Site icon Vistara News

Bengaluru Police: ಸಿಟಿ ಸಿವಿಲ್‌ ಕೋರ್ಟ್‌ನಿಂದ ಕೊಲೆ ಆರೋಪಿ ಎಸ್ಕೇಪ್‌! ಸಿನಿಮಾ ಸ್ಟೈಲ್‌ನಲ್ಲಿ ಚೇಸ್‌ ಮಾಡಿದ ಖಾಕಿ

Bengaluru Police

ಬೆಂಗಳೂರು: ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ಗೆ ಕೊಲೆ ಆರೋಪಿಯನ್ನು ಕರೆದುಕೊಂಡು ಬಂದಿದ್ದಾಗ, ಎಸ್ಕೇಪ್‌ ಆಗಲು ಯತ್ನಿಸಿದ್ದಾನೆ. ಪೊಲೀಸರು (Bengaluru Police) ಸಿನಿಮೀಯ ರೀತಿಯಲ್ಲಿ ಚೇಸ್‌ ಮಾಡಿ ಆರೋಪಿಯನ್ನು ಹಿಡಿದಿದ್ದಾರೆ.

ಕೊಲೆ ಆರೋಪಿ ಜೀಪ್ ಇಳಿಯುತ್ತಿದ್ದಂತೆ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದ. ಬಳಿಕ ಮೈಸೂರು ಬ್ಯಾಂಕ್ ಸರ್ಕಲ್‌ವರೆಗೂ ಬೆನ್ನಟ್ಟಿದ್ದ ಪೊಲೀಸರು ಹಿಡಿದಿದ್ದಾರೆ. ಆರೋಪಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಸದ್ಯ ಆರೋಪಿಯನ್ನು ಸೆರೆ ಹಿಡಿದು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಕರೆದೊಯ್ದಿದ್ದಾರೆ.

ಇದನ್ನೂ ಓದಿ: Road Accident : ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದ! ಬೈಕ್‌, ಕಾರುಗಳಿಗೆ ಡಿಕ್ಕಿ ಹೊಡೆದ ಬಿಎಂಟಿಸಿ; ನರಳಾಡಿದ ಸವಾರರು

ಮನೆಗಳ್ಳರನ್ನು ಬೇಟೆಯಾಡಿದ ಪೊಲೀಸರು

ಹುಬ್ಬಳ್ಳಿಯ ಕೇಶ್ವಾಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮನೆಗಳ್ಳನನ್ನು ಬಂಧಿಸಿದ್ದಾರೆ. ನಾಗಶೆಟ್ಟಿಕೊಪ್ಪದ ಶಾಂಡಿಲ್ಯಾಶ್ರಮದ ಬಳಿಯ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಅಶೋಕ ನಗರ ಠಾಣಾ ವ್ಯಾಪ್ತಿಯ ವಿಜಯ ನಗರದಲ್ಲಿ ಹಗಲಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ. ಇದೀಗ ಕೇಶ್ವಾಪುರದ ಮಹಮ್ಮದಅಲಿ ನಾಲಬಂದ ಎಂಬಾತನ ಬಂಧನವಾಗಿದೆ. ಬಂಧಿತನಿಂದ 3.10 ಲಕ್ಷ ರೂ ಮೌಲ್ಯದ 47 ಗ್ರಾಂ ಚಿನ್ನಭರಣ ಮತ್ತು ಒಂದು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಉಪನಗರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ. ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ – ಧಾರವಾಡ ಸೇರಿ ಒಟ್ಟು 19 ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದ.

ಕಿಮ್ಸ್‌ ಆಸ್ಪತ್ರೆಯ ಹಿಂಭಾಗದಲ್ಲಿ ಗಾಂಜಾ ಮಾರಾಟ

ಗಾಂಜಾ ಮಾರಾಟ ಮತ್ತು ಸೇವನೆ ಮಾಡಿದ 17 ಜನರ ಬಂಧನವಾಗಿದೆ. ಈ ಬಗ್ಗೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಉಪ ಆಯುಕ್ತ ಮಹಾನಿಂಗ ನಂದಗಾವಿ ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಿಂಭಾಗದಲ್ಲಿ ಗಾಂಜಾ ಮಾರಾಟ ನಡೆಯುತ್ತಿತ್ತು. ಬಂಧಿತರಿಂದ ಗಾಂಜಾ, ಒಂದು ಬೈಕ್, ಏಳು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿಯೂ ದಾಳಿ ಮಾಡಿ, 9 ಜನರನ್ನು ಬಂಧಿಸಿಲಾಗಿದೆ. ಮಿರ್ಜಾನ ಅಷ್ಪಕ್ ಮುಲ್ಲಾ, ಶಿವಕುಮಾರ, ಇಕ್ಬಾಲ್ ಅಹ್ಮದ, ಆರೀಫ್, ಅಭಿಷೇಕ ದೇವಮಾನೆ, ಅಮೃತ ಹವಳದ, ಮೊಹ್ಮದ ರೆಹಾನ, ಸಾಧಿಕ ಕಿತಾಬ್‌ವಾಲೆ, ಮೆಹಬೂಬಸಾಬ ಡೌಗಿ ಬಂಧಿತರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version