ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಬಾಂಬ್ ಬೆದರಿಕೆ ಇ-ಮೇಲ್ (Bomb Threat) ಬಂದಿದೆ. ಕಾಲೇಜಿಗೆ Sattanathapuram Be Shekhar ಎಂಬ ಇ-ಮೇಲ್ ಐಡಿಯಿಂದ ದುಷ್ಕರ್ಮಿಗಳು ಸಂದೇಶ ಕಳಿಸಿದ್ದಾರೆ. ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಕಾಲೇಜಿಗೆ ಬಾಂಬ್ ಬೆದರಿಕೆ ಮಸೇಜ್ ಕಳಿಸಿದ್ದಾರೆ. ಇ- ಮೇಲ್ ನೋಡಿದ ಕೂಡಲೇ ಕಾಲೇಜು ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಿಎಂಎಸ್ ಕಾಲೇಜಿಗೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಹಾಗೂ ಹನುಮಂತನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Sattanathapuram Be Shekhar ಎಂಬ ಇ- ಮೇಲ್ ಐಡಿಯಿಂದ ಬಾಂಬ್ ಬೆದರಿಕೆ ಬಂದಿದ್ದು, ಸುಧಾರಿತ ಹೈಡ್ರೋಜನ್ IEDs ಇಟ್ಟಿದ್ದು, 5 ಗಂಟೆ ಒಳಗೆ ಕಾಲೇಜು ಬಿಟ್ಟು ಹೊರಹೋಗುವಂತೆ ಸಂದೇಶ ಕಳಿಸಿದ್ದಾರೆ. ಬಿಎಂಎಸ್ ಕಾಲೇಜ್ ಅಲ್ಲದೆ ಬಿಐಟಿ, ಎಂಎಸ್ ಆರ್ ಐಟಿ ಕಾಲೇಜುಗಳಿಗೂ ಬಾಂಬ್ ಬೆದರಿಕೆ ಹಾಕಿದ್ದಾರೆ. ದಕ್ಷಿಣ ವಿಭಾಗದ ಮೂರು ಕಾಲೇಜುಗಳಿಗೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯ ಸಂದರ್ಭದಲ್ಲಿ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಜತೆಗೆ ಕೇಂದ್ರ ವಿಭಾಗದ ಮತ್ತೊಂದು ಕಾಲೇಜಿಗೂ ಬಾಂಬ್ ಬೆದರಿಕೆ ಬಂದಿದೆ. ಪ್ರತಿಷ್ಠಿತ ಎಂಎಸ್ ರಾಮಯ್ಯ ಕಾಲೇಜಿಗೂ ಕಿಡಿಗೇಡಿಗಳು ಬಾಂಬ್ ಬೆದರಿಕೆ ಇ ಮೇಲ್ ಮಾಡಿದ್ದಾರೆ. ಸ್ಥಳಕ್ಕೆ ಸದಾಶಿವನಗರ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.