Site icon Vistara News

BJP ಆದ್ಯತೆ ಕೋಮುವಾದವೇ ವಿನಃ ಅಭಿವೃದ್ಧಿಯಲ್ಲ ಎಂದ ಡಿ.ಕೆ. ಶಿವಕುಮಾರ್

congress-fighting-politics-for-peoples-livelyhood-says-dk-shivakumar

ಬೆಂಗಳೂರು : ಬಿಜಿಪಿ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ಕೇವಲ ಕೋಮುವಾದಿ ಅಜೆಂಡಾಗಳಿಗೆ ಹೆಚ್ಚಾಗಿ ಆದ್ಯತೆ ನೀಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುರುವಾರ ತಿಳಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಈಗಾಗಲೇ ಮಳೆಯಿಂದ ಸಾಕಷ್ಟು ಜನ ತತ್ತರಿಸಿ ಹೋಗಿದ್ದರೆ. ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ, ಇರುವ ರಸ್ತೆಗಳನ್ನೂ ಮತ್ತಷ್ಟು ಅಗೆದು ಹಾಳು ಮಾಡುತ್ತಿದ್ದಾರೆಯೇ ವಿನಃ ಯಾವುದೇ ಮೂಲಭೂತ ಸೌಕರ್ಯವನ್ನು ನೀಡುತ್ತಿಲ್ಲ. ಬದಲಾಗಿ ಈಗ ಜನರ ಹತ್ತಿರ ಹೋಗಿ ಭೇಟಿ ನೀಡಿ ಸಾಂತ್ವಾನ ಮಾತುಗಳಷ್ಟೇ ಹೇಳಿ ಬರುತ್ತಿದ್ದಾರೆ ಎಂದರು. 

ಇದನ್ನೂ ಓದಿ | ನಮ್ಮದು ಡಿ.ಕೆ. ಶಿವಕುಮಾರ್‌ ಕುಟುಂಬ ಕೆಟ್ಟೋಯ್ತ?: ಆರೋಪಕ್ಕೆ ಅಶ್ವತ್ಥನಾರಾಯಣ ಆಕ್ರೋಶ

ಕೇಂದ್ರ ಹಾಗೂ ರಾಜ್ಯ ಬಜೆಟ್‌ ಮಂಡನೆಯಲ್ಲಿಯೂ ಕರ್ನಾಟಕಕ್ಕೆ  ಯಾವುದೇ ಸ್ಪೆಷಲ್‌ ಪ್ಯಾಕೇಜ್‌ ನೀಡಿಲ್ಲ. ಕೇವಲ ಪ್ಲಾನಿಂಗ್‌ ಮತ್ತು ಯೋಜನೆಗಳನ್ನು ತಂದಿದ್ದಾರೆಯೇ ಹೊರತು ಅನುಷ್ಠಾನಕ್ಕೆ ಮಾತ್ರ ಯಾವುದೂ ಬರುತ್ತಿಲ್ಲ ಎಂದರು.

ಈ ಹಿಂದೆ ಎಚ್‌.ಡಿ.. ಕುಮಾರಸ್ವಾಮಿ ಕಾಂಗ್ರೆಸ್‌ ಅಭಿವೃದ್ಧಿ ಕಾರ್ಯಗಳ ಬಗ್ಗೆ ಆರೋಪ ಮಾಡಿರುವ ಕುರಿತಾಗಿ ಮಾತನಾಡಿ, ಮೇಕೆದಾಟು ಯೋಜನೆಯಲ್ಲಿ ಕುಡಿಯುವ ನೀರಿಗೂ ಕೂಡ ನಾವು ಹೋರಾಟ ಮಾಡಿದ್ದೇವೆ. ಬೆಂಗಳೂರಿನ ಜನರಿಗೆ ನೀರಿಗೋಸ್ಕರ ಸಾಕಷ್ಟು ಧ್ವನಿಯನ್ನು ಎತ್ತಿದ್ದೇವೆ. ಯಾವುದೇ ಪಕ್ಷಗಳು ಮಾಡಿರದ ಬದಲಾವಣೆಯನ್ನು ನಮ್ಮ ಪಕ್ಷ ಮುದೊಂದು ದಿನ ನೀಡಲಿದೆ. ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ನಮ್ಮದೇ ಆದ ಕಲ್ಪನೆಯಲ್ಲಿ ಬೆಂಗಳೂರನ್ನು ಬೆಳೆಸುತ್ತೇವೆ ಎಂದರು.
ಇದನ್ನೂ ಓದಿ | ಕರಪ್ಷನ್ನು, ಕೆಮ್ಮು ಎಲ್ಲ ಯಾವತ್ತಿದ್ದರೂ ಹೊರಗೆ ಬರಲೇಬೇಕು ಎಂದ ಡಿ.ಕೆ. ಶಿವಕುಮಾರ್‌

Exit mobile version