ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೆ ಓರ್ವ ಮಹಿಳೆ ಕಾರಣ ಎಂದು ತಿಳಿದುಬಂದಿದೆ. ಕೆ.ಆರ್. ಪುರಂನ ರೇಖಾ ಎಂಬ ಮಹಿಳೆ ಅನಂತರಾಜು ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರೆಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅನಂತರಾಜು ಪತ್ನಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೇರೋಹಳ್ಳೀ ವಾರ್ಡ್‌ನಲ್ಲಿ ಬಿಜೆಪಿ ಮುಖಂಡರಾಗಿದ್ದ ಅನಂತರಾಜು ಬ್ಯಾಡರಹಳ್ಳಿಯ ಮನೆಯಲ್ಲಿ ನೇಣುಬಿಗಿದುಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಏನೆಂದು ತಿಳಿದುಬಂದಿರಲಿಲ್ಲ. ಇದೀಗ ಪ್ರಕರಣದಲ್ಲಿ ಅನೇಕ ವಿಚಾರ ಹೊರಬರುತ್ತಿದೆ.
ಇದನ್ನೂ ಓದಿ | ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ, ಗಂಡನೇ ಕೊಲೆಗಾರ ಎಂದ ಕುಟುಂಬ
ಬಿಜೆಪಿ ಮುಖಂಡ ಅನಂತರಾಜು ಅವರಿಗೆ ರೇಖಾ ಎಂಬ ಮಹಿಳೆ ಬ್ಲಾಕ್ ಮೇಲ್ ಮಾಡಿದ್ದರೆಂದು ತಿಳಿದುಬಂದಿದೆ. ಅನಂತರಾಜು ಹಾಗೂ ರೇಖಾ ಒಟ್ಟಿಗಿದ್ದ ಒಂದು ಖಾಸಗಿ ಫೋಟೋವನ್ನು ವೈರಲ್ ಮಾಡುವುದಾಗಿ ಆಕೆ ಹೆದರಿಸಿದ್ದಳು. ಅಲ್ಲದೆ, ರಾಜಕೀಯದಲ್ಲಿ ಅನಂತರಾಜುವನ್ನು ನಾಶ ಮಾಡುವುದಾಗಿ ಧಮ್ಕಿ ಹಾಕಿದ್ದರು. ಅವರ ಹೆಸರಿಗೆ ಕಳಂಕ ತರುವ ಕಾರ್ಯಕ್ಕೆ ಮುಂದಾದ ರೇಖಾ ಅವರ ಬೆದರಿಕೆಗೆ ಅನಂತರಾಜು ಹೆದರಿದ್ದರು. ಈ ಬಗ್ಗೆ ಮನನೊಂದ ಅನಂತರಾಜು ನೇಣು ಹಾಕಿಕೊಂಡಿದ್ದರು ಎಂದು, ಅನಂತರಾಜು ಅವರ ಪತ್ನಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರೇಖಾ ಅವರ ಹುಡುಕಾಟದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಎಂಬಿಎ ಪದವೀಧರೆ ವಿಷ ಸೇವಿಸಿ ಆತ್ಮಹತ್ಯೆ, ಇಷ್ಟು ಕಲಿತರೂ ಕೆಲಸ ಸಿಗಲಿಲ್ಲವೆಂಬ ಬೇಸರ