ಬೆಂಗಳೂರು: ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ (Blast In Bengaluru) ಬ್ಲಾಸ್ಟ್ ಪ್ರಕರಣದ ಬಳಿಕ ಬೆಂಗಳೂರಲ್ಲಿ ಹೈ ಅಲರ್ಟ್ ಆಗಿರುವಂತೆ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆ (rameshwaram cafe blast) ನೀಡಿದ್ದಾರೆ. ಜತೆಗೆ ಜನರು ಇಂತಹ ಸಮಯದಲ್ಲಿ ಆತಂಕಕ್ಕೆ ಒಳಗಾಗದೇ, ಅನುಮಾನಾಸ್ಪದ ವ್ಯಕ್ತಿಯನ್ನು ಕಂಡರೆ, ಯಾವುದಾರೂ ವಸ್ತು ಅಥವಾ ಬ್ಯಾಗ್ ಇರುವುದು ಕಂಡರೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.
ಯಾರ ಮೇಲಾದರೂ ಸಂಶಯ ಬಂದರೆ ಕೂಡಲೇ 122ಗೆ ಸಂಖ್ಯೆಗೆ ಕರೆ ಮಾಡಿ, ಪೊಲೀಸರಿಗೆ ವಿಚಾರವನ್ನು ಮುಟ್ಟಿಸಿ. ನಾವು ನಿಮ್ಮನ್ನು ತ್ವರಿತವಾಗಿ ತಲುಪುತ್ತೇವೆ ಎಂದು ಕರ್ನಾಟಕ ರಾಜ್ಯ ಪೊಲೀಸ್‌ನ ಎಕ್ಸ್ ಖಾತೆಯಿಂದ ಮಾಹಿತಿ ನೀಡಿದ್ದಾರೆ.
ದಿ ರಾಮೇಶ್ವರಂ ಕೆಫೆಯಲ್ಲಿ ಕಡಿಮೆ ತೀವ್ರತೆಯ ಬಾಂಬ್ ಅನ್ನು ಸ್ಫೋಟಿಸಿರುವುದು ಹಲವು ಅನುಮಾನವನ್ನು ಮೂಡಿಸಿದೆ. ಪಕ್ಕಾ ನುರಿತ ಟೆರರಿಸ್ಟ್‌ಗಳಿಂದಲೇ ಈ ಕೃತ್ಯ ನಡೆದಿರುವ ಶಂಕೆ ಇದೆ. ನಗರ ಪೊಲೀಸರ ಗಮನವನ್ನು ಒಂದೇ ಕಡೆ ಕೇಂದ್ರಿಕೃತವಾಗುವಂತೆ ಈ ರೀತಿ ಹುನ್ನಾರ ಮಾಡಿದ್ದರಾ ಎಂಬ ಪ್ರಶ್ನೆ ಉದ್ಭವಿಸಿದೆ. ಕಡಿಮೆ ತೀವ್ರತೆಯ ಬಾಂಬ್ ಬಳಸಿ ಗಮನ ಈ ಕಡೆ ಇರುವಂತೆ ನೋಡಿಕೊಂಡು ನಂತರ ದೊಡ್ಡ ಬ್ಲಾಸ್ಟ್‌ಗೆ ಪ್ಲಾನ್ ಮಾಡಿರುವ ಶಂಕೆ ಇದೆ.
ಇದನ್ನೂ ಓದಿ: Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ 3 ತಿಂಗಳಿಂದಲೇ ಸ್ಕೆಚ್? ಮೊಬೈಲ್ ಬಳಸದೇ ಕೃತ್ಯ!
ಟ್ರಯಲ್ ಬ್ಲಾಸ್ಟ್ ಶಂಕೆ
ದಿ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಕ್ಕೂ ಮುನ್ನ ಟ್ರಯಲ್ ಬ್ಲಾಸ್ಟ್ ಮಾಡಿರುವ ಸಾಧ್ಯತೆ ಇದೆ. ಶಂಕಿತ ಬಾಂಬರ್ ತಂಡದಿಂದ ನಿರ್ಜನ ಹಾಗೂ ಕಾಡಿನಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಿರುವ ಶಂಕೆ ಇದೆ. ಆತ್ಯಾಧುನಿಕ ಟೈಮರ್, ತಂತಿ, ನಟ್ ಹಾಗೂ ಬೋಲ್ಟ್, ಡಿಟೋನೇಡರ್ ಬಳಸಿ. ಎಲ್ಲ ರೀತಿಯ ಪರೀಕ್ಷೆಯನ್ನು ನಡೆಸಿಯೇ ಕೆಫೆಯಲ್ಲಿ ಸ್ಫೋಟ ಮಾಡಿರಬಹುದು ಎನ್ನಲಾಗಿದೆ. ಬಾಂಬ್ ಪರೀಕ್ಷೆ ಇಲ್ಲದೇ ಏಕಾ ಏಕಿ ತಂದಿಟ್ಟಿರುವ ಸಾಧ್ಯತೆ ಕಡಿಮೆ ಇದೆ.
ಬ್ಲಾಸ್ಟ್ ಟೈಮ್ ಲೈನ್ ಹೀಗಿದೆ.
ಮಾರ್ಚ್ 1 2024ರ ಬೆಳಗ್ಗೆ 11:30ಕ್ಕೆ ಕೆಫೆಯೊಳಗೆ ಶಂಕಿತ ಪ್ರವೇಶಿಸಿದ್ದ. ನಂತರ 11:37ಕ್ಕೆ ರವೆ ಇಡ್ಲಿ ಪಡೆದಿದ್ದ.
11:44ಕ್ಕೆ ಹ್ಯಾಂಡ್ ವಾಶ್ ಬೆಸನ್ ಬಳಿ ಬಾಂಬ್ ಇದ್ದ ಬ್ಯಾಗ್ ಇಟ್ಟಿದ್ದ.
11:45ಕ್ಕೆ ಕೆಫೆಯಿಂದ ಹೊರಟ ಶಂಕಿತ
11:50ಕ್ಕೆ ಕೆಫೆ ಪಕ್ಕದಲ್ಲೇ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆ
11:51ಕ್ಕೆ ಬಿಎಂಟಿಸಿ ವೋಲ್ವೋ ಬಸ್ ಹತ್ತಿ ಪರಾರಿ
12:56ಕ್ಕೆ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ