಹತ್‌ ಆತಿಥ್ಯ ತಾಣವಾಗಿ ಹೊರಹೊಮ್ಮಲಿದೆ.

ಏರ್‌ಪೋರ್ಟ್ ಸಿಟಿಯು ಅದ್ಭುತ ವಿನ್ಯಾಸದಿಂದ ರೂಪುಗೊಳ್ಳುತ್ತಿದ್ದು, ಇಡೀ ಆವರಣ ಶಕ್ತಿ-ತಟಸ್ಥವಾಗಿ ಕಾರ್ಯನಿರ್ವಹಿಸಿ, ನವೀಕರಿಸಬಹುದಾದ ಸಂಪನ್ಮೂಲಗಳಿಂದ ನಿರ್ಮಾಣಗೊಳ್ಳುತ್ತಿದ್ದು, ಐಜಿಬಿಸಿ ಯ ಗ್ರೀನ್ ಸಿಟೀಸ್ ಪ್ಲಾಟಿನಂ ಪ್ರಮಾಣೀಕರಣವನ್ನು ಗಳಿಸಿದೆ. ಅಷ್ಟೇ ಅಲ್ಲದೆ, ಬೃಹತ್‌ ಪ್ರಮಾಣದಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲಾಗುತ್ತಿದ್ದು , ಇದರಿಂದ ವಿಮಾನ ನಿಲ್ದಾಣ ನಗರದ ನೀರಿನ ಅಗತ್ಯಗಳನ್ನು ಪೂರೈಸಲಿದೆ, ಈ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯ ಪರಿಸರ ಸ್ನೇಹಿ, ಸುಸ್ಥಿರ ಅಭಿವೃದ್ಧಿ ಮಾರ್ಗದರ್ಶನದ ಜವಾಬ್ದಾರಿ ನಿರ್ವಹಣೆಯ ಧ್ಯೇಯದೊಂದಿಗೆ ಹೊಂದಿಸಲಾಗಿದೆ.

ಇನ್ನು, ಬೆಂಗಳೂರು ವಿಮಾನ ನಿಲ್ದಾಣ ನಗರವು ಅತಿ ನಿರೀಕ್ಷಿತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಬೃಹತ್‌ ಪ್ರಮಾಣದಲ್ಲಿ ವಿಸ್ತರಿಸುತ್ತಿದೆ, ಇದಕ್ಕಾಗಿ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಆಕರ್ಷಿಸುತ್ತಿದ್ದು, ಇದು ರಾಜ್ಯದ ಶೈಕ್ಷಣಿಕ ಮತ್ತು ಆರೋಗ್ಯ ಮೂಲಸೌಕರ್ಯವನ್ನು ಉನ್ನತೀಕರಿಸಲು ಲೈಫ್ ಸೈನ್ಸಸ್ ಪಾರ್ಕ್ ಅನ್ನು ಸ್ಥಾಪಿಸುತ್ತಿದೆ. BIAL ಅಕಾಡೆಮಿ ಮತ್ತು ಏರ್ ಇಂಡಿಯಾ ಅಕಾಡೆಮಿಯಂತಹ ಸಂಸ್ಥೆಗಳು ಮುಂದಿನ ಪೀಳಿಗೆಯ ವಾಯುಯಾನ ಮತ್ತು ಆತಿಥ್ಯ ವೃತ್ತಿಪರರಿಗೆ ತರಬೇತಿ ನೀಡಲಿವೆ.

ಬೆಂಗಳೂರು ವಿಮಾನ ನಿಲ್ದಾಣ ನಗರವು ಸುಸ್ಥಿರ, ನವೀನ ಮತ್ತು ಸಂಪರ್ಕಿತ ನಗರಾಭಿವೃದ್ಧಿಯ ದೃಷ್ಟಿಯನ್ನು ಸಾಕಾರಗೊಳಿಸುತ್ತಿದ್ದು, ಮಿಶ್ರ-ಬಳಕೆಯ ನಗರದ ಯೋಜನೆಗೆ ಜಾಗತಿಕವಾಗಿ ಮಾದರಿಯಾಗಲಿದೆ. ಈ ಪ್ರದೇಶದ ಆರ್ಥಿಕ ಬೆಳವಣಿಗೆಯ ಕೇಂದ್ರಭಾಗದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BLR ವಿಮಾನ ನಿಲ್ದಾಣ) ವಿಶ್ವಾದ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ, ಕಳೆದ ವರ್ಷ 37.5 ದಶಲಕ್ಷ ರನ್ನು ನಿರ್ವಹಿಸಿದೆ. ವಿಮಾನ ನಿಲ್ದಾಣವು 2030 ರ ವೇಳೆಗೆ ತನ್ನ ಸಾಮರ್ಥ್ಯವನ್ನು 90 ದಶಲಕ್ಷ ಪ್ರಯಾಣಿಕರಿಗೆ ವಿಸ್ತರಿಸಲು ಯೋಜಿಸಲಾಗಿದೆ. ಈ ಅಭಿವೃದ್ಧಿ ಬೆಂಗಳೂರಿನ ಪಾತ್ರವನ್ನು ಜಾಗತಿಕ ವ್ಯವಹಾರಗಳಿಗೆ ಮತ್ತು ಸುಧಾರಿತ ಉತ್ಪಾದನೆಗೆ ಪ್ರಮುಖ ಕೇಂದ್ರವಾಗಿ ಮತ್ತಷ್ಟು ಗಟ್ಟಿಗೊಳಿ ಸಲು ಅನುವುಮಾಡಿಕೊಡಲಿದೆ. ವಿಶೇಷವಾಗಿ ಏರೋಸ್ಪೇಸ್ ವಲಯದಲ್ಲಿ, ಏರ್‌ಬಸ್ ಮತ್ತು ಬೋಯಿಂಗ್‌ನಂತಹ ಉದ್ಯಮದ ದೈತ್ಯರು ನಗರದ ನುರಿತ ಉದ್ಯೋಗಿಗಳಿಂದ ಲಾಭ ಪಡೆಯಲಿದ್ದಾರೆ.

Exit mobile version